ವಿಶೇಷಚೇತನ ಯುವತಿಗೆ ವ್ಹೀಲ್ ಚೇರ್ ದೇಣಿಗೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.24: ನಗರದ ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶೇಷಚೇತನ ಕುಮಾರಿ ಮಶೀರಾಬಾನು ಹಕೀಂ ಎಂಬ ಯುವತಿಗೆ ವ್ಹೀಲ್ ಚೇರನ್ನು ಸಂಸ್ಥೆಯ ಕಛೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಪಂದನಾ ಸ್ವಯಂ ಸೇವೆ ಸಂಸ್ಥೆಯ ಅಧ್ಯಕ್ಷÀ ಮಹಾದೇವಪ್ಪ ದೇವರ ಮಾತನಾಡಿ, ಸಮಾಜದಲ್ಲಿ ಆಗುವು ಕುಂದುಕೊರೆತೆಯನ್ನು ವಿಶೇಷವಾಗಿ ಗಮನಿಸಿ ಅರ್ಹರಿದ್ದವರಿಗೆ ಹುಡುಕಿ ಅವರಿಗೆ ಈ ರೀತಿಯ ಸಹಾಯ ಮಾಡುವ ಸಂಸ್ಥೆ ಎಂದರೆ ಕೇರಿಂಗ್ ಸೋಲ್ಸ್ ಆಗಿದೆ. ಇದರ ಕಾರ್ಯ ವೈಖರಿಯೂ ಅತ್ಯುತ್ತಮವಾಗಿ ಸದಾ ಸಮಾಜಪರ ಕಾಳಜಿ ತೋರುತ್ತಿದೆ. ಈ ಉಪಕ್ರಮವು ವಿಕಲಾಂಗ ವ್ಯಕ್ತಿಗಳನ್ನು ಬೆಂಬಲಿಸಲು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಂಸ್ಥೆಯಿಂದ ಮೇಲಿಂದ ಮೇಲೆ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ. ಇದೇ ರೀತಿಯಾಗಿ ನಿರ್ಗತಿಕ, ಬಡಕುಟುಂಬದ ಬೆನ್ನೆಲುಬಾಗಿ ಸಂಸ್ಥೆಯು ನಿಲ್ಲುವಂತೆ ಶಕ್ತಿ ನೀಡಲಿ ಎಂದು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮಹ್ಮದ್‍ಹುಸೇನ ದೊಡಮನಿ ಮಾತನಾಡಿ, ವಿಶೇಷ ಚೇತನರಿಗೆ ಸದ್ಯ ನೀಡಿರುವ ವ್ಹಿಲ್ ಚೇರ್ ಅವಳಿಗೆ ಸಂತಸವನ್ನುಂಟು ಮಾಡಿದೆ. ಇದೇ ರೀತಿಯಾಗಿ ಇಂತಹ ಮನಸ್ಥಿತಿಯುಳ್ಳವ ಪ್ರತಿಯೊಬ್ಬರಿಗೆ ನಮ್ಮ ಸಂಸ್ಥೆ ಅವರೊಂದಿಗೆ ಹೆಜ್ಜೆ ಹಾಕುತ್ತದೆ ಎಂದರು.
ಇದೇ ವೇಳೆ ಸದಸ್ಯರಾದ ಬಂದೇನವಾಜ್ ಲೋಣಿ, ವಿನಾಯಕ ಕುಂಟೆ, ರೋಹಿತ ಗುತ್ತಿಕುಂಡಾ, ಖೀಜರ್, ನಿಯಾಜ್ ಹೆರಕಲ್, ಮುಬ್ಬಸೀರ ಮಹಾಬರಿ, ಸಮೀರ ಸಿಪಾಯಿ, ಹಜರತ್ ಬಿಲಾಲ್, ಸಲ್ಲಾವುದ್ದಿನ, ಗೌಡ ಮಲ್ಲಾಡ, ಶೋಯೇಬ್ ಜತ್, ಶಫಿವುಲ್ಲಾ ಮುಂತಾದವರು ಇದ್ದರು.
ಸಂಸ್ಥೆಯ ಅಧ್ಯಕ್ಷ ಆಸೀಪ ಇಕ್ಬಾಲ್ ದೊಡ್ಡಮನಿ ನಗರದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಯಾದ ಸಿಕ್ಯಾಬ್ ಇಂಜೀನಿಯರಿಂಗ್ ಮೆಕ್ಯಾನಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ನಿರ್ವಹಿಸುತ್ತಿದ್ದು, ಅದರ ಜೊತೆಗೆ ಈ ಸಮಾಜ ಸೇವೆಯ ಕಾರ್ಯ ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದು ವಿಶೇಷಚೇತನರ ಪಾಲಕರು ಅವರಿಗೆ ಅಭಿನಂದಿಸಿದರು.