ಜೂ. 27 ರಂದು ದೂರದರ್ಶನದಲ್ಲಿ ಸಂದರ್ಶನ ನೇರ ಪ್ರಸಾರ
ಸಂಜೆವಾಣಿ ವಾರ್ತೆ
ದಾವಣಗೆರೆ ಜೂ.೨೩; ದಾವಣಗೆರೆಯ ಕಲಾಕುಂಚ, ಯಕ್ಷರಂಗ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘಟನೆಗಳ ರೂವಾರಿ “ದಾವಣಗೆರೆ ಸಾಂಸ್ಕೃತಿಕ ರಾಯಭಾರಿ” ಎಂದೇ ಖ್ಯಾತರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಪರಿಚಯದೊಂದಿಗೆ ಬೆಂಗಳೂರಿನ ಚಂದನ ವಾಹಿನಿ ದೂರದರ್ಶನದಲ್ಲಿ ನೇರ ಪ್ರಸಾರದೊಂದಿಗೆ ಸಂದರ್ಶನ ಜೂನ್ 27 ನೇ ಗುರುವಾರ ಬೆಳಿಗ್ಗೆ 8 ಗಂಟೆಯವರೆಗೆ ಪ್ರೇಕ್ಷಕರು ಅವರವರ ಮನೆಯಲ್ಲೇ ಟಿ.ವಿ.ಯಲ್ಲಿ ವೀಕ್ಷಿಸಬಹುದು ಎಂದು ದೂರದರ್ಶನ ಮುಖ್ಯಸ್ಥರಾದ ಶ್ರೀಮತಿ ಆರತಿ ತಿಳಿಸಿದ್ದಾರೆ.