ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಸಮಾಜ ವಿಜ್ಞಾನ ಪರೀಕ್ಷೆ ಯಶಸ್ವಿ3290 ಹಾಜರಿ-486 ಮಂದಿ ಗೈರು-ಡಿಡಿಪಿಐ ಕೃಷ್ಣಮೂರ್ತಿ
ಕೋಲಾರ,ಜೂ,೨೪-ಜಿಲ್ಲೆಯ ೧೭ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-೨ರ ಸಮಾಜವಿಜ್ಞಾನ ವಿಷಯದ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇಂದು ಪರೀಕ್ಷೆಗೆ ಜಿಲ್ಲೆಯ ೩೮೫ಪ್ರೌಢಶಾಲೆಗಳ ೩೭೭೬ ಮಂದಿ ನೋಂದಣಿ ಮಾಡಿದ್ದು, ೩೨೯೦ ಮಂದಿ ಹಾಜರಾಗಿ ೪೮೬ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೇ ಪರೀಕ್ಷೆ ನಡೆದಿದೆ ಮತ್ತು ಎಲ್ಲೂ ಅವ್ಯವಹಾರಗಳು ನಡೆದ ಬಗ್ಗೆ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.
ತಾಲ್ಲೂಕುವಾರು ಕೇಂದ್ರಗಳ ವಿವರ-
ಬಂಗಾರಪೇಟೆ ತಾಲ್ಲೂಕಿನ ೩ ಕೇಂದ್ರಗಳಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ ಒಟ್ಟು ೭೯೨ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, ೬೮೯ ವಿದ್ಯಾರ್ಥಿಗಳು ಹಾಜರಾಗಿ ೧೦೩ ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನ ೩ ಕೇಂದ್ರಗಳಲ್ಲಿ ೬೯೮ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ೬೩೬ ಮಂದಿ ಹಾಜರಾಗಿ ೬೨ ಮಂದಿ ಗೈರಾಗಿದ್ದಾರೆ. ಕೋಲಾರದ ೫ ಕೇಂದ್ರಗಳಲ್ಲಿ ೭೮೩ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ ೬೭೩ ಮಂದಿ ಹಾಜರಾಗಿ ೧೧೦ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಮಾಲೂರಿನ ೨ ಕೇಂದ್ರಗಳಲ್ಲಿ ೬೫೯ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ೫೬೦ ಮಂದಿ ಹಾಜರಾಗಿ ೮೮ ಮಂದಿ ಗೈರಾಗಿದ್ದಾರೆ. ಮುಳಬಾಗಿಲಿನ ೩ ಕೇಂದ್ರಗಳಲ್ಲಿ ೬೪೩ ಮಂದಿ ನೋಂದಾಯಿಸಿದ್ದು, ಈ ಪೈಕಿ ೫೫೫ ಮಂದಿ ಹಾಜರಾಗಿ ೮೮ ಮಂದಿ ಗೈರಾಗಿದ್ದಾರೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ೧ ಕೇಂದ್ರದಲ್ಲಿ ೨೦೧ ಮಂದಿ ನೋಂದಾಯಿಸಿದ್ದು, ೧೭೭ ಮಂದಿ ಹಾಜರಾಗಿ ೨೪ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಐದನೇ ದಿನದ ವಿಜ್ಞಾನ ವಿಷಯದ ಪರೀಕ್ಷೆಯೊಂದಿಗೆ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ-೨ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದಕ್ಕೆ ಕಾರಣರಾದ ವಿದ್ಯಾರ್ಥಿಗಳು ಶಿಕ್ಷಕರು, ಮುಖ್ಯಶಿಕ್ಷಕರು, ಜಿಲ್ಲಾಡಳಿತ,ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೆ ಡಿಡಿಪಿಐ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಜಯಣ್ಣ, ಶಿಕ್ಷಣಾಧಿಕಾರಿಗಳಾದ ಸಗೀರಾ ಅಂಜುಂ, ಭಾಗ್ಯವತಮ್ಮ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಶಂಕರೇಗೌಡ, ವೆಂಕಟೇಶಬಾಬು, ಮುಖ್ಯಅಧೀಕ್ಷಕಿ ಬಾಲಕರ ಪಿಯು ಕಾಲೇಜು ಕೇಂದ್ರದ ಬಿ.ಎಂ.ರಾಧಮ್ಮ ಧನ್ಯವಾದ ಸಲ್ಲಿಸಿದ್ದಾರೆ.