ಜೋಗಿಮಟ್ಟಿ ಗುಡ್ಡಗಳತ್ತ ಬರುತ್ತಿವೆ ಮನೆಗಳು; ಡಾ. ಎಚ್. ಕೆ. ಎಸ್. ಸ್ವಾಮಿ ಆತಂಕ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೪: ಚಿತ್ರದುರ್ಗ ನಗರದ ಜನಸಂಖ್ಯಾ ಹೆಚ್ಚಳಕ್ಕೆ ತಕ್ಕಂತೆ, ಜನವಸತಿ ವಿಸ್ತಾರಗೊಳ್ಳುತ್ತಿರುವುದರಿಂದ, ಜೋಗಿಮಟ್ಟಿಯ ಗುಡ್ಡದ ತಳದವರೆಗೂ ಮನೆಗಳು ಬರುತ್ತಿದ್ದು, ಪರಿಸರಕ್ಕೆ ಮನುಷ್ಯ ಹೊಂದಿಕೊಳ್ಳುವುದರ ಬದಲಾಗಿ, ಪರಿಸರವನ್ನೇ ತನಗಾಗಿ ಹೊಂದಿಸಿಕೊಳ್ಳುತ್ತಿರುವುದು ಗಾಬರಿಯಾಗುವಂತಹ ವಿಚಾರವಾಗಿದೆ, ಅಲ್ಲಿ ಜನವಸತಿಯಿಂದ ಮಾಲಿನ್ಯ ಹೆಚ್ಚಾಗಬಾರದು ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ಕಳವಳ ವ್ಯಕ್ತಪಡಿಸಿದ್ದಾರೆ.ಎತ್ತರ ಪ್ರದೇಶದಲ್ಲಿ ತಂಪಾದ ವಾತಾವರಣ, ಸುಂದರ ಪರಿಸರ, ಮಾಲಿನ್ಯ ಮುಕ್ತ ವಾತಾವರಣ, ನೆಮ್ಮದಿಯ ಬದುಕಿಗಾಗಿ, ಜನರು ಗುಡ್ಡಗಳತ್ತ ಮುಖ ಮಾಡುತ್ತಿದ್ದಾರೆ. ಪರಿಸರಕ್ಕಾಗಿ ಮೀಸಲಿಟ್ಟಿದ್ದ ಕೆಲವು ಗುಡ್ಡಗಳನ್ನು, ಜನವಸತಿಗಳು ಅಕ್ರಮಿಸಿಕೊಳ್ಳುತ್ತಾ ಬರುತ್ತಿರುವುದು ಉತ್ತಮ ನೆಡೆಯಲ್ಲ. ತಂಪಾದ ಗಾಳಿ, ಬೆಳಕು, ಹಸಿರು ಕಾಡು, ಎಲ್ಲವೂ ಸಹ ಮನುಷ್ಯನಿಗೆ ನೆಮ್ಮದಿಯ ಬದುಕನ್ನು ತಂದುಕೊಡುತ್ತದೆ, ಆದರೆ ಮನುಷ್ಯ ತನ್ನ ಅವಶ್ಯಕತೆಗಳನ್ನು ಹೆಚ್ಚಿಸಿಕೊಳ್ಳುತ್ತಾ, ನಗರಗಳನ್ನ ವಿಸ್ತಾರಗೊಳಿಸುತ್ತಾ, ತನ್ನಲ್ಲಿರುವ ತಾಂತ್ರಿಕ ಜ್ಞಾನವನ್ನು ಪರಿಸರದ ಮೇಲೆ ಆಕ್ರಮಣ ಮಾಡಲು ಬಳಕೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.ಜೋಗಿ ಮಟ್ಟಿ ಅರಣ್ಯಧಾಮ ಸಾವಿರಾರು ವರ್ಷಗಳಿಂದ ಪರಿಸರದÀ ಸಮತೋಲನ ಕಾಯ್ದುಕೊಂಡಿದೆ, ಪ್ರಾಣಿ, ಪಕ್ಷಿ, ಸಸ್ಯ ವೈವಿದ್ಯಗಳಿಗೆ ಆಶ್ರಯ ನೀಡಿ, ಈ ಭಾಗದ ಜನರಿಗೆ ಅನುಕೂಲಕರ ಮಾಡಿಕೊಟ್ಟಿದೆ. ಆದರೆ ಚಿತ್ರದುರ್ಗದ ಸುತ್ತಮುತ್ತ ಬೆಟ್ಟ ಗುಡ್ಡಗಳು ಹೆಚ್ಚಾಗಿರುವುದರಿಂದ ಜನವಸತಿಗೆ ಜಾಗ ಸಿಗದೆ, ಸೈಟ್‌ಗಳು ಲಭ್ಯವಿಲ್ಲದೆ, ಗುಡ್ಡಗಳನ್ನ ಕೆದಕಿ, ಸಮತಟ್ಟು ಮಾಡಿಕೊಂಡು, ಮನೆ ಕಟ್ಟುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹಿಂದೆ ಕೋಟೆಯ ಸುತ್ತಮುತ್ತ ಸಣ್ಣಪುಟ್ಟ ಮನೆಗಳನ್ನು ಬಡವರ ಕಟ್ಟಿಕೊಂಡು ವಾಸ ಮಾಡುತ್ತಿದ್ದರು, ಈಗ ಶ್ರೀಮಂತ ಜನರಿಗೆ ತಾಂತ್ರಿಕ ಜ್ಞಾನ ಹಾಗೂ ಮನೆ ಕಟ್ಟುವ ವಿಧಾನಗಳಲ್ಲಿ ಬದಲಾವಣೆ ಗೊಂಡಿರುವುದರಿAದ, ಎತ್ತರದ ಸ್ಥಳದಲ್ಲಿ ವಿಸ್ತಾರವಾದ ಮನೆಗಳನ್ನು ಕಟ್ಟಿಕೊಳ್ಳಲು ಸಹ ಪ್ರಯತ್ನಿಸುತ್ತಿದ್ದಾರೆ. ಜೋಗಿಮಟ್ಟಿ ಸುತ್ತಮುತ್ತ ಈಗ ಮನೆ ಕಟ್ಟಲು ಸೈಟ್‌ಗಳು ಲಭ್ಯವಾಗದೆ, ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿವೆ. 3ಂAA ರೂ ಚದರ ಅಡಿಯಂತೆ ಸೈಟ್‌ಗಳು ಮಾರಾಟವಾಗಿ, ಲೇಔಟ್‌ಗಳು ನಿರ್ಮಾಣವಾಗಿ, ಹಿಂದೆ ಜಮೀನಿನ ರೀತಿಯಲ್ಲಿ ಬಳಕೆ ಮಾಡುತ್ತಿದ್ದ ಗುಡ್ಡಗಳನ್ನ, ಇಂದು ಜನವಸತಿಗಳು ನಿರ್ಮಾಣ ಮಾಡಲು ಪ್ರಾರಂಭ ಮಾಡಲಾಗಿದೆ. ಇದರ ಅಂತ್ಯ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ಯಾರಿಗೂ ತಿಳಿಯದಾಗಿದೆ ಎಂದಿದ್ದಾರೆ.