ಚಿತ್ರದುರ್ಗದ ದೊಡ್ಡಪೇಟೆಯಲ್ಲಿ ಆರು ಅಡಿ ಗುಂಡಿಯಿಂದ ನೀರೆತ್ತುವ ಪರಿಸ್ಥಿತಿ ನಿರ್ಮಾಣ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೩: ನಗರದ ದೊಡ್ಡಪೇಟೆಯ ಜೈನ್ ದೇವಸ್ಥಾನದ ಪಕ್ಕ ನೀರು ಎತ್ತರದ ಸ್ಥಳದಿಂದ ಕೆಳಗೆ ಹರಿದು ಬರುತ್ತಿದ್ದರು ಸಹ, ಇಲ್ಲಿಯ ಕೆಲವು ಮನೆಗಳಿಗೆ, ನೇರವಾಗಿ ಮನೆಗೆ ನೀರಿನ ಪೈಪ್ ತಲುಪಿಸದೆ, ಮನೆ ಮುಂಭಾಗದಲ್ಲಿರುವ 40 ಅಡಿ ದೂರದ ರಸ್ತೆಗೆ ನೀರು ಸರಬರಾಜು ಮಾಡಿ, ಅಲ್ಲಿ ಗುಂಡಿಗಳನ್ನ ತೆಗೆಸಿಕೊಂಡು, ಮೋಟಾರ್‌ಗಳನ್ನು ಇಳಿಸಿ, ಕರೆಂಟ್‌ನಿAದ ಮತ್ತೆ ನೀರನ್ನು ಮರುಪಂಪ್ ಮಾಡಿಕೊಂಡು, ಮನೆ ಒಳಗೆ ತೆಗೆದುಕೊಂಡು ಹೋಗುವಂತೆ ಮಾಡಿರುವ ನಗರಸಭೆಯವರು, ಅನಾವಶ್ಯಕವಾಗಿ ಜನರು ಮತ್ತೆ ವಿದ್ಯುತ್ ಶಕ್ತಿಯನ್ನು ಬಳಸುವಂತೆ ಮಾಡಿದ್ದಾರೆ, ಅಷ್ಟೇ ಅಲ್ಲದೆ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನ, ಬೀದಿಯಲ್ಲಿ ಗುಂಡಿ ಒಳಗಿಳಿಸಿ, ನೀರೆತ್ತುವ ದೃಶ್ಯವನ್ನು ಸಾರ್ವಜನಿಕರು ನೋಡಿ, ಇದೇನು ಅವ್ಯವಸ್ಥೆ ಎಂದು ಮುಜುಗರ ಪಡುವಂತೆ ಮಾಡಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ದೂರಿದ್ದಾರೆ.ಕೋಟೆ ಮೇಲಿನ ಟ್ಯಾಂಕ್‌ನಿAದ ಎಲ್ಲಾ ಕಡೆ ನೀರು ಕೆಳಗಿಳಿದರೆ, ಇಲ್ಲಿ ಕೆಳಗಿಳಿದ ನೀರನ್ನು ಮತ್ತೆ ಕೋಟೆ ಕಡೆ ಮೇಲೆತ್ತಬೇಕಾಗಿದೆ, ಇಂತಹ ಅವೈಜ್ಞಾನಿಕ ನೀರಿನ ಸರಬರಾಜು ಮಾಡಿರುವ ನಗರಸಭೆಯವರು, ಮಹಿಳೆಯರಿಗೆ ಅನಗತ್ಯವಾಗಿ ತೊಂದರೆ ನೀಡಿದಂತಿದೆ, ವೈಜ್ಞಾನಿಕವಾಗಿ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ, ಈ ರೀತಿ ನಾಗರೀಕರು ಅನಾವಶ್ಯಕವಾಗಿ ಶಕ್ತಿಯನ್ನ ವ್ಯಯ ಮಾಡುವುದನ್ನ ಕಡಿಮೆಗೊಳಿಸಬಹುದು.ಎಂದಿದ್ದಾರೆ.