ವಿರಕ್ತಿಯ ಜ್ಯೋತಿ ಅಕ್ಕಮಹಾದೇವಿ:ಪ್ರೊ. ಬಸವರಾಜ ಕುಂಬಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.24:ಸಮಾಜದಲ್ಲಿ ಮಹಿಳೆಯರಿಗೂ ಪುರುಷರμÉ್ಟೀ ಸರಿಸಮಾನ ಸ್ಥಾನಮಾನ ಕಲ್ಪಿಸಬೇಕೆಂದು 12ನೇ ಶತಮಾನದಲ್ಲಿಯೇ ಹೋರಾಟ ಮಾಡಿದ ಧೀರ ವನಿತೆÀ ಅಕ್ಕಮಹಾದೇವಿ ಎಂದು ಹೊನ್ನುಟಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪೆÇ. ಬಸವರಾಜ ಕುಂಬಾರ ಹೇಳಿದರು.
ವಿಜಯಪುರದ ಸೇನಾ ನಗರದ ಶಿವಾಲಯ ದೇವಸ್ಥಾನದ ಆವರಣದಲ್ಲಿ ನಡೆದ ಬೆಳದಿಂಗಳ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಇಂದಿನ ಮಹಿಳೆಯರ ಬದುಕಿಗೆ ಅಕ್ಕ ಆದರ್ಶಪ್ರಾಯ ಅμÉ್ಟೀ ಅಲ್ಲದೇ ಪರಮ ವೈರಾಗ್ಯ ಮೂರ್ತಿಯಾಗಿ ಶರಣ ಚಳವಳಿಯ ಮುಂಚೂಣಿಯಲ್ಲಿದ್ದು ಕಲ್ಯಾಣಕ್ರಾಂತಿಯನ್ನು ನಡೆಸಿ, ಬಸವಣ್ಣ,,,ಚನ್ನಬಸವಣ್ಣ, ಅಲ್ಲಮಪ್ರಭುಗಳಂಥ ಶರಣ ಶ್ರೇಷ್ಠರ ಸಮಕಾಲೀನಳಾಗಿ, ಅವರೆಲ್ಲರ ಗೌರವಕ್ಕೆ ಪಾತ್ರಳಾಗುವುದರೊಂದಿಗೆ ಅವರ ಸಮಕ್ಕೆ ನಿಂತು ಶ್ರೇಷ್ಠ ವಚನಗಳನ್ನು ರಚಿಸಿದ ಕನ್ನಡದ ಪ್ರಥಮ ಕವಯಿತ್ರಿ ಹಾಗೂ ಶಿವನನ್ನೇ ಪತಿಯೆಂದು ಪರಿಭಾವಿಸಿ ಚೆನ್ನಮಲ್ಲಿಕಾರ್ಜುನನನ್ನು ವರಿಸಿ ವಿರಕ್ತಿಯ ಪರಮ ವೈರಾಗ್ಯಮೂರ್ತಿಯಾಗಿ, ವಿಭಕ್ತಿಯ ಜ್ಯೋತಿ ಎಂದಿನಿಸಿಕೊಂಡವಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಕುಮಾರ ಜೊಳ್ಳಿ ಮಾತನಾಡಿ, ಮಹದೇವಿ ಅಕ್ಕ ಕನ್ನಡದ ಪ್ರಥಮ ಮಹಿಳಾ ವಚನಕಾರ್ತಿಯಾಗಿ ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಭಾವಕ್ಕೆ ಬಲಿಯಾಗದೆ ಅಧ್ಯಾತ್ಮದ ಶಿಖರವೇರಿ ಮಹಿಳಾ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರೀವಾದಿ ಪ್ರಗತಿಪರ ಚಿಂತಕಿ ಎಂದರು.
ಇದೇ ಸಂದರ್ಭದಲ್ಲಿ ಯೋಗ ಪಟು ಅಂಬಿಕಾ ರಜಪೂತ ಮತ್ತು ಸರೋಜಿನಿ ಬಾಗಲಕೋಟ ಅವರನ್ನು ಸನ್ಮಾನಿಸಲಾಯಿತು, ವೇದಿಕೆ ಮೇಲೆ ಲಕ್ಷ್ಮಿ ದೇವಸ್ಥಾನ ಕಮಿಟಿಯ ನಿರ್ದೇಶಕಿ ಸಕ್ಕೂಬಾಯಿ ಹಡಪದ ಇದ್ದರು.
ಕಾರ್ಯಕ್ರಮದಲ್ಲಿ ಶಿವಾಲಯ ದೇವಸ್ಥಾನ ಕಮಿಟಿಯ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಬಿ,ಡಿ ಕಡಕೋಳ, ಸಾಬು ಅಗ್ರಾಣಿ, ಶ್ರೀಶೈಲ ಅವಜಿ, ಶೋಭಾ ಜಗತಾಪ, ಶಾಂತಕ್ಕ ಕಪಾಲಿ, ಸುನಿತಾ ಉಮರಾಣಿ,ಮಂಗಲಾ ಶ್ಯಾಮಾಗೋಳ, ಲಕ್ಷ್ಮಿ ಕುಂಬಾರ, ಭವಾನಿ ಜಾಧವ, ಜ್ಯೋತಿ ಜೊಳ್ಳಿ, ಕೀರ್ತಿ ಮಠಪತಿ, ರೇಣುಕಾ ಚವ್ಹಾಣ, ಗೌರಿ ಕುಲಕರ್ಣಿ, ವಿಜಯಲಕ್ಷ್ಮಿ ಮಠಪತಿ, ನಿಂಗಪ್ಪ ನಿಂಬಾಳ್ಕರ್, ಅಲ್ಲಂಪ್ರಭು ಶಿರಹಟ್ಟಿ, ಶಿವರಾಜ ಓಕತಿಹಾಳ, ಶರಣಬಸಪ್ಪ ಬಿಲ್ಲಾಡ ಮುಂತಾದವರು ಉಪಸ್ಥಿತರಿದ್ದರು,