ಚಾಮರಾಜನಗರ ತಾಲೂಕು ಕುರುಬರ ಸಂಘ ಚುನಾವಣೆ: ಎಸ್‍ಪಿಕೆ ಉಮೇಶ್ ಬಣ ಮೇಲುಗೈ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 23- ಚಾಮರಾಜನಗರ ತಾಲೂಕು ಕುರುಬರ ಸಂಘದ ಮೂರು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಸಂಘದ ಅಧ್ಯಕ್ಷ ಎಸ್‍ಪಿಕೆ ಉಮೇಶ್ ಬಣ 25 ಮಂದಿ ಆಯ್ಕೆಯಾಗುವ ಮೂಲಕ ಸಂಘದ ಆಡಳಿತವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಿದ್ದಾರ್ಥ ಕಾಲೇಜಿನಲ್ಲಿ ಇಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿರುವ ಸಂಘದ ಸದಸ್ಯರು ಮತ ಚಲಾಯಿಸಿದರು. ಬಳಿಕ ನಡೆದ ಮತ ಎಣಿಕೆಯಲ್ಲಿ ಎಸ್‍ಪಿಕೆ ಉಮೇಶ್ ಸೇರಿದಂತೆ ಅವರ ಬೆಂಬಲಿಗರು ಮೇಲುಗೈ ಸಾಧಿಸಿ, ಅಂತಿಮವಾಗಿ 25 ಮಂದಿ ಗೆಲುವು ದಾಖಲು ಮಾಡಿ ಸಂಘದ ಆಢಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇತರರು ಆರು ಮಂದಿ ಗೆಲುವು ಸಾಧಿಸಿದ್ದಾರೆ.
ಸಮಾಜದ ಅಭಿವೃದ್ದಿಗೆ ಬದ್ದ : ಸಂಘದ ಎಲ್ಲಾ ಸದಸ್ಯರು ಹಾಗೂ ಸಮಾಜದ ಬಂಧುಗಳ ನಮ್ಮ ಮೇಲೆ ವಿಶ್ವಾಸವಿಟ್ಟು ಹೆಚ್ಚು ಮತಗಳನ್ನು ನೀಡಿ, ಬಹುಮತದಿಂದ ಆಯ್ಕೆಯಾಗಿರುವುದು ನಾನು ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಕುರುಬರ ಸಂಘವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಪಡಿಸುವ ಜೊತೆಗೆ ಕಲ್ಯಾಣ ಮಂಟಪ ಉದ್ಘಾಟನೆ, ಸಮುದಾಯ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು. ಕೌಶಲ್ಯ ತರಬೇತಿ ನೀಡಿ, ಉದ್ಯೋಗವನ್ನು ಕಲ್ಪಿಸಲು ಅದ್ಯತೆ, ಹಾಗೂ ಉನ್ನತ ಶಿಕ್ಷಣಕ್ಕೆ ಹೋಗುವ ಮಕ್ಕಳಿಗೆ ಮಾರ್ಗದರ್ಶನ ಮತ್ತು ಹಳ್ಳಿ ಹಳ್ಳಿಗಳಲ್ಲಿ ಸಮುದಾಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಶ್ರಮಿಸುತ್ತೇವೆ. ನಿಮ್ಮೆಲ್ಲರ ಸಹಕಾರ ಮುಂದೆಯು ಹೀಗೆ ಇರಲಿ ಎಂದು ನೂತನ ನಿರ್ದೇಶಕ ಹಾಗೂ ಹಾಲಿ ಸಂಘದ ಅಧ್ಯಕ್ಷ ಎಸ್.ಕೆ.ಪಿ ಉಮೇಶ್ ಕೋರಿದರು.
ಸಂಘದ ಚುನಾವಣೆ ಮುಕ್ತಾಯವಾಗಿದೆ. ಇನ್ನು ಮುಂದೆ ಎಲ್ಲ ನೂತನ ನಿರ್ದೇಶಕರು ಹಾಗೂ ಬೆಂಬಲಿಗರು ಒಗ್ಗಟ್ಟಿನಿಂದ ಸಮಾಜದ ಅಭಿವೃದ್ದಿ ಮುಂದಾಗೋಣ. ಸಮುದಾಯ ಹಾಗೂ ಸಂಘದ ಅಭಿವೃದ್ದಿಗೆ ಎಲ್ಲರು ಮೊದಲ ಅದ್ಯತೆ ನೀಡಿ, ದುಡಿಯೋಣ ಎಂದು ಉಮೇಶ್ ತಿಳಿಸಿದರು.
ಕಸಬಾ ಹೋಬಳಿಯಿಂದ ಆರ್. ಉಮೇಶ್, ಮಹದೇವಸ್ವಾಮಿ, ಮರಿಸ್ವಾಮಿ, ಜಯರಾಮ್, ಎಂ.ಪಿ.ರಾಜು, ಬಿ. ಮಂಜು, ಶಿವಸ್ವಾಮಿ, ಉಷಾ ಎಸ್., ಸಂತೇಮರಹಳ್ಳಿಯಿಂದ ಜಿ. ನಟರಾಜು, ಕೆ.ಎಸ್. ಕುಮಾರ್, ಚಿಕ್ಕರಾಜು, ಎನ್.ಚಂದ್ರ, ಪ್ರಭು, ಜಿ. ಮಹೇಶ್, ಎಚ್.ಎಂ. ಶಿವಕುಮಾರ್, ಹರವೆ ಹೋಬಳಿಯಿಂದ ಎಂ.ಮಹೇಶ್, ಬೆಳ್ಳೇಗೌಡ, ಕೆ.ಪಿ. ನಾಗರಾಜು, ಪುನೀತ್‍ಕುಮಾರ್, ಡಿ.ಎಂ. ಮಂಜುನಾಥ್, ಚಂದಕವಾಡಿ ಹೋಬಳಿಯಿಂದ ರೇವಣ್ಣ, ರಾಜೇಶ್ ಕೆ. ಬಂಗಾರೇಗೌಡ, ರಾಜಶೇಖರ್. ಎಸ್. ಹರದನನಹಳ್ಳಿ ಹೋಬಳಿಯಿಂದ ಪಿ. ಬಸವಣ್ಣ, ಮಹದೇವ್, ಚನ್ನೇಗೌಡ, ಶಿವಕುಮಾರ್, ನಗರಸಭೆ ವ್ಯಾಪ್ತಿಯ ಮತ ಕ್ಷೇತ್ರದಿಂದ ಮಹದೇವಸ್ವಾಮಿ, ಗೋವಿಂದ, ಸೂರ್ಯಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಚುನಾವಣಾಧಿಕಾರಿ ಕೆ.ಎಂ. ತ್ಯಾಗರಾಜ ಪ್ರಸಾದ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಸೋಮಣ್ಣೇಗೌಡ, ರವಿಕುಮಾರ್, ಸ್ವಾಮಿ ಕರಿನಂಜನಪುರ ಹಾಗೂ ಸಮಾಜದ ಮುಖಂಡರು ಹಾಗೂ ಯುವಕರು ಇದ್ದರು.