ಯುವಕನ ಕೊಚ್ಚಿ ಭೀಕರ ಕೊಲೆ
ಬೆಂಗಳೂರು,ಜೂ.೨೪-ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದ ದುರ್ಘಟನೆ ಗಂಗಮ್ಮನಗುಡಿಯ ವೈಮ್ಯಾಕ್ಸ್ ಸರ್ಕಲ್ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಗಂಗಮ್ಮನಗುಡಿಯ ಮಂಜುನಾಥ್(೧೭) ಕೊಲೆಯಾದ ಯುವಕನಾಗಿದ್ದಾನೆ,
ಮಧ್ಯರಾತ್ರಿ ವೈಮ್ಯಾಕ್ಸ್ ವೃತ್ತದ ಬಳಿ ಬಂದಿದ್ದ ಮಂಜುನಾಥ್ ಜೊತೆ ಜಗಳ ತೆಗೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಒದ್ದಾಡುತ್ತಿದ್ದ ಆತನನ್ನು ಕೂಡಲೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಯುವಕನ ಭೀಕರ ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ,ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಗಂಗಮ್ಮ ಗುಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಲೆಗಾರರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.