ಯುವ ಪೀಳಿಗೆಗೆ ಶ್ಯಾಮಪ್ರಸಾದ ಮುಖರ್ಜಿ ಆದರ್ಶ ದಾರಿದೀಪ
ಬಾಗಲಕೋಟೆ,ಜೂ.24: ಬಾಲ್ಯದಲ್ಲಿಯೇ ದೇಶಪ್ರೇಮಿಯಾಗಿ ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ಚೇತನ ಡಾ.ಶ್ಯಾಮ ಪ್ರಸಾದ ಮುಖರ್ಜಿಅವರು ಇಂದು ಯುವಪೀಳಿಗೆಗೆ ಆದರ್ಶ ದಾರಿದೀಪವಾಗಿದ್ದಾರೆ. ದೇಶ ಪ್ರೇಮದ ಮಹನೀಯರನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಮುಂದೆಸಾಗಬೇಕೆಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ್
ಅವರು ಬಿಜೆಪಿ ನಗರ ಮಂಡಲವತಿಯಿಂದ ನಗರದ ಶಿವಾನಂದಜೀನ್‍ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ರಾಷ್ಟ್ರೀಯತಿಯ ಹರಿಕಾರ ಡಾ.ಶ್ಯಾಮಪ್ರಸಾದ ಮುಖರ್ಜಿಯವರ ಪುಣ್ಯಸ್ಮರಣೆ ಹಾಗೂ ಜಗನ್ನಾಥರಾವ್ ಜೋಷಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಮುಖರ್ಜಿ ಅವರ ಭಾವಚಿತ್ರಕ್ಕೆ ಪು?À್ಪ ನಮನ ಸಲ್ಲಿಸಿ ಮಾತನಾಡಿದರು.
ಪ್ರಸ್ತಾವಿಕವಾಗಿ ಬಿಟಿಡಿಎ ಮಾಜಿ ಸದಸ್ಯ ಶಿವಾನಂದ ಟವಳಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಭಾಗಿಯ ಸಹ ಪ್ರಭಾರಿಗಳಾದ ಬಸವರಾಜ ಯಂಕಂಚಿ, ಮಂಡಲದ ಅಧ್ಯಕ್ಷರಾದ ಬಸವರಾಜ ಹುನುಗುಂದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಹಂಚಿನಾಳ, ಕ್ಯಾತ ವೈದ್ಯರಾದ ಡಾ. ಎಮ್.ಎಸ್ ದಡ್ಡೆನ್ನವರ,ಉಪಾಧ್ಯಕ್ಷರುಗಳಾದ ನೀಲಪ್ಪ ಬೇವೂರ, ಕಪ್ಪಯ್ಯ ಮುತ್ತಿನಮಠ, ರಾಘವೇಂದ್ರ ಕುಲಕರ್ಣಿ, ಆನಂದ ದರೆನ್ನವರ,ಧಶರತ ಪತಂಗೆ, ಜ್ಯೋತಿ ಭಜಂತ್ರಿ ,ಕೇಶವ ಭಜಂತ್ರಿ ,ಸತ್ಯನಾರಾಯಣ ಹೇಮಾದ್ರಿ, ಲಕ್ಷ್ಮೀನಾರಾಯಣ ಕಾಸಟ, ರಾಜು ಚಿಂತ್ರೆ, ಪರಮೇಶ್ವರ ಮದೂರ, ಚುನ ಚುನಾಯಿತ ಪ್ರತಿನಿಧಿಗಳು, ಮೋರ್ಚಾದ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ವಾರ್ಡ್ ಮತ್ತು ಬೂತ್ ಅಧ್ಯಕ್ಷರು , ಪ್ರಕೋಸ್ಠಾದ ಪದಾಧಿಕಾರಿಗಳು, ಸಾಮಾಜಿಕ ಜಾಲತಾಣ ಹಾಗೂ ಕಾರ್ಯಕರ್ತ ಬಂಧುಗಳೆಲ್ಲರೂ ಭಾಗಿಯಾಗಿದ್ದರು.
ಇದೆ ಸಂದರ್ಭದಲ್ಲಿಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಅಂಗವಾಗಿ ಏಕ್ ಪೇಡ್ ಮಾಕೇ ನಾಮ್ ಎಂಬ ಆಭಿಯಾನವನ್ನು ಪಕ್ಷದ ಕಾರ್ಯಾಲಯ ಶಿವಾನಂದ ಜಿನ್‍ನಲ್ಲಿ ಸಸಿ ನಡುವದರ ಮೂಲಕ ಆಚರಿಸಲಾಯಿತು.