ಕರಡಿ ದಾಳಿ; ಶಾಸಕರಿಂದ ಆರ್ಥಿಕ ಸಹಾಯ
ಸಂಜೆವಾಣಿ ವಾರ್ತೆ
ಜಗಳೂರು.ಜೂ.೨೩ -: ಜಮೀನಿಗೆ ಹೋಗಿದ್ದ ರೈತನ ಮೇಲೆ ನಾಲ್ಕು ಕರಡಿಗಳು ದಾಳಿ ಮಾಡಿ  ಗಂಭೀರ ಗಾಯಗೊಳಿಸಿದ್ದ ಘಟನೆ ಜಗಳೂರು ತಾಲೂಕಿ ನ ಬೈರನಾಯಕನಹಳ್ಳಿ (ರಾಜನಹಟ್ಟಿ) ಗ್ರಾಮದಲ್ಲಿ ನಡೆದಿತ್ತು. ಗಾಯಗೊಂಡ ಹನು ಮಂತಪ್ಪ  ಅವರನ್ನು ಜಗಳೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.ಇಂದು ಬೆಳಿಗ್ಗೆ ಜಗಳೂರು  ಶಾಸಕರಾದ ದ ಬಿ.ದೇವೇಂದ್ರಪ್ಪ ಹನುಮಂತಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ  ವೈಯಕ್ತಿಕ 25000 ಸಾವಿರ ಸಹಾಯ ಮಾಡಿ ಸಂಬಂಧಿಸಿದ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿ ಸರ್ಕಾರದಿಂದ ದೊರೆಯುವ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಆರೋಗ್ಯದ ಬಗ್ಗೆ ಸಲಹೆ ನೀಡಿದರು.