ವಿಶೇಷ ಉಪನ್ಯಾಸ
ಧಾರವಾಡ,ಜೂ.23: ಭಾರತೀಯದಂಡ ಸಂಹಿತೆ 1860 ರಲ್ಲಿ ಲಾರ್ಡ್ ಮೆಕಾಲೆ ಅವಧಿಯಲ್ಲಿರಚಿತ ಕಾನೂನುಗಳು ಕೆಲವೇ ಕೆಲ ದಿನಗಳಲ್ಲಿ ವಿದಾಯಕಾಣಲಿವೆ. ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ 2024 ಜುಲೈ 1 ರಂದು ಕೆಲ ಭಾರಿ ಬದಲಾವಣೆಯೊಂದಿಗೆಜಾರಿಗೆ ಬರಲಿದೆಎಂದುಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಸಂಜುಗೌಡ ಪಾಟೀಲ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪವು, ಆಯೋಜಿಸಿದ್ದ ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ `ಅಪರಾಧತಡೆಗಟ್ಟುವಿಕೆಯಲ್ಲಿ ಕಾನೂನು ಕ್ರಮ ಮತ್ತು ನಾಗರಿಕರ ಸಾಮಾಜಿಕ ಜವಾಬ್ದಾರಿಗಳು’ ವಿಷಯಕುರಿತು ಪ್ರಾತ್ಯಕ್ಷಿಕೆಯೊಂದಿಗೆಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿಅವರು, ತೀವ್ರಗತಿಯಲ್ಲಿಜನಸಂಖ್ಯೆಏರುತ್ತಿರುವುದುನಾಗರಿಕರಿಗೆ ತಿಳಿದ ವಿಷಯ.ನಾಗರಿಕರು ಪೊಲೀಸರೊಂದಿಗೆಜನಸ್ನೇಹಿಯಾಗಿರಬೇಕು.ಪ್ರಸ್ತುತ ದಿನಗಳಲ್ಲಿ ಅಪರಾಧ ಕೃತ್ಯಗಳು ವಿವಿಧರೀತಿಯ ಹತ್ಯೆ, ನರಹತ್ಯೆ, ಗ್ಯಾಂಗ್ ಕೊಲೆ, ದರೋಡೆ, ಕಳ್ಳತನ, ಡಿಜಿಟಲ್‍ಅರೆಸ್ಟ್, ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲಿನ ಅಪರಾಧಗಳು, ನೆಟ್‍ಪ್ಲಿಕ್ಸ್, ಅಂತರ್ಜಾಲ ಅಪರಾಧಗಳು, ಭವಿಷ್ಯದಲ್ಲಿ ಹೆಚ್ಚಾಗುತ್ತಿವೆ. ಇಂತಹ ಬೀಭತ್ಸ ಹಾಗೂ ಹೀನ ಕೃತ್ಯಗಳಿಂದ ನಾಗರಿಕ ಸಮಾಜತಲೆತಗ್ಗಿಸುವಂತಾಗಿದೆ.ಜನಸಂಖ್ಯೆಗೆತಕ್ಕಂತೆ ಪೊಲೀಸ್‍ಇಲಾಖೆಯಲ್ಲಿ sಸಿಬ್ಬಂದಿ ಕೊರತೆಯ ಮಧ್ಯೆಯು ಅಪರಾಧಿಗಳನ್ನು ದಸ್ತಗಿರಿ ಮಾಡುವಲ್ಲಿಜನರ ಸಹಕಾರದಿಂದ ಯಶಸ್ವಿಯಾಗುತ್ತಿದ್ದೇವೆ.
