ಪರಿಸರದ ಸ್ಥಿರತೆ ಕಾಪಾಡಲು ಕರೆ
ಧಾರವಾಡ,ಜೂ.24: ಪರಿಸರಅಧ್ಯಯನವ Åಇಂದು ವಿಜ್ಞಾನದ ಒಂದು ಭಾಗವಾಗಿದ್ದು, ಪರಿಸರದ ಸುಸ್ಥಿರತೆಯನ್ನು ಕಾಪಾಡಲು ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಕಾರ್ಯ ಪ್ರವೃತ್ತರಾಗಬೇಕೆಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.
ಅವರು ಕ.ವಿ.ವ. ಸಂಘದ ಮಕ್ಕಳ ಮಂಟಪವು, ಕುರಬಗಟ್ಟಿಯ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚಣೆಯ ಅಂಗವಾಗಿ ಆಯೋಜಿಸಿದ್ದ ಮಕ್ಕಳಿಗೆ ಚಿತ್ರಕಲೆ, ಭಾಷಣ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ `ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ ್ರಕುರಿತು’ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಪರಿಸರ ದಿನಾಚರಣೆ ಕೇವಲ ಜೂನ 5ಕ್ಕೆ ಮಾತ್ರ ಸೀಮಿತವಲ್ಲ. ಇಡೀ ವರ್ಷ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಬದ್ಧರಾಗಿರಬೇಕು .ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು. ಪರಿಸರದ ಬಗ್ಗೆ ನಿರಂತರಜಾಗೃತಿಯನ್ನುಜನರಲ್ಲಿ ಮೂಡಿಸಲು ಬೀದಿ ನಾಟಕ, ಉಪನ್ಯಾಸ, ಚಿತ್ರ ಪ್ರದರ್ಶನ, ಶಿಬಿರಗಳನ್ನು ಆಯೋಜಿಸುವ ಮೂಲಕ ಪರಿಸರ ಪ್ರೇಮಿಗಳನ್ನಾಗಿಸಬೇಕು. ವಿದ್ಯಾರ್ಥಿಗಳು ಶಾಲೆ, ವಾಸಿಸುವ ಮನೆ, ಸುತ್ತಮುತ್ತಲು ಮರಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರದ ಸಮತೋಲನೆಯನು ್ನಕಾಪಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಕಸ ಚಲ್ಲುವುದು ನಿಷೇಧಿಸಬೇಕು.
ಪರಿಸರ ಸಂರಕ್ಷಣೆಯ ಜೊತೆಗೆ ಸಾಮಾಜಿಕ ಪರಿಸರದ ಬಗ್ಗೆಯೂ ಪ್ರಜ್ಞೆಯನ್ನು ಹೊಂದಿರಬೇಕು. ಕುಟುಂಬದ ಸದಸ್ಯರೊಂದಿಗೆ ನೆರೆಹೊರೆಯವರ ಜೊತೆಗೆ ಸೌಜನ್ಯದ ನಡುವಳಿಕೆಗಳನ್ನು ಹೊಂದಿರಬೇಕು. ನಾವಾಡುವ ಭಾಷೆಯು ಸಹ ಸಾಮಾಜಿಕ ಪರಿಸರದಒಂದು ಭಾಗವಾಗಿದೆ. ಸಾಮಾಜಿಕ ಪರಿಸರವು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆಎಂದು ತಿಳಿಸಿದರು.
ಅತಿಥಿಯಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಚನ್ನಬಸಪ್ಪ ಲಗಮಣ್ಣವರ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಪಾಲಕರ ಹಾಗೂ ಸಮಾಜದ ಜವಾಬ್ದಾರಿ ಇದೆ. ಕ.ವಿ.ವ ಸಂಘವು ಮಕ್ಕಳ ಶ್ರೇಯೋಭಿಲಾಷೆಗಾಗಿ ವೈವಿಧ್ಯಮಯ ಕಾರ್ಯಕ್ರಮವನು ್ನಆಯೋಜಿಸುತ್ತಿರುವುದು ಶ್ಲಾಘನೀಯ. ಮಕ್ಕಳು ಬಾಲ್ಯದಿಂದಲೇ ಪರಿಸರ ಪ್ರಿಯರಾಗಬೇಕೆಂದುಕರೆ ನೀಡಿದರು.
ಮುಖ್ಯಾಧ್ಯಾಪಕಿ ಸರಸ್ವತಿ ನಾಯಕ ಮಾತನಾಡಿ, ಕ.ವಿ.ವ. ಸಂಘವು ಮಕ್ಕಳೆಡೆಗೆ ಹೋಗಿ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿ ನಿರಂತರಜಾಗೃತಿ ಹಾಗೂ ಅರಿವು ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕ.ವಿ.ವ. ಸಂಘದಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುಂಡಲೀಕ ಗುಂಡಗೋವಿ, ಮಹಾಂತೇಶ ನರೇಗಲ್, ಕೃಷ್ಣಾ ಅಂಗಡಿ ಮುಂತಾದವರು ಮಾತನಾಡಿದರು.
ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಪುರಸ್ಕಾರದೊಂದಿಗೆ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ನೀಡಿಗೌರವಿಸಲಾಯಿತು.
ಗ್ರಾಮ ಪಂಚಾಯತಿಅಧ್ಯಕ್ಷತೆ ನಾಗಮ್ಮ ಮಾಳಗಿಮನಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಧುಮತಿ ಶಿವಪುರ ಸ್ವಾಗತಿಸಿದರು.ಮಕ್ಕಳ ಮಂಟಪದ ಸಂಚಾಲಕ ಡಾ.ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಗಸ್ತಿ ನಿರೂಪಿಸಿದರು.ಸುಮಂಗಲಾ ಡಿ.ಕೆ.ವಂದಿಸಿದರು.
ಸಮಾರಂಭದಲ್ಲಿಡಾ.ಎಸ್. ಎ. ಗಾಡಗೋಳಿ, ಎಸ್.ಜಿ. ಪಾಟೀಲ, ಮಂಜುಳಾ ಪಿ.ಜಿ, ಪೂಜಾ ಹಿರೇಮಠ ಮುಂತಾದವರುಇದ್ದರು.