ಬೋನಿಗೆ ಬಿದ್ದ ಚಿರತೆ
ಸಂಜೆವಾಣಿ ವಾರ್ತೆ
ಚಾಮರಾಜನಗರ : ಜೂ.24:- ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಗುಂಡಾಲ್ ಜಲಾಶಯ ವಲಯ ಅರಣ್ಯ ಪ್ರದೇಶದ ಸುತ್ತಮುತ್ತ ರೈತರ ಜಮೀನುಗಳ ಮೇಲೆ ದಾಳಿ ಮಾಡಿ ಹತ್ತಕ್ಕೂ ಹೆಚ್ಚು ಮೇಕೆ ಮತ್ತು ಕೋಳಿಗಳನ್ನು ತಿಂದು ಹಾಕಿದ್ದ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಹಗಲು ರಾತ್ರಿ ಎನ್ನದೆ ಮೇಕೆ ಮೇಲೆ ದಾಳಿ ಮಾಡಿ ರೈತರಲ್ಲಿ ಆತಂಕವನ್ನು ಉಂಟು ಮಾಡಿದ್ದ ಚಿರತೆಗೆ ರೇಡಿಯೋಕಾಲರ್ ಅಳವಡಿಸಿ ಅರಣ್ಯ ಇಲಾಖೆ ಅದರ ಚಲನವಲನದ ಮೇಲೆ ನಿಗಾವಹಿಸಿತ್ತು.
ಗುಂಡಾಲ್ ಬಳಿಯ ಕೋಳಿ ಫಾರಂ ಹಿಂಭಾಗದ ಲಕ್ಷ್ಮಿಪುರಂ ರೈತರ ಜಮೀನಿನಲ್ಲಿ ಇಡಲಾಗಿದ್ದ ಬೋನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ನಂತರ ಮೈಸೂರಿನ ಚಿರತೆ ಕಾರ್ಯಪಡೆ ವಶಕ್ಕೆ ಚಿರತೆಯನ್ನು ನೀಡಲಾಗಿದೆ.