ವೆಂಕಟೇಶ್ ಬಾಬುಗೆ ಪಿ ಎಚ್ ಡಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೩:  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ  ವೆಂಕಟೇಶ್ ಬಾಬು ಎಸ್ ರವರಿಗೆ ಮೈಸೂರು ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿಯನ್ನು ನೀಡಿದೆ.ವೆಂಕಟೇಶ್ ಬಾಬು ಮೈಸೂರು ವಿಶ್ವವಿದ್ಯಾನಿಲಯದ ಜೆಎಸ್ಎಸ್ ಸಂಶೋಧನಾ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ ಶಂಕ್ರಪ್ಪ ಎಸ್ ಮಾರ್ಗದರ್ಶನದಲ್ಲಿ ಪರ್ಫಾರ್ಮೆನ್ಸ್ ಇವ್ಯಾಲ್ಯೂಯೇಷನ್ ಆಫ್ ಡಿಜಿಟಲ್ ಪ್ರಿಂಟಿಂಗ್ ಅಂಡ್ ಪಬ್ಲಿಸಿಂಗ  ಇಂಡಸ್ಟ್ರಿ ಇನ್ ಇಂಡಿಯಾ.*  ಎಂಬ ವಿಷಯದ ಕುರಿತು ಮಹಾ ಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾಲಯವೂ ಇವರ ಮಹಾ ಪ್ರಬಂಧವನ್ನು ಅಂಗೀಕರಿಸಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ   ಪಿ ಎಚ್ ಡಿ ಪದವಿಯನ್ನು ನೀಡಿದೆ.