ಭೂಮಿಯಷ್ಟೇ ಮಹತ್ವವನ್ನು ಪಶುಸಂಕುಲಕ್ಕೂ ನೀಡಬೇಕು
ಧಾರವಾಡ,ಜೂ.24: “ಪಶುವೈದ್ಯಕೀಯಕ್ಷೇತ್ರದಿಂದ ಜನ-ಜಾನುವಾರುಗಳ ಬದುಕಿಗೆಅತ್ಯುತ್ತಮ ಸೇವೆ ದೊರಕುತ್ತಿದೆ.ನಾಡಿನ ಪಶುವೈದ್ಯರುತಮ್ಮ ಅನುಭವಗಳಿಗೆ ಅಕ್ಷರರೂಪ ನೀಡಿ ಸಾಹಿತ್ಯ ಲೋಕಕ್ಕೆ ಮಹತ್ತರಕೊಡುಗೆ ನೀಡಬೇಕು” ಎಂದುಕರ್ನಾಟಕ ವಿದ್ಯಾವರ್ಧಕ ಸಂಘದಅಧ್ಯಕ್ಷರೂ, ಮಾಜಿ ಶಾಸಕರೂಆದ ಶ್ರೀ ಚಂದ್ರಕಾಂತ ಬೆಲ್ಲದಅಭಿಪ್ರಾಯ ಪಟ್ಟರು.
ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತಿನ ವತಿಯಿಂದಧಾರವಾಡದಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ನಾಡೋಜಡಾ.ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆದಎರಡು ದಿನಗಳ ಸಾಹಿತ್ಯಕಮ್ಮಟದಉದ್ಘಾಟನಾ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದಅವರುಅನ್ನ ನೀಡುವ ಭೂಮಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮೂಕ ಪ್ರಾಣಿಗಳಿಗೂ ನೀಡಬೇಕುಎಂದುಕರೆ ನೀಡಿದರು.
ಇದೇ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನಿರ್ದೇಶಕರಾದಡಾ.ಮಂಜುನಾಥ ಪಾಳೇಗಾರರು “ಪಶುವೈದ್ಯಕೀಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿಕಾರ್ಯ ನಿರ್ವಹಿಸಲು ಸಾಹಿತ್ಯಅತ್ಯಗತ್ಯ. ವಿಶೇಷವಾಗಿ ಕನ್ನಡ ನಾಡಿನ ವಿವಿಧ ಭಾಗಗಳಲ್ಲಿನ ಆಡುಭಾಷೆಯನ್ನುಅರಿತುಕೊಂಡುರೈತರೊಡನೆ ಪರಿಪೂರ್ಣ ಸಂಪರ್ಕ ಸಾಧಿಸಲುಇದು ಬೇಕಾಗುತ್ತದೆ” ಎಂದು ಹೇಳಿದರು.
ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಡಾ.ಎಸ್.ಬಿ.ರವಿಕುಮಾರ್‍ರವರು ಪಶುವೈದ್ಯ ಸಾಹಿತ್ಯ ಬೆಳೆದು ಬಂದ ಬಗೆ, ಪರಿಷತ್ತಿನ ಆಶಯಗಳು, ಕಾರ್ಯಕ್ರಮಗಳ ಕುರಿತು ವಿವರವಾಗಿ ತಿಳಿಸಿದರು.
ಎರಡು ದಿನಗಳ ಈ ಕಮ್ಮಟದಲ್ಲಿ ಮಕ್ಕಳ ಸಾಹಿತ್ಯ ಮತ್ತು ಪ್ರಾಣಿಗಳು, ಪಶುವೈದ್ಯ ಸಾಹಿತಿಗಳ ಪುಸ್ತಕ ಪರಿಚಯ, ಸಾಹಿತ್ಯ ಸೃಷ್ಠಿಯಲ್ಲಿಗ್ರಾಮ್ಯ ಬದುಕಿನಅರಿವು, ಪರಿಸರ ಮತ್ತು ಸಾಹಿತ್ಯ, ಕತೆಕಟ್ಟುವ ಕೌಶಲ, ಕವಿಗೋಷ್ಠಿ ಮುಂತಾದ ಹಲವು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು ಹೆಸರಾಂತ ಸಾಹಿತಿಗಳಾದ ಡಾ.ಬಸು ಬೇವಿನಗಿಡದ, ಡಾ.ಟಿ.ಎಸ್. ರಮಾನಂದ, ಡಾ. ಮಿರ್ಜಾ ಬಷೀರ್, ಡಾ.ನಾಗೇಶ್‍ದಸೂಡಿ, ಡಾ. ಚನ್ನಕೃಷ್ಣಯ್ಯ, ಡಾ.ಟಿ.ಜಯರಾಮ್, ಡಾ.ದೊಡ್ಡಮಲ್ಲಯ್ಯಡಾ.ಎಲ್.ಎಚ್ ಮಂಜುನಾಥ್, ಡಾ.ಪ್ರಕಾಶ್ ಭಟ್, ಡಾ.ಸಂಜೀವಕುಲಕರ್ಣಿ, ಶ್ರೀ ಕೆ.ಎನ್ ಭಗವಾನ್ ಮುಂತಾದವರು ವಿವಿಧ ಗೋಷ್ಠಿಗಳ ಅಧ್ಯಕ್ಷರಾಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು ನಾಡಿನಎಲ್ಲಾ ಭಾಗದ ಸಾಹಿತ್ಯಾಸಕ್ತ ಪಶುವೈದ್ಯರುಉತ್ಸಾಹದಿಂದ ಪಾಲ್ಗೊಂಡಿದ್ದಾರೆ.