ಜಾನುವಾರುಗಳಿಗೆ ಚರ್ಮ ಗಂಟು ರೋಗ : ಉಚಿತ ಲಸಿಕೆ
ಇಂಡಿ:ಜೂ.24: ತಾಲೂಕಿನಲ್ಲಿ ಜಾನುವಾರುಗಳಿಗೆ ಈಗಾಗಲೇ ಜೂನ್ 20 ರಿಂದ ಉಚಿತ ಲಸಿಕೆ ಹಾಕಲು ಪ್ರಾರಂಭಿಸಿದ್ದು ರೈತರು ಉಪಯೋಗ ಪಡೆದುಕೊಳ್ಳಬೇಕೆಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ|| ಬಿ.ಎಚ್.ಕನ್ನೂರ ತಿಳಿಸಿದ್ದಾರೆ.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೋಗವು ಒಂದು ಜಾನುವಾರು ನಿಂದ ಇನ್ನೊಂದು ಜಾನುವಾರಿಗೆ ಬರುವ ಸಾಂಕ್ರಾಮಿಕ ರೋಗ. ಈ ರೋಗವು ಮುಂಗಾರು ಆರಂಭದ ಸಮಯದಲ್ಲಿ ಬರುತ್ತದೆ. ಸದರಿ ರೋಗವು ಸೊಳ್ಳೆಗಳಿಂದ ಕಚ್ಚುವ ನೊಣಗಳಿಂದ, ಹಾಗೂ ಉಣ್ಣೆಗಳಿಂದ ಹರಡುತ್ತದೆ ಎಂದರು.
ಈ ರೋಗವು ರೋಗ ಗ್ರಸ್ಥ ಪ್ರಾಣಿಗಳ ನೇರ ಸಂಪರ್ಕದಿಂದಲೂ ಹಾಗು ಕೆಲವೊಮ್ಮೆ ಕಲುಷಿತ ನೀರು, ಮತ್ತು ಮೇವಿನಿಂದಲೂ ಹರಡುತ್ತದೆ ಎಂದರು.
ಲಸಿಕಾ ಅವಧಿ ಒಂದು ತಿಂಗಳು ಇದೆ. ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಲು ವಿನಂತಿಸಿದರು.
ಪ್ರತ್ರಿಕಾಗೋಷ್ಠಿಯಲ್ಲಿ ಡಾ|| ರಾಜಕುಮಾರ ಅಡಕಿ, ಜೆ.ಎಚ್.ಬಾಗವಾನ, ರಾಮಣ್ಣ ಉಪ್ಪಾರ, ರಮೇಶ ನರಳೆ,ಜೆ.ಐ.ಕರಣಿ ಮತ್ತಿತರಿದ್ದರು.
