ಎಸ್‌ಎನ್‌ಆರ್. ಆಸ್ಪತ್ರೆ ಕಡತ ನಾಪತ್ತೆ ಆರೋಪ, ಸತ್ಯಕ್ಕೆ ದೂರ
ಕೋಲಾರ,ಜೂ,೨೪- ನಗರದ ಜಿಲ್ಲಾ ಸರ್ಕಾರಿ ನರಸಿಂಹ ರಾಜ ಧರ್ಮಾಸ್ಪತ್ರೆಯಲ್ಲಿ ೨೧೮ ಕಡತಗಳು ನಾಪತ್ತೆಯಾಗಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದೆ ಎಲ್ಲಾ ಕಡತಗಳನ್ನು ಈಗಾಗಲೇ ಲೋಕಾಯುಕ್ತರು ಮತ್ತು ವಿಭಾಗೀಯ ನಿದೇರ್ಶಕರು ಸಮಗ್ರವಾದ ತನಿಖೆ ಮಾಡಿ ಎಲ್ಲಾ ಕಡತಗಳನ್ನು ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಸುರಕ್ಷಿತವಾಗಿ ಕಚೇರಿಯ ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರು ಸುಪದ್ರಿಯಲ್ಲಿಡಲಾಗಿದೆ ಎಂಬ ವರದಿಯನ್ನು ನೀಡಿ ಪ್ರಕರಣವನ್ನು ನಿವೃತ್ತಿಯ ನಂತರ ಎರಡು ವರ್ಷಗಳ ಹಿಂದೆಯ ಮುಕ್ತಯಗೊಳಿಸಲಾಗಿದೆ. ಕಡತಗಳು ಇರುವುದು ಎಂದು ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಯ ನಿಕಟ ಪೂರ್ವ ಅಧೀಕ್ಷಕ ಎಸ್.ಜಿ.ನಾರಾಯಣಸ್ವಾಮಿ ಸ್ವಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿ ಎ.ಆರ್.ಎಸ್.ಗೆ ಸಂಬಂಧಿಸಿದ ಬಿಲ್‌ಗಳು ಮತ್ತು ವೋಚರ್‌ಗಳು ಕೆ.ಟಿ.ಪಿ.ಪಿ. ನಿಯಮಾನುಸಾರ ಕ್ರಮ ವಹಿಸಿರುವಂತ ಸತ್ಯ ಸತ್ಯತೆಗಳನ್ನು ಅರಿಯದೆ ಕೆಲವರು ನನ್ನ ವಿರುದ್ದ ದುರುದ್ದೇಶ ಪೂರಕವಾಗಿ ಅಪಪ್ರಚಾರ ಮಾಡಿ ಸಾರ್ವಜನಿಕರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಎಲ್ಲಾ ಆರೋಪಗಳಿಗೆ ಸಮಾಜಾಷಿ ನೀಡದಿದ್ದಲ್ಲಿ ಈ ಆರೋಪಗಳ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು,
ದೇಶದಾದ್ಯಂತ ಮಹಾಮಾರಿ ಕೋವಿಡ್ ಸಂಕ್ರಾಮಿಕ ರೋಗದ ಗಂಭೀರ ವಾತವರಣದ ಸಂದರ್ಭದಲ್ಲಿ ಸುಮಾರು ೩ ತಿಂಗಳು ಲಾಕ್ ಡೌನ್ ಅಗಿದ್ದ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು, ಆಗಾ ರೋಗಿಗಳಿಗೆ ನೀಡುವಂತ ಅವಶ್ಯವಿರುವ ಆರೋಗ್ಯ ಸೇವೆಯಡಿ ಗುಣಮಟ್ಟದ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸರ್ಕಾರವು ಹಲವಾರು ವಿನಾಯಿತಿಗಳನ್ನು ನೀಡಲಾಗಿತ್ತು ಎಂದರು.
