ಹಬೋಹಳ್ಳಿ : ಕಾಟಾಚಾರಕ್ಕೆ ನಡೆದ ದಸರಾ ಕ್ರೀಡಾಕೂಟ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.26 ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಕ್ರೀಡಾಕೂಟವನ್ನು ಯುವ ಸಬಲೀಕರಣ ಕ್ರೀಡ ಇಲಾಖೆ ಬುಧವಾರ  ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು.
ಪ್ರಚಾರ ಇಲ್ಲದೆ ಕ್ರೀಡಾ ಅಭಿಮಾನಿಗಳು ಮತ್ತು ಆಸಕ್ತರು ಕ್ರೀಡಾಕೂಟದಿಂದ ದೂರ ಉಳಿದಿದ್ದರು. ಯಾವುದೇ ಸಿದ್ಧತೆ ಇಲ್ಲದೆ ಕಾಟಾಚಾರಕ್ಕೆ ಮಾಡುವ ಇಂತಹ ಕ್ರೀಡಾಕೂಟದಿಂದ ಯಾರಿಗೆ ಲಾಭವಾಗುತ್ತದೆ ಗೊತ್ತಿಲ್ಲ. ಬಂದಂತಹ ಕ್ರೀಡಾಪಟುಗಳಿಗೆ ನೀರಿನ ವ್ಯವಸ್ಥೆ, ಆರೋಗ್ಯದ ವ್ಯವಸ್ಥೆ ಊಟದ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಭಾಗವಹಿಸಿದ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದರು.
ಕ್ರೀಡಾಕೂಟವನ್ನು ಆಯೋಜಿಸುವವರು ಪ್ರತಿವರ್ಷ ಹಣ ಸಂದಾಯದ ಅರ್ಜಿ ತುಂಬಿಸಿಕೊಳ್ಳುತ್ತಾರೆ. ಇದುವರೆಗೂ ಯಾವುದೇ ಗೌರವದನ, ಮತ್ತು ಕ್ರೀಡಾಪಟುಗಳಿಗೆ ಹಣ ಸಂದಾಯವಾಗಿಲ್ಲ ಎಂದು ದೈಹಿಕ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.
 ಕ್ರೀಡಾಕೂಟದಲ್ಲಿ ಭಾಗವಹಿಸಲು ಕ್ರೀಡಾ ಆಸಕ್ತರು ಕಡಿಮೆ ಇರುವುದರಿಂದ ಆಟ ಆಡಿಸದೆ ಪ್ರಶಸ್ತಿ ಪತ್ರ ವಿತರಿಸಿದರು.