ವಚನಕ್ಕೆ ಹಳಕಟ್ಟಿ, ಶಿಕ್ಷಣಕ್ಕೆ ಬಂಥನಾಳ ಶ್ರೀಗಳ ಕೊಡುಗೆ ಅಪಾರ: ವಿ.ಸಿ. ನಾಗಠಾಣ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.24:ವಚನ ಸಾಹಿತ್ಯವನ್ನು ಪ್ರಕಟಿಸಲು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದವರು ಡಾ.ಫ ಗು.ಹಳಕಟ್ಟಿ. ಶಿಕ್ಷಣ ಸಾಹಿತ್ಯ ಪತ್ರಿಕೋದ್ಯಮವನ್ನು ಬೆಳೆಸಿದವರು, ಸಿದ್ದೇಶ್ವರ ಸಂಸ್ಥೆ ಹಾಗೂ ಬಿ ಎಲ್ ಡಿ ಇ ಸಂಸ್ಥೆಯನ್ನು ಸ್ಥಾಪಿಸಿ ಶೈಕ್ಷಣಿಕ ಮತ್ತು ಕಾರ್ಯಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರು ಹÀಳಕಟ್ಟಿಯವರು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮತ್ತು ನಗರ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ಡಾ. ಮಹೇಶ ಕರ್ಪೂರಮಠ ಹಾಗೂ ದಿವಂಗತ ದೊಡ್ಡಪ್ಪ ಮಾದೇನ ಶೆಟ್ಟಿ ಯವರ ನೆನಪಿನ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಫ.ಗು. ಹಳಕಟ್ಟಿಯವರ ದೂರದೃಷ್ಟಿ ಹಾಗೂ ಬಂಥನಾಳ ಶ್ರೀಗಳ ಸಹಾಯದಿಂದ ವಿಜಯಪುರ ಜಿಲ್ಲೆ ಶಿಕ್ಷಣ, ಅಧ್ಯಾತ್ಮ, ಸಾಹಿತ್ಯ, ಸಹಕಾರ ಕ್ಷೇತ್ರದಲ್ಲಿ ಉತ್ತುಂಗಕ್ಕೇರಲು ಸಾಧ್ಯವಾಯಿತು ಎಂದರು ಅಧ್ಯಕ್ಷತೆ ವಹಿಸಿದ್ದ ದೇವರ ಹಿಪ್ಪರಗಿಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್, ಬಸವ ರೆಡ್ಡಿ ಮಾತನಾಡಿ, ಡಾ. ಹಳಕಟ್ಟಿ ಹಾಗೂ ಬಂಥನಾಳ ಶ್ರೀಗಳು ವಿಶ್ವವಿದ್ಯಾಲಯ ಮಾಡುವ ಸಾಹಿತ್ಯ ಪ್ರಕಟಣೆ ಹಳಕಟ್ಟಿ ಅವರು ಮಾಡಿದರು. ಬಂಥನಾಳ ಶ್ರೀಗಳು ಆಧ್ಯಾತ್ಮಿಕ ಚಿಂತನೆ ಮತ್ತು ಸಂಸ್ಥೆಗಳ ಸುಧಾರಣೆಯಿಂದ ವಿಜಯಪುರ ಜಿಲ್ಲೆ ಸಮೃದ್ಧವಾಗಿದೆ ಎಂದರು.
