ವಿದ್ಯಾರ್ಥಿಗಳಿಗೆ ಸಮಾಜಮುಖಿ ಚಿಂತನೆ ಅವಶ್ಯ
ಶಿರಹಟ್ಟಿ,ಜೂ.23: ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಅವುಗಳ ಪರಿಹಾರಕ್ಕೆ ಮುಂದಾಗುವುದು ಅಗತ್ಯವಿದೆ. ಸಮಾಜದಲ್ಲಿ ಉತ್ತಮವಾದ ಆಚಾರ ವಿಚಾರಗಳನ್ನು ರೂಡಿಸಿಕೊಂಡು ಉತ್ತಮ ನಾಗರಿಕರಾಗಿ ಬದುಕುವುದು ಅಗತ್ಯವಿದೆ. ಅಂತಹ ಎನ್‍ಎಸ್‍ಎಸ್ ಘಟಕದ ಮೂಲಕ ಕಾರ್ಯ ನಿರ್ವಹಿಸುವುದು ಅಗತ್ಯವಿದೆ ಎಂದು ಪ್ರಾಚಾರ್ಯ ಡಾ. ಉಮೇಶ ಅರಹುಣಸಿ ಹೇಳಿದರು.
ಅವರು ಶ್ರೀ.ಜ.ಫಕ್ಕಿರೇಶ್ವರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್, ಎನ್‍ಎಸ್‍ಎಸ್‍ಮತ್ತು ಭಾರತ ಸ್ಕೌಟ್ಸ ಮತ್ತು ಗೈಡ್ಸ ,ರೋಟರಿ ಕ್ಲಬ್ ಗದಗ-ಬೆಟಗೇರಿ ಇವರ ಸಹಯೋಗದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ಅಗತ್ಯವಿದೆ. ಸಾಮಾಜ ಸೇವೆಯನ್ನು ಮಾಡುವುದಕ್ಕಾಗಿ ಸಂಘ ಸಂಸ್ಥೆಗಳು ಕಾರ್ಯಗಳನ್ನು ಮಾಡುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಿಕ ಕಾರ್ಯಗಳನ್ನು ನೆರವೇರಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ನಾಗರತ್ನ ಕಾಲೊಳಗಿ, ಡಾ. ಕಮಾಲಾಕ್ಷಿ ಅಂಗಡಿ, ಸಿ.ಕೆ.ಜಾಲಿ, ಡಾ. ಉಗಲಾಟದ, ವೀಣಾ ತಿರ್ಲಾಪೂರ, ಡಾ. ಆರ್.ಬಿ.ಉಪ್ಪಿನ, ಡಾ. ಶ್ರೀಧರ, ರಾಜು ನಾಯಕ ,ಫಕ್ಕಿರೇಶ ಜಾಲಿಹಾಳ, ದೇವರಾಜ ದಾನಣ್ಣವರ, ಹನುಮಂತ ತಳ್ಳಳ್ಳಿ, ಬಸವರಾಜ ಕುರಗುಂದ, ಡಾ. ಶಂಕರ ಬಾರಕೇರ, ವಸಂತ ಪೂರ್ಣಿಮಾ, ಜಯಪ್ರಕಾಶ ನವಹಳ್ಳಿ, ಚಂಧ್ರಶೇಖರ ಮಠಪತಿ, ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.