ದೇವಾಲಯಗಳಿಗಿಂತ ಶಾಲಾದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ಚನ್ನಮ್ಮನ ಕಿತ್ತೂರು,ಜೂ.23: ನಮ್ಮೂರ ಶಾಲೆ, ನಮ್ಮ ಮಕ್ಕಳು ಇವುಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಪಾಲಕರು ಮತ್ತು ಗ್ರಾಮದ ಹಿರಿಯರು ಶ್ರಮವಹಿಸಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ಕಾದರವಳ್ಳಿ ಗ್ರಾಮದಲ್ಲಿ ಎಸ್.ವಿ.ಕುಲಕರ್ಣಿ ಸರಕಾರಿ ಪ್ರೌಢಶಾಲೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದವರು.
ಶೀಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳಿಗೆ ಸರ್ಕಾರ ಅನುದಾನ ಮಂಜೂರ ಮಾಡಿದ್ದು ಕೆಲಸ ಭರದಿಂದ ಸಾಗಿದ್ದು ಒಟ್ಟು 30 ಶುದ್ದ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು ಶಾಲಾ ಆವರಣದಲ್ಲಿ ಸ್ಥಾಪಿಸಲಾಗುವುದೆಂದರು.