ಹಿಂದೂ ಧರ್ಮವು ‘ವಸುದೈವ ಕುಟುಂಬಕಂ’ ಎಂಬ ತತ್ವವನ್ನು ಸಾರಿದೆ: ಹಾರಿಕಾ
ಆಳಂದ: ಸೆ.26:ಹಿಂದೂ ಧರ್ಮವು ಪ್ರಾಚೀನ ಕಾಲದಿಂದಲೂ ಜಗತ್ತಿನ ವೈವಿಧ್ಯಮಯ ಧರ್ಮದ ಆಚರಣೆಗಳನ್ನು ತಮ್ಮೊಳಗೊಂಡಿದೆ. ಹಿಂದೂ ಧರ್ಮವು ‘ವಸುದೈವ ಕುಟುಂಬಕಂ’ ಎಂಬ ತತ್ವವನ್ನು ಸಾರುತ್ತಿದ್ದು, ಈ ತತ್ವವು ಪ್ರಪಂಚದ ಎಲ್ಲ ಜೀವಿಗಳು ಒಂದೇ ಕುಟುಂಬದ ಭಾಗವೋ ಎಂಬುದನ್ನು ವ್ಯಕ್ತಪಡಿಸುತ್ತದೆ ಎಂದು ಖ್ಯಾತ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಅವರು ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಹಮ್ಮಿಕೊಂಡ ಹಿಂದೂ ಧರ್ಮದ ಮೂಲ ತತ್ತ್ವಗಳು ಮತ್ತು ಆಚಾರ-ವಿಚಾರಗಳ ಮಹತ್ವದ ವಿಷಯ ಕುರಿತಾದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಧರ್ಮವು ಕೇವಲ ವ್ರತಗಳು ಅಥವಾ ಆಚರಣೆಗಳ ಸಮೂಹವಲ್ಲ, ಇದು ಜೀವನದ ಪ್ರತಿ ಕ್ಷಣದಲ್ಲೂ ಪವಿತ್ರತೆ, ಶಾಂತಿ, ಸಹಾನುಭೂತಿ, ಹಾಗೂ ಪರೋಪಕಾರವನ್ನು ಬೆಳಸುವ ಮಾರ್ಗವೆಂದು ಅವರು ಹೇಳಿದರು.
ಪುರಾಣ ಮತ್ತು ವೇದಗಳ ಉಲ್ಲೇಖಗಳನ್ನು ಮಾಡುತ್ತಾ ಹಿಂದೂ ಧರ್ಮದ ತಾತ್ವಿಕತೆ, ಅದರ ಅಂತರಂಗವನ್ನು ವಿಶ್ಲೇಷಿಸಿದರು. ಧರ್ಮವು ನಾವೆಲ್ಲರೂ ಭಗವಂತನ ಅಂಶ ಎಂದು ತಿಳಿಯುವಂತೆ ಮಾಡುತ್ತದೆ. ಇದನ್ನು ಆಚರಿಸುವ ಸಮಯದಲ್ಲಿ ನಾವು ಪ್ರಪಂಚದಲ್ಲಿ ಸಕಾರಾತ್ಮಕ ಶಕ್ತಿಯನ್ನು ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು.
ಹಿಂದೂ ಆಚಾರ-ವಿಚಾರಗಳು ಹಾಗೂ ಸಂಪ್ರದಾಯಗಳು ಕೇವಲ ಪುರಾತನ ಕಾಲದ ವಿಶಿಷ್ಟತೆಗಳಲ್ಲ, ಇವುಗಳು ಮಾನವ ಸಮಾನತೆ, ಬೋಧನೆ ಮತ್ತು ಜೀವನದ ಗಂಭೀರ ಅಂಶಗಳನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಂಡಿವೆ ಎಂಬುದನ್ನು ಅವರ ವಿವರಿಸಿದರು. ಸಂಸ್ಕಾರಗಳು ನಾವು ಜೀವನವನ್ನು ನೈತಿಕವಾಗಿ ಮತ್ತು ಧಾರ್ಮಿಕವಾಗಿ ಎದುರಿಸಬೇಕು ಎಂಬುದನ್ನು ತೋರಿಸುವ ದಾರಿಗಳಾಗಿವೆ ಎಂದು ಅವರು ಹೇಳಿದರು.
ಮಹಾಗಣಪತಿ ಉತ್ಸವ’ವು ನಮ್ಮ ಸಾಂಸ್ಕøತಿಕ ಮೌಲ್ಯಗಳನ್ನು ಪೋಷಿಸುವ, ನಮ್ಮ ಧಾರ್ಮಿಕ ಆಚರಣೆಗಳನ್ನು ಪುನರುಜ್ಜೀವಗೊಳಿಸುವ ಮತ್ತು ಸಮಾಜದಲ್ಲಿ ಒಗ್ಗಟ್ಟನ್ನು ಹೆಚ್ಚಿಸುವ ಉತ್ತಮ ವೇದಿಕೆಯಾಗಿದೆಯೆಂದು ಹೇಳಿದರು.