ನಾಗರಿಕರುಯಾವುದೇ ಪ್ರಕಾರದ ವಾಹನ ಚಲಾಯಿಸುವಾಗ ನಾಗರಿಕ ಪ್ರಜ್ಞೆ ಮತ್ತುರಸ್ತೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ರಸ್ತೆ ಅಪಘಾತಗಳಲ್ಲಿ ಗಣನೀಯ ಇಳಿಕೆ ಕಾಣುತ್ತದೆ.ಇದನ್ನುಗಂಭೀರವಾಗಿ ಆಲೋಚಿಸಿ ತಮ್ಮ ಸಾಮಾಜಿಕಜವಾಬ್ದಾರಿಯನ್ನು ಮೆರೆಯಬೇಕು. ಹೊಸದಾಗಿಜಾರಿಗೆ ಬರುವ ಭಾರತೀಯ ನ್ಯಾಯ ಸಂಹಿತೆ ಕೆಲ ಕಲಮುಗಳು ಗಂಭೀರವಾಗಿ ಮಾರ್ಪಾಡಾಗಿವೆ. ಅಪರಾಧಕ್ಕೆದಂಡ ಮತ್ತು ಶಿಕ್ಷೆ ಪ್ರಮಾಣ ವಿಧಿಸುವಲ್ಲಿ ನ್ಯಾಯಾಂಗಗಳ ನ್ಯಾಯದಾನ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದಜನರು ಹೊಸ ಕಾನೂನುಗಳ ಕುರಿತುಅತೀವಜಾಗೃತಿ ವಹಿಸಿ ಪಾಲಿಸಬೇಕು.ಅಂದಾಗ ಮಾತ್ರಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯಎಂದು ಸಂಜುಗೌಡ ಪಾಟೀಲ ಅರ್ಥವತ್ತಾಗಿ ಪ್ರಾತ್ಯಕ್ಷಿಕೆ ತಿಳಿಸಿ, ಜನರೊಂದಿಗೆ ಸಂವಾದ ನಡೆಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಘದಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡುತ್ತಾ, ಜಪಾನ್‍ದೇಶದಲ್ಲಿ ಶಾಲೆಗಳಲ್ಲಿ ಶೌಚಾಲಯಗಳನ್ನು ಮಕ್ಕಳು ಸ್ವಚ್ಚಗೊಳಿಸುವುದು ಅಪರಾಧವಲ್ಲ. ಆದರೆ ಭಾರತದಲ್ಲಿಅದುಅಪರಾಧವಾಗಿದೆಎಂದಾದರೆ ನಾಗರಿಕರುಇದರ ಬಗ್ಗೆ ಸೂಕ್ತ ಚಿಂತನೆ ಮಾಡುವುದುಅತ್ಯಗತ್ಯ. ಬರುವ ದಿನಗಳಲ್ಲಿ ಯುವ ಸಮುದಾಯಕ್ಕೆಇಂತಹಜಾಗೃತಿ ಕಾರ್ಯಕ್ರಮಗಳನ್ನು ಸಂಘದಿಂದಆಯೋಜಿಸಲಾಗುವುದುಎಂದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಕಾನೂನು ಮಂಟಪದ ಸಂಚಾಲಕ ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಭಾವತಿದೇಸಾಯಿ ನಿರೂಪಿಸಿದರು.ಪ್ರೊ.ಎನ್.ಆರ್.ಬಾಳಿಕಾಯಿ ವಂದಿಸಿದರು.
ಪ್ರೊ.ಮಾಲತಿ ಪಟ್ಟಣಶೆಟ್ಟಿ, ಡಾ.ಶೈಲಜಾಅಮರಶೆಟ್ಟಿ, ವಿಶ್ವೇಶ್ವರಿ ಹಿರೇಮಠ, ವೀಣಾಚಿಕ್ಕಮಠ, ಚಂದ್ರಶೇಖರ ನಾಗಶೆಟ್ಟಿ, ಶಿವಾನಂದ ಭಾವಿಕಟ್ಟಿ, ಎಸ್.ಎಚ್. ಪೂಜಾರ, ಅಶೋಕ ಏಣಗಿ, ಮಂಗಳಗೌರಿ ಹಿರೇಮಠ, ಅಭಿಷೇಕದೇಸಾಯಿ, ಮಹಾಂತೇಶ ನರೇಗಲ್, ಪಿ.ಎಸ್.ದಿಂಡಲಕೊಪ್ಪ, ಶಿರಹಟ್ಟಿ, ಎಸ್.ಕೆ. ಕುಂದರಗಿ, ಅಶೋಕ ಕೋರಿ ಸಂವಾದದಲ್ಲಿ ಪಾಲ್ಗೊಂಡಿದ್ದರು.