ಕೃಷಿ ಭೂಮಿ ಉಳಿವಿಗಾಗಿ ಜನ ಜಾಗೃತಿ ಜಾಥಾ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.24 ಪಟ್ಟಣ ಸೇರಿದಂತೆ ಸುತ್ತ ನಾಲ್ಕುಗ್ರಾ ಪಂ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂ ಮಾರಾಟ ತಡೆಗಟ್ಟಲು ಕೃಷಿ ಭೂಮಿಗಾಗಿ ನಾವು…ಎಂಬ ಸಮಿತಿಯಿಂದ  ನಿರಂತರ 7 ದಿನಗಳ ಕಾಲ ಜನಜಾಗೃತಿ  ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು  .
 ಕೃಷಿ ಭೂಮಿ ಉಳಿವಿಗಾಗಿ ನಾವು … ಸಮಿತಿಯ ಬುಡ್ಡಿ ಬಸವರಾಜ್  ನೇತೃತ್ವದಲ್ಲಿ ತಾಲೂಕು ಕೇಂದ್ರದಿಂದ 10 ಕಿ.ಮೀ ವ್ಯಾಪ್ತಿವರೆಗೆ ಹಸಿರು ವಲಯವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ  ಹೋರಾಟದ ಭಾಗವಾಗಿ ಕೃಷಿ ಭೂಮಿ ಉಳಿಸುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ “ರೈತ ಧ್ವನಿ” ಬೀದಿ ನಾಟಕ ಪ್ರದರ್ಶಿಸುವ ಮೂಲಕ ಜನಮನ ಗೆದ್ದಿದೆ. ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಮಸಾರಿ ನೆಲ್ಕುದ್ರಿ  ಇವರ ನೇತೃತ್ವದಲ್ಲಿ ತಾಲೂಕಿನ ಬ್ಯಾಸಿಗಿದೇರಿ . ಕಡಲಬಾಳು. ವಲ್ಲಾಭಪುರ  . ಮಾಲವಿ .ಗ್ರಾ ಪಂ ವ್ಯಾಪ್ತಿಯಲ್ಲಿ ಸಂಚರಿಸಿ ರೈತರಿಗೆ ಕೃಷಿ ಭೂಮಿಯ ಮಹತ್ವ ಸಾರುವಂತೆ ಮತ್ತು ಕೃಷಿ ಭೂಮಿ ಉಳಿಸುವ ಬಗ್ಗೆ ಜಾಗೃತಿ ಮೂಲಕ ಯಶಸ್ವಿಗೊಳಿಸಲಾಯಿತು
 ಕಳೆದ ಏಳು ದಿನಗಳಿಂದ ಜಾಗೃತಿ ಜಾಥಾ  ವಿವಿಧ ಹಳ್ಳಿಗಳಲ್ಲಿ ಬೀದಿ ನಾಟಕ ಪ್ರದರ್ಶನ ಮಾಡುವುದು ಮತ್ತು ಕೃಷಿ ಭೂಮಿ ಬಗ್ಗೆ ಮಹತ್ವ ಸಾರುವ ಉಪನ್ಯಾಸಗಳನ್ನು ನೀಡುವ ಮೂಲಕ ಸಂಚರಿಸಿದೆ. ರೈತರ ಧ್ವನಿ ಎಂಬ ನಾಟಕದಲ್ಲಿ ಭಾಗವಹಿಸಿದ ಕಲಾವಿದರಾದ ಎಂ ಮಹಾಂತೇಶ್. ಹನುಮಯ್ಯ. ಬಂಡಿಹಳ್ಳಿ ಹುಲುಗಪ್ಪ ಜಿ.ಕೆ.ಮೌನೇಶ್. ಮಮತಮ್ಮ ತುಮಕೂರು. ದಿವ್ಯ p.ಮಲ್ಲೇಶ್ ಮಾಲ್ವಿ. ರವಿ ಬಂಡಿಹಳ್ಳಿ. ಶಿವರಾಜ ಲೆಕ್ಕದ. ಶಿವಮೂರ್ತಿ ಎಚ್ ಪಕೀರಪ್ಪ. ಭಾಗವಹಿಸಿದರು