ಧರ್ಮವೂ ಮನಶಾಂತಿಯ ಮೂಲಬಲ: ಡಾ. ಚನ್ನಬಸವ ಶ್ರೀ
ಸಾನ್ನಿಧ್ಯ ವಹಿಸಿದ್ದ ಆಳಂದ, ನಂದವಾಡಗಿ, ಜಾಲವಾದಿಗಿ ಶ್ರೀ ಮಾಂತೇಶ್ವರ ಸಂಸ್ಥಾನ ಹಿರೇಮಠದ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಮಾತನಾಡಿ, ಧರ್ಮದ ಆಧ್ಯಾತ್ಮಿಕತೆಯ, ದಾರ್ಶನಿಕತೆಯ ಮತ್ತು ಶಾಂತಿ-ಸಹಿಷ್ಣುತೆ ಪ್ರಾರಂಭವಾಗಿ ಮಾನವಸೇವೆ ಮತ್ತು ಶ್ರೇಷ್ಠ ಜೀವನತತ್ತ್ವಗಳ ಭಕ್ತಿಯು ನಮ್ಮ ಆಂತರಿಕ ಶಕ್ತಿ ಮತ್ತು ಮನಶಾಂತಿಯನ್ನು ಹೆಚ್ಚಿಸುವ ಮೂಲಬಲ ಎಂದು ಹೇಳಿದರು.
ಧರ್ಮದ ಅನೇಕ ಆಚಾರ-ವಿಚಾರಗಳು ಮಾನವ ಸಮಾನತೆ, ಸಹನಶೀಲತೆ ಮತ್ತು ಪರಸ್ಪರ ಸಹಾಯ ಮಾಡುವಂತೆ ತಿದ್ದಿದ್ದೇವೆ. ಧರ್ಮವು ಯಾವುದೇ ಒಂದು ವ್ಯಕ್ತಿಗೇ ಸೀಮಿತವಲ್ಲ, ಇದು ಎಲ್ಲಾ ಜೀವಿಗಳ ಮತ್ತು ಪ್ರಕೃತಿಯ ಪರಿಪೂರ್ಣ ಸಮ್ಮಿಶ್ರಣವಾಅಗಿದೆ, ಧರ್ಮದ ಮೂಲ ಉದ್ದೇಶವು ಪರೋಪಕಾರ, ದೀನರಕ್ಷಣೆ, ಮತ್ತು ಮಾನವ ಒಗ್ಗಟ್ಟು ನಿರ್ಮಿಸುವುದೇ ಆಗಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿಯನ್ನು, ಸಂಹಿತೆಯನ್ನು, ಮತ್ತು ಸಾಂಸ್ಕøತಿಕ ಪರಂಪರೆಯನ್ನು ಗೌರವಿಸುವ ಮೂಲಕ ಎಲ್ಲರೂ ಸಾತ್ತ್ವಿಕ ಜೀವನವನ್ನು ನಡೆಸಬೇಕೆಂದು ಬೋಧಿಸಿದ ಎಂದು ಹೇಳಿದರು.
ಕೇವಲ ಧಾರ್ಮಿಕ ಆಚರಣೆಗಳಲ್ಲ, ಜೀವನವನ್ನು ಶ್ರೇಷ್ಠಗೊಳಿಸುವ ಮಾರ್ಗಗಳು, ನೈತಿಕ ಮೌಲ್ಯಗಳೆಂಬುದನ್ನು ಒತ್ತಿಹೇಳಿ, ಈ ಗಾಣಪತಿ ಉತ್ಸವವು ನಾವು ಅವಲಂಬಿಸಬೇಕಾದ ಧಾರ್ಮಿಕ ಪಥದ ಕುರಿತು ಅನೇಕ ಪಾಠಗಳನ್ನು ನೀಡುತ್ತದೆ ಎಂದು ನಿರೂಪಿಸಿದ ಅವರು, ಪ್ರತಿ ವ್ಯಕ್ತಿಯು ತನ್ನ ಜೀವನದಲ್ಲಿ ಧರ್ಮವನ್ನು ಪ್ರಾಮಾಣಿಕತೆ, ಆದರ್ಶ, ಮತ್ತು ಮಾನವೀಯತೆಯೊಂದಿಗೆ ಅಳವಡಿಸಿಕೊಳ್ಳಬೇಕು ಎಂದು ಡಾ. ಅಭಿನವ ಚನ್ನಬಸವ ಶ್ರೀಗಳು ಹೇಳಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಯಳಸಂಗಿ ಮಠದ ಶ್ರೀ ಪರಮಾನಂದ ಶ್ರೀ, ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು, ಸಿದ್ಧಲಿಂಗ ಶಿವಾಚಾರ್ಯ ಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ವಿಶ್ವಕರ್ಮ ಶ್ರೀಗಳು, ಉತ್ಸವ ಸಮಿತಿ ಅಧ್ಯಕ್ಷ ಮಹೇಶ ಗೌಳಿ, ಆನಂದ ಪಾಟೀಲ ಕೊರಳ್ಳಿ ವೇದಿಕೆಯಲ್ಲಿದ್ದರು.
ಈ ವೇಳೆ ನಾಗರಿರು ಮತ್ತು ಉತ್ಸವ ಸಮಿತಿ ಕಾರ್ಯಕರ್ತರು ಪಾಲ್ಗೊಂಡಿದ್ದರು.