ಕೊಟ್ಟೂರು ಸ್ವಾಮಿ ಮಠದಲ್ಲಿ ವಿವಿಧ ಕಾರ್ಯಕ್ರಮಪಾದಯಾತ್ರೆ ಜಯಂತಿ ಉಡಿತುಂಬುವುದು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಸೆ.28 ಮತ್ತು 29 ರಂದು ಹಾನಗಲ್ಲು ಕುಮಾರ ಶಿವಯೋಗಿಗಳ 157 ಮತ್ತು ಸಂಗನಬಸವ ಸ್ವಾಮಿಗಳ 86 ನೇ ಜಯಂತೋತ್ಸವದ ಕಾರ್ಯಕ್ರಮಗಳನ್ನು ಹಮ್ನಿಕೊಂಡಿದೆ ಎಂದು ಮಠದ ಶ್ರೀಗಳಾದ  ಬಸವಲಿಂಗ ಶ್ರೀಗಳು ತಿಳಿಸಿದರು.
ಕಾರ್ಯಕ್ರಮಗಳ ಪೂರ್ವ ಸಿದ್ದತೆ ಕುರಿತಂತೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆಯನ್ನು ನಡೆಸಿ. ಸೆ.28 ರಂದು ಸಂಜೆ ತಾಲೂಕಿನ ಶ್ರೀಧರಗಡ್ಡೆಯಿಂದ ಮಠದ ವರೆಗೆ ಭಕ್ತರು ಪಾದಯಾತ್ರೆ ಮಾಡುತ್ತಿದ್ದು.
ಈ ವೇಳೆ ನಗರದ ಬಾಲಭಾರತಿ ಶಾಲೆ ಬಳಿಯಿಂದ ಜನೊದ ಕಲಾ ತಂಡಗಳ ಮೂಲಕ‌
ಹಾನಗಲ್ಲು ಶ್ರೀಗಳ ಮತ್ತು ಸಂಗನಬಸವ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ತಾಳೂರು ರಸ್ತೆ, ದುರ್ಗಮ್ಮ ಗುಡಿ, ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ ಮೂಲಕ ಮಠಕ್ಕೆ ಬಂದು ತಲುಪಲಿದೆ.
ಮೆರವಣಿಗೆಗೆ ಸಮುದಾಯದ ಹೆಚ್ಚಿನ ಜನತೆ ಆಗಮಿಸಿ ಯಶಸ್ವಿಗೊಳಿಸಲು ಶ್ರೀಗಳು ಕೋರಿದರು.
ಅಂದು  ಸಂಜೆ 7 ಕ್ಕೆ ಕುಮಾರಶ್ರೀಗಳ ಪುರಾಣದ ಮಂಗಲೋತ್ಸವ,   ವಿವಿಧ ಕ್ಷೇತ್ರಗಳ, ಸಮುದಾಯದ ಮುಖಂಡರಿಗೆ,  ಗಣ್ಯರಿಗೆ ಸನ್ಮಾನ ಹಮ್ಮಿಕೊಂಡಿದೆ.
ಸೆ.29 ರಂದು ಮಧ್ಯಾಹ್ನ 3 ಕ್ಕೆ 1111 ಜನ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ, ಜನಪ್ರತಿನಿಧಿಗಳಿಗೆ ಗೌರವ ಸನ್ಮಾನ ನಡೆಯಲಿದ್ದು.
 ಸಂಜೆ 5 ಕ್ಕೆ  ಉಭಯ ಶ್ರೀಗಳ ಉತ್ಸವ ನಡೆಯಲಿದೆ. ಆ ಬಳಿಕ 6.30 ಕ್ಕೆ ಜಯಂತೋತ್ಸವ ಮತ್ತು ಬಸವ ಚರಿತ್ರೆ, ವೀರಶೈವ ಲಿಂಗಾಯತ ಹಂಡೆವಜೀರ ಜನಾಂಗದ ಪರಂಪರೆ ಮತ್ತು ಮತಾಚರಣೆಗಳ ಕುರಿತು ಕೃತಿಗಳ ಬಿಡುಗಡೆ ನಡೆಯಲಿದೆ.
ಶ್ತೀಧರಗಡ್ಡೆಯ ಸಂಗನಬಸವೇಶ್ವರ ಶಾಲೆಯ ವಿದ್ಯಸರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆಂದು ಶ್ರೀಗಳು ತಿಳಿಸಿದರು.