ಕೇಂದ್ರ ಸರ್ಕಾರದ ನಡೆ ವಿರುದ್ದಡಿಎಸ್ ಎಸ್ ಧರಣಿ ಸತ್ಯಾಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.26: ಒಂದು ದೇಶ ಒಂದು ಚುನಾವಣೆ ವಿಷಯ ಚರ್ಚಿಸದೆ ಜಾರಿ ಮಾಡಲು ಹೊರಟಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಡೆಯನ್ನು ಮತ್ತು
ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮೀಸಲಾತಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ ಜೆಡಿಎಸ್‌ ಧೋರಣೆಯನ್ನು ಖಂಡಿಸಿ. ಮುನಿರತ್ನ ಶಾಸಕ ಆರೋಪಿಯನ್ನು ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ. ನಗರದ ಡಿಸಿ‌ಕಚೇರಿ ಮುಂದೆ ಇಂದು  ಡಾ.ಡಿ.ಜಿ.ಸಾಗರ್ ನೇತೃತ್ವದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿಸಿ ಕಚೇರಿ ಮುಂದೆ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ವಿರೋಧ ಪಕ್ಷದ ನಾಯಕರಾದ “ರಾಹುಲ್ ಗಾಂಧಿ ಅವರು ಮೀಸಲಾತಿ ವಿರೋಧ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿ, ಜೆ.ಡಿ.ಎಸ್. ನಾಯಕರು ಮಾಡುತ್ತಿರುವ ಪ್ರತಿಭಟನೆ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಸದಾ ಮೀಸಲಾತಿಯನ್ನು ವಿರೋಧಿಸುತ್ತಾ ಬಂದ ಇವರು ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ?
ಮೀಸಲಾತಿ ವಿರೋಧವನ್ನು ರಕ್ತಗತವಾಗಿಸಿಕೊಂಡಿರುವ ಬಿ.ಜೆ.ಪಿ. ನಾಯಕರಿಗೆ ರಾಹುಲ್‌ ಗಾಂಧಿಯವರು ಹೇಳಿಕೆಯನ್ನು ಅರ್ಥ ಮಾಡಿಕೊಳ್ಳುವ ಜ್ಞಾನವಾಗಲಿ ವ್ಯವಧಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ, ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶ ಸಾಧನೆಯಾಗಬೇಕು. ಇದನ್ನು ರಾಹುಲ್‌ ಗಾಂಧಿಯವರು ಹೇಳಿದ್ದಾರೆ. ಇದು ಹೇಗೆ ಮೀಸಲಾತಿ ವಿರೋಧ ಹೇಳಿಕೆಯಾಗುತ್ತದೆ.
ಸರ್ವರಿಗೂ ಶಿಕ್ಷಣ ಉದ್ಯೋಗ ಮತ್ತು ಅವಕಾಶಗಳಲ್ಲಿ ಸಮಾನ ಪಾಲು ಸಿಗಬೇಕೆಂಬ ಉದ್ದೇಶದಿಂದಲೆ ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಆದರೆ ಮೀಸಲಾತಿಯ ಹೊರತಾಗಿಯೂ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ. ಸಾಮಾಜಿಕ ಅಸಮಾನತೆ ಕಡಿಮೆಯಾಗಿಲ್ಲ ಇದಕ್ಕೆ ಬಿಜೆಪಿ ನಾಯಕರಂತಹ ಜಾತಿ ಪಟ್ಟ ಭದ್ರರು ಕಾರಣ.
ಒಕ್ಕಲಿಗ ಮತ್ತು ದಲಿತ ಸಮುದಾಯಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ಶಾಸಕ ಮುನಿರತ್ನ ಮಾತಾಡಿದ್ದಾರೆ ಎನ್ನಲಾಗಿರುವ ಆಡಿಯೋ ಈಗಾಗಲೇ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ಘಟನೆ ಸರಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸಮಿತಿಯು ಸರಕಾರವನ್ನು ಆಗ್ರಹಿಸುತ್ತದೆ.
ಒಂದು ದೇಶ ಒಂದು ಚುನಾವಣೆ ವಿಷಯ ಚರ್ಚಿಸದೆ ಏಕಾಏಕಿ ಜಾರಿ ಮಾಡಲು ಹೊರಟಿರುವ ಕೇಂದ್ರದ ಬಿಜೆಪಿ ಸರಕಾರದ ನಡೆಯನ್ನು ವಿರೋಧಿಸಿದ
ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯ್ತು.
ಧರಣಿಯಲ್ಲಿ ಹೆಚ್ ಬಿ ಗಂಗಪ್ಪ, ಜಿಲ್ಲಾ ಸಂಚಾಲಕರು, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಕೆ ದೇವದಾಸು, ಹೆಚ್ ಆಂಜನೇಯ ಕೊಳಗಲ್ಲು ಮಲ್ಲಯ್ಯ, ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟ, ಬಿ ರಮೇಶ, ಟಿ ಎಂ ಎರಿಸ್ವಾಮಿ, ಮುಖಂಡರುಗಳಾದ ಜಿ ಪಂಪಾತಿ ಕುಡತಿನಿ, ನಾಗೇಂದ್ರ, ದೀಪಾ ಪ್ರಿಂಟರ್ಸ್, ಮಲ್ಲಿಕಾರ್ಜುನ, ಹೆಚ್ ಮಲ್ಲಪ್ಪ, ತಾಲ್ಲೂಕು ಸಂಚಾಲಕರು, ಹೆಚ್ ಶಂಕರ, ಹೆಚ್ ದೊಡ್ಡಬಸಪ್ಪ ಸಿರುಗುಪ್ಪ, ಮಾರೆಪ್ಪ, ಹೆಚ್ ವೀರಾಪುರ, ಜಗದೀಶ, ಮೆಟ್ರಿ, ಭೀಮಶಂಕರ, ಮಹೇಶ ಭತ್ರಿ, ಎರಿಸ್ವಾಮಿ ಹಲಕುಂದಿ, ದುರ್ಗದಾಸು, ಭೀಮೇಶ, ಎಸ್ ವೀರೇಶ, ಶಿವು ಅಸುಂಡಿ, ಹನುಮಂತಪ್ಪ ಎತ್ತನಬೂದಿಹಾಳು, ತಿರುಮಲ ಎರಗುಡಿ, ಪರಶುರಾಮ ಸಿದ್ದಾರ್ಥ ನಗರ, ಹೊನ್ನೂರಸ್ವಾಮಿ ಬಿಸಲಹಳ್ಳಿ, ಗಂಗಣ್ಣ ಬಾಪೂಜಿ ನಗರ, ವಿಜಯ ಎಸ್ ಮಲ್ಲಿ, ಸಿ ನಾಗರಾಜ ಚೇಳ್ಳಗುರ್ಕಿ, ಹನುಮಂತ ಕುಡತಿನಿ ಮೊದಲಾದವರು ಪಾಲ್ಗೊಂಡಿದ್ದರು.