ಮನುಷ್ಯ ದುರಂಹಃಕಾರವನ್ನು ಬಿಟ್ಟು ಬದುಕಲಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.24:- ಸಾಮಾನ್ಯ ಮನುಷ್ಯರು ಅಂಧರ ಕಣ್ಣಿನಲ್ಲಿ ಲೋಕ ನೋಡುವುದು, ಶ್ರವಣ ದೋಷವುಳ್ಳವರ ಕಿವಿಯಲ್ಲಿ ಕೇಳುವುದನ್ನು ಕಲ್ಪಿಸಿಕೊಳ್ಳಬೇಕು. ಹಾಗೇ ನೋಡಲು, ಕೇಳಲು ಸಾಧ್ಯವಾದರೇ ಮನುಷ್ಯ ದುರಂಹಃಕಾರವನ್ನು ಬಿಟ್ಟು ಬದುಕಬೇಕು ಎಂದು ಹಿರಿಯ ವಿಮರ್ಶಕ ಪೆÇ್ರ.ಓ.ಎಲ್.ನಾಗಭೂಷಣ ಹೇಳಿದರು.
ನಗರದ ಕುವೆಂಪುನಗರದ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮಾಜವಾದಿ ಅಧ್ಯಯನ ಕೇಂದ್ರ ಹಾಗೂ ರಂಗಾಂತರಂಗ ಸಹಯೋಗದಲ್ಲಿ ಕೆ.ಎಸ್.ಸುಚೇತ ರಚನೆಯ ಕೇಳದ ಕಿವಿಗಳು ಹೇಳಿದ ಕಥೆಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶೇಷ ಚೇತನರು ಅನಾಥ ಭಾವವನ್ನು ಅನುಭವಿಸುತ್ತಾರೆ. ಅವರಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಅವರ ವೈಫಲ್ಯವನ್ನು ಸಂವೇದಶೀಲರನ್ನಾಗಿ ಅರಿಯಬೇಕು. ಕೆ.ಎಸ್.ಸುಚೇತ ಅವರ ಕೇಳದ ಕಿವಿಗಳ ಹೇಳಿದ ಕತೆಗಳು ಪುಸ್ತಕ ಮನುಷ್ಯನ ಅಹಂಕಾರಕ್ಕೆ ಚುಚ್ಚಲಿದೆ ಎಂದರು.
ಸುಚೇತನವರ ಬರವಣಿಗೆಯಲ್ಲಿ ಕೇಳಿದ್ದೇಲವೂ ನೆನಪು ಮಾತ್ರವಲ್ಲ. ನೋಡಿದರ ಆಧಾರದ ಮೇಲೆ ಮಾತುಗಳನ್ನು ಕಲ್ಪಿಸಿಕೊಳ್ಳುತ್ತಾರೆ. ವಿಜ್ಞಾನ ಏನೇ ಹೇಳಿದರೂ ಅನುಭವದ ಮಾತು ತಟ್ಟಿದಂತೆ ಮನಸ್ಸಿಗೆ ತಟ್ಟುವುದಿಲ್ಲ. 1968ರಲ್ಲಿ ಕನ್ನಡದಲ್ಲಿ ರಾಜಕುಮಾರ್ ಅಭಿನಯದ ನಾಂದಿ ಎಂಬ ಸಿನಿಮಾ ಇಡೀ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರವಣ ದೋಷವುಳ್ಳವರ ಕಥೆ ಆಧರಿತ ಸಿನಿಮಾ. ಇದರ ಪ್ರೇರಣೆಯಿಂದ ಹಿಂದಿಯಲ್ಲಿ ಕೋಶಿಷ್ ಸಿನಿಮಾ ಬಂತು. ಇದನ್ನು ಪ್ರತಿಯೊಬ್ಬರು ನೋಡಬೇಕು ಎಂದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗಳ ನಿರ್ದೇಶಕಿ ಪೆÇ್ರ.ಎಂ.ಪುಷ್ಪಾವತಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಿಶೇಷ ಚೇತನರಿಗೆ ಅನೇಕ ಕೃತಿಗಳು ಬಂದಿವೆ. ಅದರಲ್ಲಿ ಈ ಕೃತಿ ವಿಶೇಷವಾಗಿದೆ. ಶ್ರವಣ ದೋಷವುಳ್ಳವರ ಅನುಭವಗಳನ್ನು ಕೃತಿ ಹೇಳಲಿದೆ ಎಂದ ಅವರು ಅಂಗವಿಕಲರು, ಕಿವಿಡರು, ಕುರುಡರು ಎಂದು ವಿಶೇಷ ಚೇತನರನ್ನು ಕರೆಯಬೇಡಿ. ಈ ರೀತಿ ಕರೆಯುವುದರಿಂದ ಅವರ ಮನಸ್ಸಿಗೆ ನೋವಾಗಲಿದೆ ಎಂದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಅಧ್ಯಾಪಕ ಡಾ.ಪಿ.ಎ.ನಾಗರಾಜ ಮಾತನಾಡಿ, ಈ ಕೃತಿ ಪೂರ್ವಶ್ರಮದ ಕೃತಿಗಳನ್ನು ನೆನಪಿಗೆ ತರಲಿದೆ. ಕೃತಿಕಾರರು ತನ್ನ ಪ್ರಚಲಿತ ಕೃತಿಯ ಗೂ ಜೊತೆಗೆ ಇಂದಿನ ಕೃತಿಯನ್ನು ನೆನಪಿಸಿಕೊಳ್ಳುವ ಪರಿಪಾಠವಿತ್ತು. ಕಾಲನಂತರ ಬಿಟ್ಟು ಹೋಯಿತು. ಆ ಒಂದು ಪ್ರಸ್ತುತತೆಯನ್ನು ಪ್ರಚುರ ಪಡಿಸಿದವರು ಸುಚೇತನ ಅವರು ಎಂದರು.
ಕಾಲ ಬದಲಾದಂತೆ ಮನುಷ್ಯ ಮನಸ್ಥಿತಿಯು ಬದಲಾಗಲಿದೆ. ಕುರುಡ, ಕುಂಟ ಪದಗಳ ಬದಲಾಗಿ ವಿಭಿನ್ನ ಚೇತನ ವಿಭಿನ್ನ ಸಾಮಥ್ರ್ಯ ಎಂಬ ಪದಗಳನ್ನು ಕೃತಿಯಲ್ಲಿ ಟಂಕಿಸಲಾಗಿದೆ. ಪುಸ್ತಕವೂ ಸಂಚಿಕೆ ಪುಟಗಳನ್ನು ದಾಟಿದೆ. ಸುಚೇತನವರು ತನ್ನ ತಾಯಿ ಅವರಿಗೆ ಅರ್ಪಿಸಿದ್ದಾರೆ. ಕೃತಿಯಲ್ಲಿ ಕೃತಜ್ಞತೆ ಭಾವವನ್ನು ಎತ್ತಿಹಿಡಿಯಲಿದೆ. ಆಧುನೀಕ ತಂತ್ರದ ಜ್ಞಾನದ ಮೂಲಕ ದೃಷ್ಟಿ ದೋಷವುಳ್ಳವರು ಕನ್ನಡದ ಕೃತಿಗಳನ್ನು ಓದಬಹುದಾಗಿದೆ. ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಹೋರಾಟಗಾರರಾದ ಡಾ.ಇ.ರತಿರಾವ್, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‍ನ ಪ್ರಕಾಶನದ ಬಿ.ಕೆ.ಸುರೇಶ್, ಲೇಖಕ ನಾ.ದಿವಾಕರ್, ಧನಂಜಯ ಎಲಿಯೂರು ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.