ಇಂದು ಸಂಜೆ ಜಿಲ್ಲಾ ಕಸಾಪದಿಂದ ಶ್ರದ್ಧಾಂಜಲಿ ಸಭೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೪; ನಮ್ಮನ್ನಗಲಿದ ಖ್ಯಾತ ಸಾಹಿತಿ, ವಿಮರ್ಶಕಿ ಕಮಲಾ ಹಂಪನಾ ಇವರ ಗೌರವಾರ್ಥ ಇಂದು ಸಂಜೆ 5.30 ಕ್ಕೆ ದಾವಣಗೆರೆ ಕುವೆಂಪು ಭವನದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ.ಜಿಲ್ಲೆಯ ಎಲ್ಲ ಕನ್ನಡ ಮನಸ್ಸುಗಳು ಸಭೆಗೆ ಆಗಮಿಸಿ ಮೃತರಿಗೆ ಗೌರವ ಸಲ್ಲಿಸಲು ಜಿಲ್ಲಾ ಕಸಾಪ ಅಧ್ಯಕ್ಷರಾದ 
ಬಿ.ವಾಮದೇವಪ್ಪ ಮನವಿ ಮಾಡಿದ್ದಾರೆ.