ಡಾ.ಫ.ಗು. ಹಲಕಟ್ಟಿಯರ ಕೊಡುಗೆ ಕುರಿತು ಸಾಹಿತಿ ಶೋಭಾ ಮೀಡೆದಾರ ಮಾತನಾಡಿ, ಡಾ. ಫ.ಗು. ಹಳಕಟ್ಟಿಯವರು ಮರಾಠಿ ಪ್ರಾಬಲ್ಯದ ಪರಿಸರದಲ್ಲಿ ಕನ್ನಡದ ಕಹಳೆಯನ್ನು ಊದಿದವರು. ಕನ್ನಡಕ್ಕಾಗಿ ಜೀವ ಸವೆಸಿದ ಹಳಕಟ್ಟಿಯವರು ನಾಡಿನಾದ್ಯಂತ ತಿರುಗಾಡಿ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಬರಗಾಲ ನಿವಾರಣೆ ಕೇಂದ್ರ ಸ್ಥಾಪಿಸಿ ಸಾಮಾನ್ಯರಿಗೆ ಆರ್ಥಿಕ ಸಹಾಯಕ್ಕೆ ಮುಂದಾದರು. ಶಿವಾನುಭವ ಮತ್ತು ನವ ಕರ್ನಾಟಕ ಪತ್ರಿಕೆಗಳನ್ನು ಪ್ರಕಟಿಸಿ ಪತ್ರಿಕೋದ್ಯಮವನ್ನು ಬೆಳೆಸಿದರು ಎಂದರು
ಶ್ರೀ ಬಂಥನಾಳ ಶ್ರೀಗಳು, ಸಂಗನಬಸವ ಶಿವಯೋಗಿಗಳ ಕೊಡುಗೆ ಕುರಿತು ಉಪನ್ಯಾಸ ನೀಡಿದ ಕವಿಯತ್ರಿ ಶ್ವೇತಾ ಮೇತ್ರಿ, ವಿದ್ಯಾರ್ಥಿಗಳನ್ನೆ ದೇವರೆಂದು ಭಾವಿಸಿದ್ದ ಬಂಥನಾಳ ಶ್ರೀಗಳು ಮಾನವೀಯ ಮೌಲ್ಯಗಳನ್ನು ಬೆಸೆಯಲು ಶ್ರಮಿಸಿದರು. ತಮ್ಮ ಪ್ರವಚನದಿಂದ ಬರುವ ಕಾಣಿಯನ್ನು ಶಿಕ್ಷಣ ಸಂಸ್ಥೆಗಳ ಸುಧಾರಣೆಗಾಗಿ ನೀಡುವ ಮೂಲಕ ಬಂಥನಾಳ ಶ್ರೀಗಳು ಶಿಕ್ಷಣ ಪ್ರೇಮ ಮೆರೆದರು. ಬಂಥನಾಳ ಶ್ರೀಗಳು ಮತ್ತು ಹರ್ಡೇಕರ್ ಮಂಜಪ್ಪನವರು ಜಿಲ್ಲೆಯ ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಮುಖ್ಯ ಅತಿಥಿ ವಿರೂಪಾಕ್ಷಪ್ಪ ಮಾದನಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುದ್ದೇಬಿಹಾಳದ ಕ.ಸಾ.ಪ.ದ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಸುಭಾಸ ಕನ್ನೂರ ಪ್ರಾಸ್ತಾವಿಕ ವಾಗಿ ಮಾತನಾಡಿದರು, ಶಿಲ್ಪಾ ಭಸ್ಮೆ, ಅನ್ನಪೂರ್ಣ ಬೆಳ್ಳೆನವರ ನಿರೂಪಿಸಿದರು. ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕ.ಸಾ.ಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕರ, ಪರಶುರಾಮ ಪೆÇೀಳ, ಸುಭಾಸ ಬಡಿಗೇರ, ಅಹಮ್ಮದ್ ವಾಲೀಕಾರ, ಶ್ವೇತಾ ಅಂಕದ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಮೆಹಬೂಬ್ ಗೊಳಸಂಗಿ, ಹುಸೇನ ಮುಲ್ಲಾ, ಡಾ. ಸಂಗಮೇಶ ಮೇತ್ರಿ, ಅಭಿμÉೀಕ ಚಕ್ರವರ್ತಿ, ಪ್ರಶಾಂತ ಕಾಳೆ, ರಘೋತ್ತಮ ಅರ್ಜುಣಗಿ, ಭಾಗೀರಥಿ ಶಿಂಧೆ, ಎಸ್.ಎನ್. ನಾಡಗೌಡ, ಬಿ.ಎಸ್. ಬಿರಾದಾರ, ಎನ್.ಕೆ. ಕುಂಬಾರ, ಟಿ.ಆರ್. ಹಾವಿನಾಳ ಮುಂತಾದವರು ಉಪಸ್ಥಿತರಿದ್ದರು.