ಎಂಎಂ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ
ಸಂಜೆವಾಣಿ ವಾರ್ತೆ
ಮೈಸೂರು, ಜೂ.24:- ಕಳೆದ ಎಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರಿನ ಮಲೆ ಮಹದೇಶ್ವರ ಎಜುಕೇಷನಲ್ ಟ್ರಸ್ಟ್‍ನ ಎಂಎಂ ಕೋಚಿಂಗ್ ಸೆಂಟರ್‍ನ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮೆರೆದಿದ್ದಾರೆ.
ಇಲ್ಲಿ ಕೋಚಿಂಗ್ ಪಡೆದ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಲ್ಲಿ 36 ಮಂದಿ 625ಕ್ಕೆ 600ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಅದರಲ್ಲೂ ಎಸ್.ಜಾನವಿ 625ಕ್ಕೆ 623 ಅಂಕ ಗಳಿಸಿ ರಾಜ್ಯಕ್ಕೆ ಮೂರನೇ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಈಕೆ ಸಂಸ್ಕøತದಲ್ಲಿ 125, ಇಂಗ್ಲಿμï 100, ಕನ್ನಡ 100, ಗಣಿತ 98, ವಿಜ್ಞಾನ 100 ಹಾಗೂ ಸಾಮಾಜಿಕ ವಿಜ್ಞಾನ ವಿಷಯದಲ್ಲಿ 100 ಅಂಕ ಗಳಿಸಿದ್ದಾಳೆ.
ಸಿಬಿಎಸ್‍ಸಿ ವಿಭಾಗದಲ್ಲಿ ಕೋಚಿಂಗ್ ಪಡೆದ ವಿದ್ಯಾರ್ಥಿಗಳಲ್ಲಿ 26 ಮಂದಿ ಶೇ.90ಕ್ಕೂ ಅಧಿಕ ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರಲ್ಲಿ ಹೆಚ್. ಮನೀμï 96.40 ಅಂಕ ಗಳಿಸಿದ್ದಾನೆ. ಇದರ ಜೊತೆಗೆ ಸಿಇಟಿಯಲ್ಲೂ ಸಿಂಚನಾ ಎಸ್. 9245 ನೇ ರ್ಯಾಂಕ್ ಗಳಿಸಿದ್ದಾರೆ. ಇವರು ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 594 ಅಂಕ ಗಳಿಸಿದ್ದು, ರಸಾಯನಾ ಶಾಸ್ತ್ರದಲ್ಲಿ- 98, ಗಣಿತದಲ್ಲಿ 100 ಅಂಕ ಪಡೆದಿದ್ದಾರೆ. ಹಾಗೆಯೇ ರಶ್ಮಿಕಾ ಶೇಖರ್ ಸಿಇಟಿಯಲ್ಲಿ 2489ನೇ ಯಾರ್ಂಕ್ ಗಳಿಸಿದ್ದಾರೆ.
ಇವರು ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 591 ಅಂಕ ಗಳಿಸಿದ್ದಾರೆ. ಭೌತಶಾಸ್ತ್ರ 100, ರಸಾಯನಾಶಾಸ್ತ್ರ 100, ಗಣಿತಶಾಸ್ತ್ರ 100, ಜೀವಶಾಸ್ತ್ರ 100 ಅಂಕ ಪಡೆದಿದ್ದಾರೆ.