ಕೋಟೆಯ ಮೇಲಿನಿಂದ ನೀರು ಗುರುತ್ವಕರ್ಷಣೆಯ ಮುಖಾಂತರ ಸರಾಗವಾಗಿ ಸರಬರಾಜು ಆಗುತ್ತಿರುವ ಈ ಸ್ಥಳಕ್ಕೆ, ನೀರನ್ನ ವ್ಯರ್ಥವಾಗಿ ವಾಪಾಸ್ ಮತ್ತೆ ಕೋಟೆ ಮೇಲೆ ಹತ್ತಿಸಿ, ಮನೆ ಒಳಗೆ ತೆಗೆದುಕೊಂಡು ಹೋಗುವ ಸಂಕಷ್ಟಗಳನ್ನ ಜನರಿಗೆ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.ಕೋಟೆ ಮೇಲಿನಿಂದ ನೀರು ಹರಿಸುತ್ತಿರುವ ಪೈಪ್ಗಳನ್ನ ಸರಿಯಾಗಿ ಇವರ ಮನೆಗಳಿಗೆ ಸಂಪರ್ಕ ನೀಡಿದ್ದರೆ, ಗುಂಡಿಯಲ್ಲಿ ಇಳಿದು ನೀರು ತೆಗೆಯುವ ಸಂಭವಗಳನ್ನ ಕಡಿಮೆಗೊಳಿಸಬಹುದಾಗಿತ್ತು ಹಾಗೂ ಜಾಣತನದಿಂದ ಮೇಲಿನಿಂದ ಹರಿಯುವ ನೀರನ್ನು ಪ್ರತಿ ಮನೆಗೆ ಮನೆಗೆ ತಲುಪಿಸುವಂತಹ ವ್ಯವಸ್ಥೆಗಳನ್ನ ಮಾಡಬಹುದಾಗಿತ್ತು. ಅನವಶ್ಯಕವಾಗಿ ಮನೆಗಳಿಗೆ ಪೈಪ್ ಲೈನ್ ತಲ್ಪಿಸದೆ, ರಸ್ತೆಗಳಿಗೆ ಪೈಪ್ ಲೈನ್ ತಲುಪಿಸಿ, ರಸ್ತೆಗಳಿಂದ ನೀರನ್ನು ಮತ್ತೆ ಮನೆಯೊಳಗೆ ಪಂಪ್ ಮಾಡಿಕೊಳ್ಳುವಂತಹ ವ್ಯವಸ್ಥೆ ಕಲ್ಪಿಸಿರುವುದನ್ನು ನೋಡಿದರೆ, ವೈಜ್ಞಾನಿಕವಾಗಿ ನೀರು ಸರಬರಾಜು ಮಾಡುವ ತಂತ್ರಜ್ಞಾನವನ್ನು ನಗರಸಭೆಯವರು ಮರೆತಂತೆ ಕಾಣುತ್ತಿದೆ ಎಂದಿದ್ದಾರೆ.
ಪ್ರತಿ ಮನೆಯವರು ಮನೆಗಂದಾಯ, ನೀರಿನ ಕಂದಾಯ ಕಟ್ಟಿ, ಮತ್ತೆ ಅವರೇ ಶ್ರಮವಹಿಸಿ, ಹತ್ತರಿಂದ ಹದಿನೈದು ಸಾವಿರ ಖರ್ಚು ಮಾಡಿ, ಎರಡು ದಿನಕ್ಕೊಮ್ಮೆ, ಎರಡೆರಡು ಗಂಟೆ ಸಮಯವನ್ನು, ಜೀವನ ಪೂರ್ತಿ ವ್ಯರ್ಥವಾಗಿ ಬಳಸಿ, ನೀರನ್ನ ಮನೆ ಒಳಗೆ ತೆಗೆದುಕೊಂಡು ಹೋಗುತ್ತಿರುವಂತಹ ವ್ಯವಸ್ಥೆ ಮತ್ತೆಲ್ಲೂ ನಮಗೆ ನೋಡಲು ಸಿಗುವುದಿಲ್ಲ. ಈ ಮಹಿಳೆಯರ ತ್ಯಾಗ ಮೆಚ್ಚಬೇಕಾದ್ದೇ. ದುಡ್ಡಿರುವವರು 15 ಸಾವಿರ ಖರ್ಚುಮಾಡಿ ಸ್ವಯಂ ಪಂಪುಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ, ಬಡವರು ಹಾಗೆ ಕ್ಯೆಯಲ್ಲಿ, ಬಕೆಟ್‌ಗಳ ಮುಖಾಂತರ ನೀರು ಎತ್ತಿ ಮನೆಯೊಳಕ್ಕೆ ಸಾಗಿಸಬೇಕಾಗಿದೆ, ಈ ವ್ಯವಸ್ಥೆಯನ್ನೂ ಬೇಗ ಬದಲಾಯಿಸಿ ಕೊಡಿ ಎಂದು ವಿನಂತಿಸಿಕೊAಡಿದ್ದಾರೆ.