ಅಂಬಿಗರ ಚೌಡಯ್ಯನವರ ಆದರ್ಶ-ವಚನಗಳು ಇಂದಿಗೂ ಸ್ಮರಣೀಯ
ಚನ್ನಮ್ಮನ ಕಿತ್ತೂರು,ಜೂ.23:ಬಸವಣ್ಣನವರ ಸಮಕಾಲೀನ ಶರಣ ಅಂಬಿಗರ ಚೌಡಯ್ಯನವರ ಆದರ್ಶ-ವಚನಗಳು ಇಂದಿಗೂ ಸ್ಮರಣೀಯ. ಇಂದು ಅವÀನ್ನು ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ತಮ್ಮ ಜೀವನ ಸಾರ್ಥಕ ಎಂದು ಜಾನಪದ ವಿದ್ವಾಂಸ, ವಿಶ್ರಾಂತ ಪ್ರಾಚಾರ್ಯ ಮತ್ತು ಬೆಳಗಾವಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ .ಸಿ.ಕೆ.ನಾವಲಗಿ ಮನವಿ ಮಾಡಿದರು.
ಅವರು ಸ್ಥಳೀಯ ಕಲ್ಮಠದ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಶಿವಾನುಭವ ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಅಂಗವಾಗಿ ಸಾಧಕರಿಗೆ ಸನ್ಮಾನ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಎಂ.ಎಂ.ಸಂಗಣ್ಣವರ ಚುಟುಕು ಸಂಕಲನ ಅರಿವಿನ ಕಿರುಗವಿತೆ'' ಕೃತಿ ಬಿಡುಗಡೆ ಸಮಾರಂಭದಲ್ಲಿಅಂಬಿಗರ ಚೌಡಯ್ಯ ಜಯಂತಿ” ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷೀಯ ನುಡಿಯನ್ನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಎಸ್.ಪ್ರಭಯ್ಯನವರಮಠ ತಾವು ಕಿತ್ತೂರಿನಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿರುವದನ್ನು ಎಂದಿಗೂ ಮರೆಯುವದಿಲ್ಲ ಎಂದರು. ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮಿಜಿ ಅಂಬಿಗರ ಚೌಡಯ್ಯ ನವರು ಜಾತೀಯತೆ , ಮೂಢ ನಂಬಿಕೆಗಳು,ಸ್ತ್ರೀ ಶೋಷಣೆಗಳ ವಿರುದ್ಧ ಹೋರಾಡಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ ಮಹಾನ್ ಸಾಮಾಜಿಕ ಚಿಂತಕರಾಗಿ ಗುರುತಿಸಲ್ಪಟ್ಟಿದ್ದಾರೆ ಎಂದರು
ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಕಿತ್ತೂರು ಕಸಾಪÀ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಯನ್ನಾಡಿ ಮಾಸಿಕ ಶಿವಾನುಭವದ ಉದ್ದೇಶಗ¼ನ್ನು ಮತ್ತು ಅತಿಥಿಗಳನ್ನು ಪರಿಚಯಿಸುವದರ ಜೊತೆಗೆ “ಅರಿವಿನ ಕಿರುಗವಿತೆ” ಕೃತಿಯ ಕುರಿತು ಮಾತನಾಡಿದರು. ಈಶ್ವರ ಗಡಿಬಿಡಿ, ಪ್ರಲ್ಹಾದ ಶಿಗ್ಗಾಂವಿ ನೇತೃತ್ವದ ಶ್ರೀ ಗ್ರಾಮ ದೇವಿ ಭಜನಾ ಮಂಡಳಿ, ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ಮಂಡಳದವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು. ಪ್ರಸಾದ ಸೇವೆ ಶರಣ ಡಾ.ಜಿ.ಕೆ.ಭೂಮನಗೌಡರ ಇವರನ್ನು ಕಲ್ಮಠದ ಪರವಾಗಿ ಸನ್ಮಾನಿಸಲಾಯಿತು. .ಸಮಾರಂಭದಲ್ಲಿ ಕಿತ್ತೂರು ತಾಲೂಕÀ ಜಾನಪದ ಪರಿಷತ್ತಿನ ಅಧ್ಯಕ್ಷರಾದ ದಂತವೈದ್ಯ ಡಾ||ಜಗದೀಶ ಹಾರೂಗೊಪ್ಪ, ಕಿತ್ತೂರ ನಾಡಿನ ಶರಣ ಶರಣೆಯರು ಉಪಸ್ಥಿತರಿದ್ದರು. ಸುನಂದಾ ಪಾಟೀಲ ಸ್ವಾಗತಿಸಿದರು. ನಿರೂಪಣೆ ಬಸವಪ್ರಭು ಪಾಟೀಲ, ವಂನಾರ್ಪಣೆ ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಕಳಸಣ್ಣವರ.