ಚಿತ್ರದುರ್ಗದ ದೊಡ್ಡಪೇಟೆಯಲ್ಲಿ ಆರು ಅಡಿ ಗುಂಡಿಯಿಂದ ನೀರೆತ್ತುವ ಪರಿಸ್ಥಿತಿ ನಿರ್ಮಾಣ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೩: ನಗರದ ದೊಡ್ಡಪೇಟೆಯ ಜೈನ್ ದೇವಸ್ಥಾನದ ಪಕ್ಕ ನೀರು ಎತ್ತರದ ಸ್ಥಳದಿಂದ ಕೆಳಗೆ ಹರಿದು ಬರುತ್ತಿದ್ದರು ಸಹ, ಇಲ್ಲಿಯ ಕೆಲವು ಮನೆಗಳಿಗೆ, ನೇರವಾಗಿ ಮನೆಗೆ ನೀರಿನ ಪೈಪ್ ತಲುಪಿಸದೆ, ಮನೆ ಮುಂಭಾಗದಲ್ಲಿರುವ 40 ಅಡಿ ದೂರದ ರಸ್ತೆಗೆ ನೀರು ಸರಬರಾಜು ಮಾಡಿ, ಅಲ್ಲಿ ಗುಂಡಿಗಳನ್ನ ತೆಗೆಸಿಕೊಂಡು, ಮೋಟಾರ್‌ಗಳನ್ನು ಇಳಿಸಿ, ಕರೆಂಟ್‌ನಿAದ ಮತ್ತೆ ನೀರನ್ನು ಮರುಪಂಪ್ ಮಾಡಿಕೊಂಡು, ಮನೆ ಒಳಗೆ ತೆಗೆದುಕೊಂಡು ಹೋಗುವಂತೆ ಮಾಡಿರುವ ನಗರಸಭೆಯವರು, ಅನಾವಶ್ಯಕವಾಗಿ ಜನರು ಮತ್ತೆ ವಿದ್ಯುತ್ ಶಕ್ತಿಯನ್ನು ಬಳಸುವಂತೆ ಮಾಡಿದ್ದಾರೆ, ಅಷ್ಟೇ ಅಲ್ಲದೆ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನ, ಬೀದಿಯಲ್ಲಿ ಗುಂಡಿ ಒಳಗಿಳಿಸಿ, ನೀರೆತ್ತುವ ದೃಶ್ಯವನ್ನು ಸಾರ್ವಜನಿಕರು ನೋಡಿ, ಇದೇನು ಅವ್ಯವಸ್ಥೆ ಎಂದು ಮುಜುಗರ ಪಡುವಂತೆ ಮಾಡಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ದೂರಿದ್ದಾರೆ.ಕೋಟೆ ಮೇಲಿನ ಟ್ಯಾಂಕ್‌ನಿAದ ಎಲ್ಲಾ ಕಡೆ ನೀರು ಕೆಳಗಿಳಿದರೆ, ಇಲ್ಲಿ ಕೆಳಗಿಳಿದ ನೀರನ್ನು ಮತ್ತೆ ಕೋಟೆ ಕಡೆ ಮೇಲೆತ್ತಬೇಕಾಗಿದೆ, ಇಂತಹ ಅವೈಜ್ಞಾನಿಕ ನೀರಿನ ಸರಬರಾಜು ಮಾಡಿರುವ ನಗರಸಭೆಯವರು, ಮಹಿಳೆಯರಿಗೆ ಅನಗತ್ಯವಾಗಿ ತೊಂದರೆ ನೀಡಿದಂತಿದೆ, ವೈಜ್ಞಾನಿಕವಾಗಿ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ, ಈ ರೀತಿ ನಾಗರೀಕರು ಅನಾವಶ್ಯಕವಾಗಿ ಶಕ್ತಿಯನ್ನ ವ್ಯಯ ಮಾಡುವುದನ್ನ ಕಡಿಮೆಗೊಳಿಸಬಹುದು.ಎಂದಿದ್ದಾರೆ.ಕೋಟೆಯ ಮೇಲಿನಿಂದ ನೀರು ಗುರುತ್ವಕರ್ಷಣೆಯ ಮುಖಾಂತರ ಸರಾಗವಾಗಿ ಸರಬರಾಜು ಆಗುತ್ತಿರುವ ಈ ಸ್ಥಳಕ್ಕೆ, ನೀರನ್ನ ವ್ಯರ್ಥವಾಗಿ ವಾಪಾಸ್ ಮತ್ತೆ ಕೋಟೆ ಮೇಲೆ ಹತ್ತಿಸಿ, ಮನೆ ಒಳಗೆ ತೆಗೆದುಕೊಂಡು ಹೋಗುವ ಸಂಕಷ್ಟಗಳನ್ನ ಜನರಿಗೆ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.