ಬೆಂಕಿ ದುರಂತದಲ್ಲಿ ಸಾವು- ನೋವು: ಶಾಸಕ ಅಲ್ಲಂಪ್ರಭು ಪಾಟೀಲ್‌ ಸಾಂತ್ವನ
ಕಲಬುರಗಿ:ಜೂ.23:ನಗರದಲ್ಲಿರುವ ಅಪ್ಪನ ಕೆರೆ ಹತ್ತಿರದ ಸಪ್ತಗಿರಿ ಹೋಟಲ್‌ನಲ್ಲಿನ ಕಿಚನ್‌ ಕೋಣೆಯಲ್ಲಾದ ಸಿಲಿಂಡರ್‌ ಬ್ಲಾಸ್ಟ್‌ನಲ್ಲಿ ಸಾವಾಗಿರುವ ಕಾರ್ಮಿಕ ಮಲ್ಲಿಕಾರ್ಜುನ ಜೂಜಾನವರ್‌ ಕುಟುಂಬಕ್ಕೆ ನಗರ ಸಾಸಕ ಅಲ್ಲಂಪ್ರಭು ಪಾಟೀಲ್‌ ಸಾಂತ್ವನ ಹೇಳಿದ್ದಾರೆ.
ಭಾನುವಾರ ಅವರ ರೋಜಾ ಬಡಾವಣೆಯ ಮನೆಗೆ ಭೇಟಿ ನೀಡಿ ತಂದೆ ವೈಜನಾಥ, ಸಹೋದರರು, ಸಹೋದರಿಯರು, ಬಂಧುಗಳನ್ನು ಭೇಟಿ ಮಾಡಿ ಕಣ್ಣೀರು ಒರೆಸುವ ಕೆಲಸ ಸಾಸಕರು ಮಾಡಿದರು. ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದವರು ಮಲ್ಲಿನಾಥನೇ ಮನೆಗೆ ಮುಖ್ಯನಾಗಿದ್ದ. ಆತನ ಸಾವಾಗಿದೆ. ಮನೆ ಮಂದಿಯೊಬ್ಬರಿಗೆ ನೌಕರಿ ಬೇಕೆಂದು ಆಗ್ರಹಿಸಿದರು.
ಸ್ಫೋಟದ ಹೋಟಲ್‌ಗೆ ಭೇಟಿ- ಪರಿಶೀಲನೆ
ಅಪ್ಪನ ಕೆರೆ ಪಕ್ಕದಲ್ಲಿರುವ ಸಪ್ತಗಿರಿ ಹೋಟಲ್‌ಗೂ ಭೇಟಿ ನೀಡಿದ ಪಾಟೀಲರು ಅಲ್ಲಿನ ಕಿಚನ್‌ ಕೋಣೆ, ಸಿಲಿಂಡರ್‌ ಸ್ಫೋಟಗೊಂಡ ಸ್ಥಳಗಳನ್ನು ಪರಿಶೀಲಿಸಿದರು. ಸಿಲಿಂಡರ್‌ಗಾಗಿ ಹೊರಗಡೆ ಪೈಪ್‌ ಲೈನ್‌ ಇದ್ದರೂ ಯಾಕೆ ಒಳಗಡೆ ದಾಸ್ತಾನು ಇಟ್ಟರು. ಇದೆಲ್ಲವೂ ಸುರಕ್ಷತೆಯಿಂದ ಮಾಡಬೇಕು. ಬರುವ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಪೊಲೀಸ್‌,ಅಗ್ನಿಗ್ನಿಶಾಮಕ ದಳದವರು ಜಾಗೃತಿ ಮೂಡಿಸಬಕು ಎಂದರು.
ಸಿಲಿಂಡರ್‌ ಬಳಕೆ ಅನಿವಾರ್ಯ, ಹಾಗೆಯೇ ಸುರಕ್ಷತೆ ನಿಯಮಗಳೊಂದಿಗ ಅದನ್ನು ಬಳಸುವಂತಾಗಬೇಕು. ಸ್ಫೋಟಕ್ಕೆ ಕಾರಣವಾಗುವ ಸಂಗತಿಗಳನ್ನು ವಿವರಿಸಿ ಸಿಲಿಂಡರ್‌ ಬಳಕೆಗೆ ಪೆಟ್ರೋಲಿಯಂ ಕಂಪನಿಗಳು, ಅಗ್ನಿ ಶಾಮಕ ದಳದವರು ಮುಂದಾಗುವಂತೆ ಶಾಸಕರು ಸೂಚಿಸಿದ್ದಾರೆ.