ತಿಳಿದು ಮಾಡುವ ಸತ್ಕಮ9ಗಳು ಶ್ರೇಷ್ಠ
ಸತ್ತೂರು,ಜೂ.24: ಶಾಸ್ತ್ರದ ವಿಧಿ, ವಿಧಾನ ತಿಳಿಯದೆ ಯಾರು ಶ್ರದ್ಧಾ ಭಕ್ತಿಯಿಂದ ಅನೇಕ ಕರ್ಮಗಳನ್ನು ಮಾಡುತ್ತಾರೆ, ಅವರ ಗತಿ ಏನು? ಅವರನ್ನು ಭಕ್ತರು ಎಂದು ಒಪ್ಪಿಕೊಳ್ಳಬಹುದೇ, ಅವರು ಮಾಡಿದ ಕರ್ಮಗಳು ಫಲಕಾರಿಯಾಗಿ ಸ್ವೀಕಾರವಾಗುತ್ತವೆಯೆ, ಮುಂತಾದ ಶ್ರೀ ಕೃಷ್ಣಾರ್ಜುನ ಪ್ರಶ್ನೋತ್ತರ ರೂಪ ಸಂವಾದವೇ, ವಿವೇಚನೆಯೆ, ಭಗವದ್ಗೀತೆಯ 17ನೇ ಅಧ್ಯಾಯ ಶ್ರದ್ಧಾತ್ರಯ ವಿಭಾಗ ಯೋಗ. ಈ ವಿಷಯ ಕುರಿತು ಶ್ರೀಮದಾಚಾರ್ಯರು ಕೂಡ ಗೀತಾ ತಾತ್ಪರ್ಯದಲ್ಲಿ ತಿಳಿಸಿದಂತೆ ಸಕಲ ಜೀವರ ಸ್ವಾಭಾವಿಕ ಗುಣಗಳಾದ ಸತ್ಕರ್ಮ ಹಾಗೂ ಅಸತ್ಕ್ರಮಗಳ ಬಗ್ಗೆ ಕೂಡ ಸುಂದರವಾಗಿ ತಿಳಿಸಿರುತ್ತಾರೆ ಎಂದು ಪಂ. ಪುಷ್ಕರ್ ಆಚಾಯ9 ಶಿರಹಟ್ಟಿಯವರು ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ನಡೆದ ಭಗವದ್ಗೀತಾ ಅಭಿಯಾನ 17ನೇ ಅಧ್ಯಾಯವಾದ ಶ್ರ ದ್ದಾತ್ರಯ ವಿಭಾಗ ಯೋಗದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ನಮ್ಮೆಲ್ಲರ ಪ್ರತಿನಿಧಿಯಾದ ಅರ್ಜುನನ ಪ್ರಶ್ನೆಗೆ ಶ್ರೀ ಕೃಷ್ಣ ಪರಮಾತ್ಮನು ಉತ್ತರಿಸುತ್ತಾ, ಸಮಸ್ತ ಜಗತ್ತಿನ ಪ್ರಾಣಿ ಪ್ರಪಂಚದಲ್ಲಿ ಜೀವರ ಸ್ವಭಾವವನ್ನು ಆಧರಿಸಿ ಸಾತ್ವಿಕರು ರಾಜಸರು ಹಾಗೂ ತಾಮಸ ಗುಣದವರು ಎಂದು ವಿಭಾಗ ಮಾಡಿರುತ್ತಾನೆ. ಸಾಮಾನ್ಯವಾಗಿ ಸಾತ್ವಿಕರು ದೇವರಲ್ಲಿ , ಧರ್ಮದಲ್ಲಿ ನಂಬಿಕಸ್ತರು. ರಾಜಸ ಗುಣದವರು ಯಕ್ಷ, ರಾಕ್ಷಸರಲ್ಲಿ ನಂಬಿಕಸ್ತರು ಮತ್ತು ತಾಮಸ ಗುಣದವರು ಮಾಯಾ ಭೂತ ಪ್ರೇತ, ಪಿಶಾಚಾದಿಗಳಲ್ಲಿ ನಂಬಿಕೆ ಹೊಂದಿರುತ್ತಾರೆ. ಈ ತ್ರಿವಿಧ ಬಗೆಯ ಸಾತ್ವಿಕರ, ರಾಜಸ ಹಾಗೂ ತಾಮಸ ಗುಣದವರ ಪೂಜಾ ಪದ್ಧತಿ ದಾನದ ಕ್ರಮ, ತಪಸ್ಸಿನ ಬಗೆ, ಯಜ್ಞ ಹಾಗೂ ಆಹಾರ ಕ್ರಮಗಳು ಕೂಡ ಬೇರೆ ಬೇರೆಯಾಗಿರುತ್ತದೆ. ಅದರ ಅನುಗುಣವಾಗಿ ಅವರನ್ನ ಸಾತ್ವಿಕರು ರಾಜಸ ತಾಮಸ ಗುಣದವರು ಎಂದು ಊಹಿಸಬಹುದು. ಯಾರು ಶಾಸ್ತ್ರದ ವಿಧಿ ವಿಧಾನ ತಿಳಿಯದೆ ಕರ್ಮಗಳನ್ನು ಆಚರಿಸಿದರೇ, ಅದು ಕೇವಲ ಮೂಢನಂಬಿಕೆಯನ್ನುತ್ತಾರೆ. ಆದ ಕಾರಣ ನಾವೆಲ್ಲರೂ ಶಾಸ್ತ್ರದ ವಿಧಿ ವಿಧಾನ ತಿಳಿದುಕೊಂಡು ಸತ್ಕರ್ಮಗಳನ್ನು ಮಾಡುವುದು ಶ್ರೇಷ್ಠ ಕಾರ್ಯವೆಂದು ಶ್ರೀಕೃಷ್ಣ ಪರಮಾತ್ಮ ಅರ್ಜುನನ ನೆಪ ಮಾಡಿಕೊಂಡು, ನಮ್ಮೆಲ್ಲರಿಗೆ ಉತ್ತಮವಾದ ಸಂದೇಶವನ್ನು ಕೊಟ್ಟಿರುತ್ತಾನೆ ಎಂದು ಲೌಕಿಕ ಉದಾಹರಣೆಗಳೊಂದಿಗೆ ಸುಂದರವಾಗಿ ಬಣ್ಣಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯವರಿಂದ ಸಂಗೀತ ಕಾರ್ಯಕ್ರಮ ಹಾಗೂ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ ಜೋಷಿ, ಹನುಮಂತ ಪುರಾಣಿಕ, ಡಾ. ಶ್ರೀನಾಥ, ಬದರಿನಾಥ ಬೆಟಿಗೇರಿ, ಗೋಪಾಲಾಚಾಯ9 ಹರಿಹರ, ಆನಂದ ದೇಶಪಾಂಡೆ , ಅಶೋಕ ಬಹದ್ದೂರ್ ದೇಸಾಯಿ, ವೆಂಕಟೇಶ ಕುಲಕರಣಿ, ರಮೇಶ್ ಅಣ್ಣಿಗೇರಿ, ಪ್ರಮೋದ ಸಿರುಗುಪ್ಪಿ , ಎಸ್.ಎಂ ಜೋಶಿ, ಪ್ರಕಾಶ್ ಬಹದ್ದೂರ ದೇಸಾಯಿ, ಗಿರೀಶ್ ಪಾಟೀಲ, ವಾದಿರಾಜ ಲಕ್ಷ್ಮೇಶ್ವರ, ಸಿ.ಕೆ ಕುಲಕರ್ಣಿ, ಸಂಜೀವ್ ಗೊಳಸಂಗಿ ಪಾಂಡುರಂಗ ಕುಲಕರ್ಣಿ, ಅನೀಲ್ ಹರಿಹರ, ಪ್ರಕಾಶ್ ದೇಸಾಯಿ ಉಪಸ್ಥಿತರಿದ್ದರು.