ತಾಲೂಕಾ ಶಿಕ್ಷಕರ ಸಂಘದ ಅಶೋತ್ತರಗಳಿಗೆ ಸದಾ ಸ್ಪಂದನೆ
ಬೈಲಹೊಂಗಲ,ಜೂ.23: ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ಪ್ರತಿಯೊಬ್ಬರು ಕೊಡಬೇಕಾಗಿದ್ದು ಶಿಕ್ಷಕರ ಸಮಸ್ಯಗಳಿಗೆ ಸದಾ ಸ್ಪಂದಿಸುದಾಗಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಅವರು ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸ್ಥಳೀಯ ಶಾಖಾ ಆಶ್ರಯದಲ್ಲಿ ನಡೆದ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ರಾಜ್ಯ ಸರಕಾರಿ ನೌಕರರ ಭವನ ಕಟ್ಟಡ ದುರಸ್ತಿ ಹಾಗೂ ನೂತನ ಮಳಿಗೆಗಳ ನಿರ್ಮಾಣದ ಅಡಿಗಲ್ಲು ಸಮಾರಂಭದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರ ಬಲಾಡ್ಯಗೊಳ್ಳಲು ಕಾರ್ಯಾಂಗವೂ ಕೂಡಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಭಾಗದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕಾರವಾರ ಜಿಲ್ಲೆಯಲ್ಲಿನ ಕಾಳಿ ನದಿಯನ್ನು ಮಹಾದಾಯಿ ಯೋಜನೆಯ ಕಳಸಾ-ಬಂಡೂರಿಗೆ ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ರಾಜ್ಯ ಸರಕಾರಿ ನೌಕರರ ಸಂಘವೂ ತಾಲೂಕಿನಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಸಂಘದಿಂದ ನಡೆಯುವ ಸಮಾಜಮುಖಿ ಕಾರ್ಯಗಳಿಗೆ ಸಹಾಯ ಸಹಕಾರವಿದ್ದು ಮಕ್ಕಳ ಭವಿಷ್ಯದ ಶ್ರೇಯೋಭಿವೃದ್ದಿಗಾಗಿ ತಾವೆಲ್ಲರು ಸದಾ ಬದ್ದರಾಗಿರಬೇಕು. ಸಂಘದ ಚಟುವಟಿಕೆಗಳು ಕ್ರೀಯಾಶೀಲವಾಗಿ ಬಲಾಡ್ಯವಾಗಬೇಕೆಂದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ಧೇಶಕ ಡಾ. ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಸಾನಿಧ್ಯ ವಹಿಸಿದ್ದರು. ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಉದ್ಯಮಿ ವಿಜಯ ಮೆಟಗುಡ್ಡ, ಯುವ ಧುರೀಣ ನಾನಾಸಾಹೇಬ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ಗುರುಪಾದ ಕಳ್ಳಿ, ಬಿಜೆಪಿ ಜಿಲ್ಲಾ ಸಂಘಟಣೆಯ ಉಪಾಧ್ಯಕ್ಷ ಗುರು ಮೆಟಗುಡ್ಡ, ನಿವೃತ ಶಿಕ್ಷಕ ಮಹಾಬಳೇಶ್ವರ ಬೋಳಣ್ಣವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಡಿ.ಗಂಗಣ್ಣವರ, ಯುವ ಧುರೀಣ ಶ್ರೀಶೈಲ ಯಡಳ್ಳಿ, ಪುರಸಭೆ ಮಾಜಿ ಸದಸ್ಯ ಮಡಿವಾಳಪ್ಪ ಹೋಟಿ, ರಾಜ್ಯ ಪರಿಷತ್ ಸದಸ್ಯ ಡಿ.ಎಂ.ದೇಸಾಯಿ, ನಿರ್ದೇಶಕರಾದ ವ್ಹಿ.ಎಂ.ಕುಬಸದ, ಎಚ್.ಆರ್.ಪಾಟೀಲ, ಗೌರವಾಧ್ಯಕ್ಷ ಡಿ.ಎಂ.ಮಿರ್ಜಣ್ಣವರ, ಪ್ರಧಾನ ಗುರುಗಳ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಫಕ್ಕೀರಸ್ವಾಮೀಮಠ, ಯುವ ಧುರೀಣ ಸುಭಾಶ ತುರಮರಿ, ಬಿ.ವಿ.ಬಾನಿ, ಸುನೀಲ ಮತ್ತಿಕೊಪ್ಪ, ಶಿಕ್ಷಕ ಕೆ.ಯು.ಉಳ್ಳಾಗಡ್ಡಿ, ಸುನೀಲ ಮರಕುಂಬಿ ಮುಂತಾದವರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘಗಳ ಪಧಾದಿಕಾರಿಗಳು, ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸೇರಿದಂತೆ ಇತರೇ ಇಲಾಖೆಗಳ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಸಂಘದ ಖಜಾಂಚಿ ಪರಶುರಾಮ ಸೊಟಕ್ಕಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಭಜಂತ್ರಿ ನಿರೂಪಿಸಿದರು. ನಿರ್ಧೇಶಕ ಆರ್.ಆರ್.ದೊಡಗೌಡರ ನಿರೂಪಿಸಿದರು.