ಪಾಲಕರ ಸಭೆ
ಚನ್ನಮ್ಮನ ಕಿತ್ತೂರು,ಜೂ.24: ಮಕ್ಕಳ ಹಾಗೂ ಶಾಲೆಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪಾಲಕರು ಶ್ರಮವಹಿಸಬೇಕೆಂದು ಪ್ರಧಾನಗುರು ಸದಾಶಿವ.ಲ.ಪೋಳ ಹೇಳಿದರು.
ತಾಲೂಕಿನ ದೇವಗಾಂವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು. ಜನಸಂಖ್ಯೆ ಹೆಚ್ಚಾದಂತೆ ಶಾಲೆಯ ಅಭಿವೃದ್ಧಿ, ಬೆಳವಣಿಗೆ ಹೊಂದಬೇಕಾಗುತ್ತದೆ. ಶಾಲೆಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು. ಸರ್ಕಾರ ಈಗಾಗಲೇ ಶಾಲೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದ್ದು. ಪಾಲಕರು, ಗ್ರಾಮಸ್ಥರು ಸೇರಿ ಲಾಭಪಡೆದು ಮಕ್ಕಳ ಉತ್ತಮ ಭವಿಷ್ಯ ಕಟ್ಟಲು ಮುಂದಾಗಬೇಕೆಂದರು. ಶಾಲಾ ಪ್ರಧಾನಿ ವಿದ್ಯಾರ್ಥಿನಿ ಮಂಜುಳಾ ದೇಗಲೊಳ್ಳಿ (ಅಗಸಿಮನಿ) ಮಾತನಾಡಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪಾತ್ರವೂ ಪಾಲಕರದಿರುತ್ತದೆ. ಶಿಕ್ಷಕರು-ಪಾಲಕರು ಸೇರಿ ಶಾಲೆ ಅಭಿವೃದ್ಧಿಗೊಳಿಸುವುದರಲ್ಲಿ ಶ್ರಮವಹಿಸಬೇಕು. ಶಾಲೆಯಲ್ಲಿ ಗುರುಗಳು ಪಾಠ ಹೇಳಿದ್ದಾರೆಂದು ಪಾಲಕರು ಸುಮ್ಮನೆ ಬಿಡಬಾರದು ಮನೆಗೆ ಬಂದ ತಕ್ಷಣ ಶಾಲೆಯಲ್ಲಿ ಏನೂ ಕಲಿಸಿದ್ದಾರೆಂಬುವುದನ್ನು ವಿಚಾರಿಸಿದಾಗ ಪಾಲಕರಿಗೆ ಗೊತ್ತಾಗುತ್ತದೆ. ಅದಕ್ಕಾಗಿ ಪಾಲಕರ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದರು. ಪ್ರಾಸ್ತಾವಿಕವಾಗಿ ದ್ಯಾಮವ್ವಾ.ಕ.ನಿರ್ವಾಣಿ, ಶಿಕ್ಷಕರು, ಪಾಲಕರು, ಶಾಲೆ ವಿದ್ಯಾರ್ಥಿಗಳ ಅಭಿವೃದ್ಧಿ ಕುರಿತು ಮಾತನಾಡಿದರು. ಈ ವೇಳೆ ಪಾಲಕರು, ಎಸ್‍ಡಿಎಂಸಿ, ಗ್ರಾಪಂ ಅಧ್ಯಕ್ಷ-ಸದಸ್ಯರು,-ಪಿಡಿಓ, ಗ್ರಾಮಸ್ಥರು, ಶಿಕ್ಷಕರು, ಮಕ್ಕಳಿದ್ದರು.