ಲಾರ್ವಾ ಸಮೀಕ್ಷೆ :ಡೆಂಗ್ಯೂ ಜಾಗೃತಿ
ನವಲಗುಂದ,ಜೂ.23: ಡೆಂಗ್ಯೂ ಜ್ವರ ಜಾಗೃತಿ ಹಾಗೂ ಲಾರ್ವಾ ಸಮೀಕ್ಷೆಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಒಂಬತ್ತು ಟೀಮ್ ನೊಂದಿಗೆ ಪಟ್ಟಣದ ವಿವಿಧ ವಾರ್ಡಗಳಲ್ಲಿಯ ಮನೆ ಮನೆಗೆ ತರಳಿ ಮನೆ ಸುತ್ತ ಶೇಖರಣೆಯಾಗುವ ನೀರಿನಿಂದಲೇ ರೋಗ ಹರಡುವ ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲಾಯಿತು.
ಮನೆಯಲ್ಲಿಡ್ರಮ್, ಇತರ ಕಡೆಗೆ ಬಹಳ ದಿನಗಳಿಂದ ಸಂಗ್ರಹಿಸಿದ್ದ ನೀರನ್ನು ಹೊರಗೆ ಚೆಲ್ಲಿಸಿ ಸ್ವಚ್ಛ ನೀರಿನಲ್ಲಿಯೇ ಲಾರ್ವಾ ಬೆಳೆದು ನಂತರ ಅವು ಸೊಳ್ಳೆಗಳಾಗಿ ಮಾರ್ಪಟ್ಟು ಕಚ್ಚಿ ಅದರಿಂದ ಜ್ವರ ಬರುವ ಬಗ್ಗೆ ಜಾಗೃತಿ ಮೂಡಿಸಿದರು.
ತೆಂಗಿನ ಚಿಪ್ಪು, ಟೈರ್, ಸಿಮೆಂಟ್ ತೊಟ್ಟಿ ಒಡೆದ ಬಕೇಟ್, ಕೊಡಗಳಲ್ಲಿನೀರು ನಿಲ್ಲದಂತೆ ಜಾಗೃತಿ ವಹಿಸಬೇಕು. ಜ್ವರ ಬಂದರೆ ಕೂಡಲೇ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ತಾಲ್ಲೂಕಾ ಅರೋಗ್ಯಾಧಿಕಾರಿ ಡಾ. ಎನ್ ಬಿ ಕರ್ಲವಾಡ, ಡಾ.ಅವಿನಾಶ ಎಸ್ ಜಿ, ಆರೋಗ್ಯ ಹಿರಿಯ ನಿರೀಕ್ಷಾಧಿಕಾರಿಗಳಾದ ರಮೇಶ್ ಹುಬ್ಬಳ್ಳಿ, ಸುಭಾಸ್ ಮಂಗಳಿ, ಶರಣಪ್ಪ ಕಡ್ಲೆಬಿಷ್ಠಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಮೇಲ್ವಿಚಾರಕರು ಲಾರ್ವಾ ಜಾಗೃತಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.