ದರ್ಶನ್ ವಿಚಾರಣೆ ಆರಂಭಿಸಿದ ಐಟಿ ತಂಡ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.26: ಬೆಂಗಳೂರಿನಿಂದ ಬಂದಿರುವ ಐದು ಜನ ಅಧಿಕಾರಿಗಳ ಐಟಿ ತಂಡ ಇಂದು ನಗರದ ಸೆಂಟ್ರಲ್ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್ ವಿಚಾರಣೆ ನಡೆಸಿದ್ದಾರೆ.
ಜೈಲಿನ ಸೂಪರಿಂಟೆಂಡೆಂಟ್ ಕೊಠಡಿಯಲ್ಲಿ ಅವರ ಎದುರಿನಲ್ಲಿಯೇ ನ್ಯಾಯಾಲಯದ ಸೂಚನೆಯಂತೆ ಇಂದು ಮತ್ತು  ನಾಳೆ ವಿಚಾರಣೆ ನಡೆಯಲಿದೆ.
ರೇಣುಕಸ್ವಾಮಿ ಕೊಲೆ ಆರೋಪವನ್ನು ಮತ್ತೊಬ್ಬರು ಒಪ್ಪಿಕೊಳ್ಳಲು 80 ಲಕ್ಷ ರೂ ನಗದು ಹಣ ನೀಡಿದ ಕುರಿತು ತನಿಖೆ ನಡೆಯಿತ್ತಿದೆ.
ದರ್ಶನ ಪರ ಅವರ ಆಡಿಟರ್ ಎಂ.ಆರ್.ರಾವ್ ಮತ್ತವರ ಸಹಾಯಕ ಹಾಗು ವಕೀಲ‌ರಾಮಸಿಂದ್ ವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಐಟಿಯವರ ಪ್ರಶ್ನೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ನಿನ್ನೆಯೇ ವಕೀಲರು ಭೇಟಿ ಮಾಡಿ ತಿಳಿಸಿದ್ದರು.
ಇಂದು ಬೆಳಿಗ್ಗೆ 11.30 ಯಿಂದ ವಿಚಾರಣೆ ನಡೆಯುತ್ತಿದ್ದು. ವಿಚಾರಣೆ ವೇಳೆ ದರ್ಶನ್ ಅವರು ನನಗೇನು ಗೊತ್ತಿಲ್ಲ ಎಂಬ ಉತ್ತರ ನೀಡುತ್ತಿದ್ದಾರಂತೆ.