ಎ,ಆರ್.ಎಸ್.ಕಾಯ್ದೆ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಮುಂತಾದ ಅನುದಾನಗಳ ಅಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಅಗತ್ಯವಿರುವಂತ ಪರಿಕರ ಮತ್ತು ಔಷಧಿಗಳನ್ನು ಮತ್ತು ಪ್ರಯೋಗಾಲಯಕ್ಕೆ ಅಗತ್ಯವಿರುವ ರಾಸಾಯನಿಕ ಔಷಧಿ, ಪರಿಕರಗಳು,ರೋಗಿಗಳ ಉಟೋಪಚಾರಗಳು ಹಾಗೂ ಆಸ್ಪತ್ರೆಗೆ ಅವಶ್ಯವಿರುವಂತ ವೈದ್ಯಕೀಯ ಪರಿಕರಗಳನ್ನು ಖರೀದಿಸಲು ಕರ್ನಾಟಕ ಪಾರದರ್ಶಕ ಸಂಗ್ರಹಣ ಕಾಯ್ದೆಯಡಿ ಮತ್ತು ಕೋವಿಡ್ ನಿಯಮಗಳ ಪ್ರಕಾರವಾಗಿ ೪ಎ ವಿನಾಯಿತಿಯಡಿ ಹಾಗೂ ಸರ್ಕಾರದ ಅರ್ಧಿಕ ಇಲಾಖೆಯ ಸುತ್ತೋಲೆಯ ಪ್ರಕಾರ ಇಲಾಖೆಯ ಮೇಲಿನಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ, ಎ.ಆರ್.ಎಸ್.ಆಸ್ಪತೆಯ ಸಮಿತಿಯ ಅನುಮತಿ ಮೇರೆಗೆ ಖರೀಧಿಸಲಾಗಿದೆ ಎಂದು ಹೇಳಿದರು.
ಅನುದಾನಗಳನ್ನು ಚೆಕ್ ಮೂಲಕವಾಗಿ ಖಾತೆಗಳಿಗೆ ವಿತರಿಸಲಾಗಿದೆ. ಜಿಲ್ಲಾ ಶಸ್ತ್ರ ಚಿಕಿತ್ಸಾಕರು ಹಾಗೂ ನಿವಾಸಿ ವೈದ್ಯಾಧಿಕಾರಿಗಳು ಖಜಾನೆ ೨ ಪ್ರಕಾರ ಜಂಟಿಯಾಗಿ ಸಹಿ ಮಾಡಿ ಸಂಬಂಧ ಪಟ್ಟ ಸರಬರಾಜುದಾರರ ಸಂಸ್ಥೆಗಳಿಗೆ ವಿತರಿಸಲಾಗಿದೆ ಇದಕ್ಕೆ ಸಂಬಂಧ ಪಟ್ಟ ಬಿಲ್ ಹಾಗೂ ವೋಚರ್‌ಗಳನ್ನು ಅರ್ಥಿಕ ಸಲಹೆಗಾರರಾದ ಶ್ರೀಮತಿ ಬೀನಾ ಮತ್ತು ಲೋಕಾಯುಕ್ತರು ಹಾಗೂ ಮುಖ್ಯ ಜಾಗೃತಿ ಇಲಾಖೆಯ ಅಧಿಕಾರಿಗಳ ಕೋಶಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅದರೆ ಅರ್ಥಿಕ ಸಲಹೆಗಾರರಾದ ಶ್ರೀಮತಿ ಬೀನಾ ಮತ್ತು ಕಚೇರಿಯ ಅಧೀಕ್ಷಕರಾದ ಕೆ.ವಿ.ಸಿ.ರೆಡ್ಡಿ ಅವರುಗಳು ನಾವು ಸಲ್ಲಿಸಿರುವಂತ ಅಧಿಕೃತ ದಾಖಲೆಗಳನ್ನು ಪರಿಶೀಲಿಸದೆ ಏಕಪಕ್ಷವಾಗಿ ಹಾಲಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ.ವಿಜಯಕುಮಾರ್ ಮತ್ತು ಇತರರು ದುರುದ್ದೇಶ ಪೂರಕವಾಗಿ ನನ್ನ ತೇಜೋವಧೆ ಮಾಡಲು ನಮ್ಮ ದಾಖಲೆಗಳನ್ನು ಗಣನೆಗೆ ಪಡೆಯದೆ ಇಲಾಖೆಯ ಮೇಲಿನ ಅಧಿಕಾರಿಗಳಿಗೆ ತಪ್ಪ ಮಾಹಿತಿಯ ವರದಿಯನ್ನು ಸಲ್ಲಿಸಿದ್ದಾರೆ ಎಂದು ಅರೋಪಿಸಿದರು.
ಎ.ಆರ್.ಎಸ್.ಅನುದಾನಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆಯದೆ ಕೋಟೇಷನ್ ಪಡೆದು ಸರಬರಾಜುದಾರರಿಂದ ಪರಿಕರಗಳನ್ನು ಹಾಗೂ ಔಷಧಿಗಳನ್ನು ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಖರೀದಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಮೇಲಿನ ಅಧಿಕಾರಿಗಳಿಗೆ ಮತ್ತು ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು,