ಹಂಪಿಯಲ್ಲಿ ಸ್ವಚ್ಛತಾ ಹೀ ಸೇವಾ
ಸಂಜೆವಾಣಿ ವಾರ್ತೆ
ಹೊಸಪೇಟೆ ವಿಜಯನಗರ, ಸೆ.27: ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಅಂಗವಾಗಿ ಹಂಪಿ ಪರಿಸರದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ   ಪ್ರಾರಂಭಗೊಂಡಿತು.
ವಿಜಯನಗರ ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ, ಮುಜರಾಯಿ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ಗ್ರಾಮ ಪಂಚಾಯಿತಿ ಮತ್ತು ವಿವಿಧ ಸಂಘಟನೆ ಸಹಯೋಗದೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು. ಹಂಪಿಯ ಎದುರು ಬಸವಣ್ಣ ಮಂಟಪದ ಸ್ಮಾರಕದಲ್ಲಿ ಪ್ರವಾಸೋಧ್ಯಮ ಇಲಾಖೆ ಉಪ ನಿರ್ಧೇಶಕರಾದ ಪ್ರಭುಲಿಂಗ ಎಸ್ ತಳಕೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಂಪಿ ಬಜಾರು, ಪ್ರವಾಸೋಧ್ಯಮ ಇಲಾಖೆ ಆವರಣ, ಮಾತಂಗ ಪರ್ವತದ ರಸ್ತೆ ಸೇರಿದಂತೆ ವಿವಿಧೆಡೆ ಸ್ವಚ್ಚತೆ ಮಾಡಲಾಯಿತು. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳಾದ ಅನಿರುದ್ಧ್ ದೇಸಾಯಿ, ಸುನಿಲ್‍ಕುಮಾರ್, ಹಂಪಿ ಗ್ರಾಮಪಂಚಾಯಿತಿ ಪಿಡಿಓ, ಗಂಗಾಧರ, ಅಧ್ಯಕ್ಷೆ ರಜನಿ ಷಣ್ಮುಖ, ಪ್ರವಾಸೋಧ್ಯಮ ನಿಗಮದ ಹೋಟೆಲ್ ಮಯೂರ ಭುವನೇಶ್ವರಿ ವ್ಯವಸ್ಥಾಪಕ ಸುನಿಲ್ ಸೇರಿದಂತೆ ಪ್ರವಾಸಿ ಮಾರ್ಗದರ್ಶಿಗಳು, ಪ್ರವಾಸಿ ಮಿತ್ರರರು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.