ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ವಂಚನೆ ಮಾಡಿದ ಕಾಂಗ್ರೆಸ್ ಸರ್ಕಾರ
ಸಂಜೆವಾಣಿ ವಾರ್ತೆ
ಜಗಳೂರು.ಜೂ.೨೩;:- ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಪಾತಳ ಕಂಡಿದೆ ಎಂದು ಮಾಜಿ ಶಾಸಕ ರಾಜೇಶ್ ಹೇಳಿಕೆ ನೀಡಿದರು.ಡಿಸೇಲ್ ಪೆಟ್ರೋಲ್ ಬೆಲೆ ಏರಿಸಿದ ರಾಜ್ಯ ಸರ್ಕಾರದ ವಿರುದ್ಧ ವಾಗಿ ಶನಿವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿಯಿಂದ ಹಳೆ ಮಹಾತ್ಮ ಗಾಂಧೀಜಿ ವೃತ್ತಾದಿಂದ ತಾಲೂಕು ಕಚೇರಿ ಅವರಿಗೆ ಎತ್ತಿನ ಬಂಡಿಯಲ್ಲಿ ಮೂಲಕ ವಿಶೇಷವಾಗಿ ಪ್ರತಭಟಿಸಿ ತಹಶೀಲ್ದಾರ್ ಸೈಯದ್ ಕಲೀಮ್ ಉಲ್ಲಾ ಇವರಿಗೆ ಮನವಿ ನೀಡಿ ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ.ಗ್ಯಾರಂಟಿ ಯೋಜನೆಗಳ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ತಳಮಟ್ಟಕ್ಕೆ ತಂದಿ ದ್ದಾರೆ ಅಲ್ಲದೆ ಗ್ಯಾರಂಟಿ ಯೋಜನೆಗಳಿಗೆ ಹಣದ ಕ್ರೂಢಿಕರಣ ಕ್ಕೆ ಪೆಟ್ರೋಲ್ ಡಿಸೆಲ್ ಬೆಲೆ ಹೆಚ್ಚಿಸುವುದಲ್ಲದೆ ಅನೇಕ ದೀನಸಿ ಗಳನ್ನು ಹೆಚ್ಚು ಮಾಡಿರುವುದು ವಿಪರ್ಯಸದ ಸಂಗತಿ.ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಮರಚೀಕೆ ಯಾಗಿದೆ. ಕೂಡಲೆ ರಾಜ್ಯ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿ ಬೇಕು ಇಲ್ಲದಿದ್ದರೆ ರಾಜ್ಯ ಬಿಜೆಪಿಯಿಂದ ಉಗ್ರಾ ಹೋರಾಟ ಮಾಡಲಾಗುವುದು.ರಾಜ್ಯ ಕಾಂಗ್ರೆಸ್ ಸರ್ಕಾರ ಏಕಾಏಕಿ ಯಾವುದೇ ಸಮಾಲೋಚನೆ ನಡೆಸದೆ ಪೆಟ್ರೋಲ್ ಡಿಸೆಲ್ ಬೆಲೆ ಹೆಚ್ಚಳ ಮಾಡಿ ರೈತರಿಗೆ, ಜನಸಾಮಾನ್ಯರಿಗೆ ಹೊಟ್ಟೆಗೆ ಕಲ್ಲು ಹಾಕಿದೆ, ಆದ್ದರಿಂದ ಇದನ್ನು ಪರಾಮರ್ಶಿಸಿ ರಾಜ್ಯ ಸರ್ಕಾರ ಬೆಲೆ ಹೆಚ್ಚಳವನ್ನು ವಾಪಸ್ಸು ಪಡೆದು ರಾಜ್ಯದ ಜನರಿಗೆ ಬೆಲೆ ಹೆಚ್ಚಳದ ಬಿಸಿ ತಪ್ಪಿಸಬೇಕಾಗಿದೆ ಎಂದರು.ಮಾಜಿ ಶಾಸಕ ರಾಮಚಂದ್ರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ನಡೆದಿದ್ದೆ ದಾರಿ ಎಂಬಂತೆ ರಾಜ್ಯದ ಜನರ ಮೇಲೆ ಸುಳ್ಳಿ ಹೇಳಿಕೊಂಡು ಸವಾರಿ ನಡೆಸುತ್ತಿದ್ದಾರೆ. ರಾಜ್ಯದ ಜನ ಸಾಮಾನ್ಯರಿಗೆ ದ್ರೋಹ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸುಳ್ಳಿನ ಸರದಾರರು, ಬಿಜೆಪಿ ಆಡಳಿತದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಳಂಕ ರಹಿತ ಆಡಳಿತ ನಡೆಸಿದ್ದೇವೆ ಆದರೆ ಕಾಂಗ್ರೆಸ್‌ ಸರ್ಕಾರ ಆಡಳಿತದಿಂದ ಎಸ್ಟಿ ಜನಾಂಗಕ್ಕೆ ಅನ್ಯಾಯವಾಗುತ್ತಿದ್ದು, ೧೮೭ ಕೋಟಿ ಹಣ ವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಹಣವನ್ನು ಹೈದರಾ ಬಾದ್ ಚುನಾವಣೆಗೆ ಕಳುಹಿಸಿದ್ದಾರೆ.ದಲಿತರ ಹಣದಲ್ಲಿ ಗ್ಯಾರಂಟಿ ಯೋಜನೆಗಳು ನಿಭಾಯಿಸುತ್ತಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೂಢಿಕರಿಸುವುದಕ್ಕೆ ಪೆಟ್ರೋಲ್ ಡೀಸೆಲ್ ಸುಂಕ ಹೆಚ್ಚು ಮಾಡುತ್ತಿದ್ದು, ರಾಜ್ಯದ ಜನರಿಗೆ ಅನ್ಯಾಯ ಮಾಡುವುದು ನಿಲ್ಲಿಸಿ,ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಮಹೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ.ದೇವ ರಾಜ್. ಸಿದ್ದಪ್ಪ.ಪಾಪಲಿಂಗ.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್. ಕೆ ಮಂಜುನಾಥ್.ಮುಖಂಡರಾದ ಜೆ.ವಿ ನಾಗರಾಜ್.ಬಿದರ ಕೆರೆ ರವಿಕುಮಾರ್.ಮರುಳಾರಾಧ್ಯ. ಬಿಸ್ತುವಳ್ಳಿ ಬಾಬು,ಹೊನಮರಡಿ ಬಾಲರಾಜ್.ಕಾನನ  ಕಟ್ಟೆ ಕುಬೇಂದ್ರಪ್ಪ.ಪೂಜಾರಿ ಸಿದ್ದಪ,ಗಡಿ ಮಾಕುಂಟೆ ಸಿದ್ದೇಶ್.ಸೂರಲಿಂಗಪ್ಪ. ಓಬಳೇಶ್.ದೇವಿಕೆರೆ ಶಿವಕುಮಾರಸ್ವಾಮಿ.ಜೆ.ಸಿ ಓಬಳೇಶ್.ಮರೇನಹಳ್ಳಿ ಶೇಖರಪ್ಪ.ಬಂಕ್ ರಾಜಣ್ಣ.ಗೌರಿಪುರ ಕುಬೇಂದ್ರಪ್ಪ. ವಕೀಲ ಹನುಮಂತಪ್ಪ.ರೇವಣ್ಣ. ಕಲ್ಲೇದೇವಪುರ ಮಹೇಶ್.ಲೋಕೇಶ್.ಮೋಹನ್ ಸೇರಿದ್ದಂತೆ ಬಿಜೆಪಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು