ಉತ್ತಮ ಮಳೆ- ಬೆಳೆಗೆ, ಗಜಾಪುರ ಗಂಗಾಮತಸ್ಥರಿಂದ  ಗಂಗಾಮಾತೆಗೆ ಪೂಜೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.24 :- ಸಮೀಪದ ಗಜಾಪುರ ಗ್ರಾಮದಲ್ಲಿ ಗಂಗಾಮತಸ್ಥರು ಹಾಗೂ ಗ್ರಾಮಸ್ಥರು ಕಾರಹುಣ್ಣಿಮೆ ಪ್ರಯುಕ್ತ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು  ಗಜಾಪುರದಲ್ಲಿ ಸಡಗರ ಸಂಭ್ರಮದ  ಗಂಗಾಮಾತೆ ಪೂಜೆ ಕಾರ್ಯಕ್ರಮಃ ಗಂಗಾಮತಸ್ಥರು ಗ್ರಾಮಸ್ಥರಿಂದ ವಿಶೇಷ ಪೂಜೆ
 ಗಂಗಾಮಾತೆಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಗಂಗೆಯ ಹಬ್ಬ ಆಚರಿಸಿದರು.
ಗ್ರಾಮದ ಶ್ರೀ ಗಂಗಾಮಾತೆ ದೇವಸ್ಥಾನದಿಂದ ಮೆರವಣಿಗೆ ಮೂಲಕ ಮಹಿಳೆಯರು,ಗ್ರಾಮಸ್ಥರು ಕೂಡ್ಲಿಗಿ ರಸ್ತೆಯ ಕಲ್ಲುಬಾವಿಯವರೆಗೆ ನಡೆದು ನಂತರ ಅಲ್ಲಿ ಗಂಗಾಪೂಜೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಗಂಗಾಮಾತೆಯ ಪಾದಗಟ್ಟೆಗೆ ಭಕ್ತರು ಪೂಜೆ, ಹರಕೆ ಸಲ್ಲಿಸುವ ಮೂಲಕ ಗಂಗಾಮಾತೆಗೆ ಪೂಜೆ ಮಹಿಳೆಯರು ಪೂಜೆ ಸಲ್ಲಿಸಿದರು.
ನಂತರ ಮೆರವಣಿಗೆ ಮೂಲಕ ಗಂಗಾಮಾತೆ ದೇವಸ್ಥಾನಕ್ಕೆ ಬರಲಾಯಿತು. ಗಂಗಾಮಾತೆಯ ದೇವಸ್ಥಾನದಲ್ಲಿಯೂ ಪೂಜೆ ಸಲ್ಲಿಸುವ ಮೂಲಕ ಅಲ್ಲಿಯೂ ಧಾರ್ಮಿಕ ವಿಧಿ ವಿಧಾನಗಳ ಪೂಜಾ ಕೈಂಕರ್ಯ ನೆರವೇರಿತು. ನಂತರ ಗ್ರಾಮದ ಮಹಿಳೆಯರು ಶ್ರೀಗಂಗಾಮಾತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಭಕ್ತಿ ಅರ್ಪಿಸಿದರು. ಭಕ್ತರು ಈ ವರ್ಷ ಮಳೆ ಚೆನ್ನಾಗಿ ಬರಲಿ, ಫಸಲು ಹೆಚ್ಚಾಗಲಿ ಎಂದು ಶ್ರೀ ಗಂಗಾಮಾತೆಯನ್ನು ಬೇಡಿಕೊಂಡರು.
ಈ ಸಂದರ್ಭದಲ್ಲಿ ಗಂಗಾಮತಸ್ಥರ ಮುಖಂಡರಾದ ಗಾಳೆಪ್ಪನವರ ವೆಂಕಟೇಶ್,  ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ ನ ಅಧ್ಯಕ್ಷ ಬಾರಿಕರ ಮಂಜುನಾಥ, ಕಾರ್ಯದರ್ಶಿ ಗಾಳೆಪ್ಪನವರ ಭೀಮಪ್ಪ, ಬಿ.ಜೆ.ಆಂಜನೇಯ, ತಿಮ್ಮಲಾಪುರ ಹುಲುಗಪ್ಪ,  ಗ್ರಾ.ಪಂ.ಮಾಜಿ ಸದಸ್ಯ ಬೆಳದೇರಿ ಮಲ್ಲಿಕಾರ್ಜುನ, ದನಕಾಯವ ಗಾಳೆಪ್ಪ, ನಾಣ್ಯಾಪುರ ಅಂಜಿನಪ್ಪ, ಬಂಡ್ರಿ ಎರ್ರಿಸ್ವಾಮಿ,   ಗುಂಡಪ್ಪನವರ ಹನುಮಂತಪ್ಪ, ಬಾರಿಕರ ಕೊಟ್ರಪ್ಪ, ಶ್ಯಾಮನೂರು ಹನುಮಂತಪ್ಪ, ಬಾರಿಕರ ಚಿಕ್ಕಪ್ಪ,  ಬಾರಿಕರ ವಿಶ್ವನಾಥ, ನೀರಗಂಟಿ ಪ್ರಕಾಶ್, ಗೊಲ್ಲರಹಳ್ಳಿ ನಾಗರಾಜ, ದೊಡ್ಡಗೂಳೆಪ್ಪನವರ ವಿಶ್ವನಾಥ, ಗಾಳೆಪ್ಪನವರ ಗೋವಿಂದಪ್ಪ, ನಾಗರಾಜ, ಜೋಗಿ ಮಂಜು, ದೊಡ್ಡಮಂಜ, ನಿಡುಗುರ್ತಿ ರಾಜ, ತಿಮ್ಮಲಾಪುರ ರಮೇಶ ಸೇರಿದಂತೆ ಗಜಾಪುರ ಗ್ರಾಮದ ಗಂಗಾಮತಸ್ಥರು ಹಾಗೂ ಗ್ರಾಮದ ಮುಖಂಡರು ಪೂಜೆ ಕಾರ್ಯದಲ್ಲಿ ಭಾಗವಹಿಸಿದ್ದರು.