ಕಮಲಾಪುರದಲ್ಲಿ ಪಂಚಮ ಚಾತುರ್ಮಾಸ್ಯ :ವಿದ್ಯಾಕಣ್ವವಿರಾಜ ತೀರ್ಥರು
ಕಲಬುರಗಿ:ಜೂ.23:ಶ್ರೀಮತ್ ಕಣ್ವ ಮಠದ ಪೂರ್ವ ಯತಿಗಳಾದ ಶ್ರೀವಿದ್ಯಾವಿರಾಜ ತೀರ್ಥರ ಸನ್ನಿಧಾನ ವಿಜಯನಗರ ಜಿಲ್ಲೆಯ ಕಮಲಾಪುರದಲ್ಲಿ ಭಕ್ತರ ಅಪೇಕ್ಷೆ ಹಾಗೂ ಅಭಿಮಾನದ ಮೇರೆಗೆ ಈ ಬಾರಿ ಚಾತುರ್ಮಾಸ್ಯ ವೃತಾನುಷ್ಠಾನವನ್ನು ಕೈಗೊಳ್ಳಲಾಗುವುದು ಎಂದು ಶ್ರೀಮತ್ ಕಣ್ವ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವವಿರಾಜ ತೀರ್ಥರು ಹೇಳಿದರು.
ಹುಣಸಿಹೊಳೆಯ ಶ್ರೀಮತ್ಕಣ್ವ ಮಠದಲ್ಲಿ ಶ್ರೀ ಶ್ರೀ 1008 ಶ್ರೀ ವಿದ್ಯಾತಪೋನಿಧಿ ತೀರ್ಥರ ಮಧ್ಯಾರಾಧನೆಯ ಅಂಗವಾಗಿ ಮಾತನಾಡಿದ ಅವರು ಶ್ರೀವಿದ್ಯಾತಪೋನಿಧಿ ತೀರ್ಥರು ಅಸಾಮಾನ್ಯ ಯತಿಗಳು ಶ್ರೀಮತ್ ಕಣ್ವ ಮಠವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ, ಅದರ ಫಲವಾಗಿ ಇಂದು ಭಕ್ತರು ಹಾಗೂ ಶಿಷ್ಯರು ಸುಖ, ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ, ಶ್ರೀಪಾದಂಗಳವರು ತಪಸ್ಸಿನ ಪ್ರಭಾವದಿಂದ ಸಿದ್ದಿ ಪಡೆದವರು, ಅನೇಕ ಸಾಧನೆಗಳು ಮಾಡಿದ್ದಾರೆ ಶ್ರೀಗಳ ತಪಸ್ಸಿನ ಫಲ ಹಾಗೂ ಆಶೀರ್ವಾದ ನಮ್ಮೆಲ್ಲರಿಗೂ ದೊರೆಯುತ್ತದೆ ಎಂದು ಆಶೀರ್ವಚನ ನೀಡಿದರು.
ಶ್ರೀವಿದ್ಯಾತಪೋನಿಧಿ ತೀರ್ಥರು ಅಶರೀರವಾಗಿ ಈ ಭಾಗದಲ್ಲಿ ಸಂಚರಿಸುತ್ತಾ ಶಕ್ತಿ ತುಂಬುತ್ತಿದ್ದಾರೆ, ವೃಂದಾವನದಲ್ಲಿದ್ದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಆಶೀರ್ವದಿಸುತ್ತಿದ್ದಾರೆ ಎಂದು ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಮಧ್ಯಾರಾಧನೆ ಪ್ರಯುಕ್ತ ಬೆಳಿಗ್ಗೆ ಶ್ರೀ ವಿಠ್ಠಲ ಕೃಷ್ಣನ ಸಂಸ್ಥಾನ ಪೂಜೆ, ವೃಂದಾವನಕ್ಕೆ ಅಭಿಷೇಕ ವಿವಿಧ ಪುಷ್ಪಗಳಿಂದ ವಿಶೇಷವಾದ ಅಲಂಕಾರ ಮಂಗಳಾರತಿ ಹಸ್ತೋದಕವನ್ನು ಶ್ರೀ ವಿದ್ಯಾ ಕಣ್ವ ವಿರಾಜತೀರ್ಥರು ನಡೆಸಿಕೊಟ್ಟರು.
ಕಾಮನಟಗಿಯ ಶ್ರೀ ಛಾಯ ಭಜನಾ ಮಂಡಳಿ ವತಿಯಿಂದ ಶ್ರೀ ಮಠದ ಪರಂಪರೆ ಹಾಗೂ ಯತಿಗಳ ಭಜನೆ ಮಾಡಿದರು, ಪಾರಾಯಣ ಸಂಘದಿಂದ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಸಾಮೂಹಿಕ ಅಷ್ಟೋತ್ತರ ಶತನಾಮ ಪಾರಾಯಣ ಮಾಡಲಾಯಿತು, ವೇದಮೂರ್ತಿ ಶ್ರೀ ಅರುಣ ಜೋಶಿ ಅವರು ನಿತ್ಯ ಕರ್ಮಾನುಷ್ಠಾನದ ಕುರಿತು ಪ್ರವಚನ ನೀಡಿದರು.
ಶ್ರೀಮತ್ ಕಣ್ವಮಠ ಆಡಳಿತಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಮನೋಹರ ಮಡಿಗೇರಿ,
ಔದಂಬರಭಟ್ಟ ಜೋಶಿ, ಸುರೇಶ್ ಕುಲಕರ್ಣಿ, ರಾಜು ಜೋಶಿ, ಪ್ರಲ್ಹಾದ ಕನಸಾವಿ, ವಿನುತ ಎಸ್ ಜೋಶಿ, ಸುಭಾಷ ಮಡಿಗೇರಿ ಭೀಮಸೇನಾಚಾರ್ಯ ವನದುರ್ಗ,ಪಾಪಣ್ಣಾಚಾರ್ಯ ರಂಗಂಪೇಟೆ, ರಾಘವೇಂದ್ರ ಕಾಮನಟಗಿ, ಪಾರ್ಥಸಾರಥಿ ಜೋಶಿ,
ಪ್ರಶಾಂತ್ ಕುಲಕರ್ಣಿ ವಕೀಲರು, ವಿರುಪಾಕ್ಷಭಟ್ಟ ಜೋಶಿ, ಪ್ರಸನ್ನ ಅಲಂಪಲ್ಲಿ, ರಘುನಾಥ ಜೋಶಿ, ಕಮಲಾಕರ್ ದೇಶಪಾಂಡೆ, ರಾಘವೇಂದ್ರ ಅಲಗೂರು, ವಿಷ್ಣು ಪ್ರಕಾಶ್ ಜೋಶಿ, ನೀಲಕಠರಾವ್ ತಲ್ಲೇಖಾನ ಪ್ರಾಣೇಶಾಚಾರ್ಯ ಗೋಲಗೇರಿ, ರಾಘವೇಂದ್ರ ಕೊಡೇಕಲ್ ಇದ್ದರು.