ವಿವೇಕಾನಂದ ವಿದ್ಯಾ ನಿಕೇತನ ಶಾಲೆಗೆ ಕುಸ್ಮಾ ಅವಾರ್ಡ್
ಕಲಬುರಗಿ:ಸೆ.26:ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಬೆಂಗಳೂರು, ವಿವೇಕಾನಂದ ವಿದ್ಯಾನಿಕೇತನ ಶಾಲೆಗೆ “ಕುಸ್ಮಾ ಸ್ಕೂಲ್ ಮ್ಯಾನೇಜ್ಮೆಂಟ್ ಎಕ್ಸಲೆನ್ಸ್ ಅವಾರ್ಡ್” ನೀಡಿ ಗೌರವಿಸಿದೆ. ಇದು ನಮ್ಮ ಶಾಲೆಗೆ ತಂದ ಗೌರವ ಎಂದು ಸುವರ್ಣ ಭಗವತಿ ಹೇಳಿದರು.
ಇತ್ತೀಚಿಗೆ ಬೆಂಗಳೂರಿನ ಭಾರತ್ ಸ್ಕೌಟ್ ಹಾಗೂ ಗೈಡ್ಸ್ ನ ಆಡಿಟೋರಿಯಂನಲ್ಲಿ ನಡೆದ ಕುಸ್ಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯನಿ ಅಂಬಿಕಾ ರೆಡ್ಡಿ ಕುಸುಮ ಪುರಸ್ಕಾರವನ್ನು ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ ಅವರಿಗೆ ಹಸ್ತಾಂತರಿಸಿ ಅಭಿನಂದಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ. ಇದು ನಮ್ಮ ಶಾಲೆಗೆ ಸಂತಸದ ಹಾಗೂ ಹೆಮ್ಮೆಯ ಸಂಗತಿ. ಈ ಪುರಸ್ಕಾರದಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ನಾವು ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು ಎಂದು ಸುವರ್ಣ ಭಗವತಿ ಹೇಳಿದರು.
ಶಾಲೆಗೆ ಈ ಪುರಸ್ಕಾರ ಬಂದಿರುವುದಕ್ಕೆ ಶಾಲಾ ಸಿಬ್ಬಂದಿ ಹಾಗೂ ಪೆÇೀಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಶೈಕ್ಷಣಿಕ ಸಂಯೋಜಕ ನಿಖಿಲ್ ಪಾಟಿಲ್, ಸುಮಾ ಭಗವತಿ, ಸುಷ್ಮಾ ಭಗವತಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.