ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.24: ನಗರದ ಶ್ರೀ ಏಕಲವ್ಯ ಟ್ರಸ್ಟ್ ನಿಂದ ನಿನ್ನೆ  ಇಲ್ಲಿನ  ಹೊಂಗಿರಣ    ಸಭಾಂಗಣದಲ್ಲು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ  ಪಡೆದ ಜಿಲ್ಲೆಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮಾನಂದ ಸ್ವಾಮೀಜಿ  ನೇತೃತ್ವದಲ್ಲಿ ನಡೆಯಿತು. ವಿದ್ಯೆ ಜೊತೆಗೆ ಶ್ರದ್ಧೆ ಮತ್ತು ಭಕ್ತಿ ಇರಬೇಕು ಹಾಗೆ  ವಾಲ್ಮೀಕಿ ಮಹರ್ಷಿಯ ಬಗ್ಗೆ ಮಾಹಿತಿ ನೀಡಿದರು.
 ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯ ಕೆ. ಎಸ್. ಅಶೋಕ್ ಕುಮಾರ್,  ಮಕ್ಕಳಿಗೆ ಮುಂದಿನ ದಿನಗಳಲ್ಲಿ ತಾವು ಇನ್ನ ಉನ್ನತ ಸ್ಥಾನಕ್ಕೆ ಹೋಗಬೇಕೆಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಏಕಲವ್ಯ ಟ್ರಸ್ಟ್ ಕಾರ್ಯದರ್ಶಿ  ಟಿ. ಚಂದ್ರಶೇಖರ್ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾ ಪುರಸ್ಕಾರ  ಹಮ್ಮಿಕೊಂಡಿದೆಂದರು.
 ದೀಪಕ್ ತೇಜ ಹಾಗೂ ವಿ.ಕೆ ಬಸಪ್ಪ  ಕಾರ್ಯಕ್ರಮಕ್ಕೆ   ಸಹಕರಿಸಿದರು.  ಕೃಷ್ಣಮೂರ್ತಿ, ಲಕ್ಷ್ಮಣ್ ಮಾಜಿ ಸೈನಿಕರು, ಅನಸೂಯ ಮುರಾರ್ಜಿ ದೇಸಾಯಿ ಪ್ರಾಂಶುಪಾಲರು, ಕೆ ಪುಷ್ಪ ಲತಾ, ಕಲಾವತಿ, ಗೋವರ್ಧನ್, ಸಾಯಿ ಸಂಜಯ್ ಕುಮಾರ್  ಉಪಸ್ಥಿತರಿದ್ದರು.ಗಿರೀಶ್ ಕುಮಾರ್ ಹಾಗೂ ಮೇಘನಾ  ಕಾರ್ಯಕ್ರಮ ನಿರ್ವಹಣೆ ಮಾಡಿದರು.