ವೇಗ ಮಿತಿ ತಪ್ಪಿದರೆ ಪೋಟೋ ಸಮೇತ ದಂಡಕ್ಕೆ ಬಂತು  ಸ್ಪೀಡ್ ಲೇಸರ್ ರಾಡರ್ ಗನ್
* ವೇಗದ ಮಿತಿ ಎಚ್ಚರ ತಪ್ಪದಿರಿ
* ಪೋಟೋ ದಾಖಲೆ ಸಮೇತ ಸ್ಥಳದಲ್ಲೇ ದಂಡ
* ತಪ್ಪಿಸಿಕೊಂಡು ಹೋದರೆ ಮನೆಗೆ ಬರುತ್ತೆ ದಂಡದ ನೋಟೀಸ್
* ಜೂ.14 ರಿಂದ ಆರಂಭ
* ಜಿಲ್ಲೆಯಲ್ಲಿ ಮೂರು ಗನ್
* ನಗರದಲ್ಲಿ ಈ ವರೆಗೆ ಎರೆಡು ನೂರಕ್ಕೂ ಹೆಚ್ಚು ವಾಹನಗಳಿಗೆ ದಂಡ
ಎನ್. ವೀರಭದ್ರಗೌಡ
ಬಳ್ಳಾರಿ. ಜೂ.23:  ನಗರದಲ್ಲಿ ನಿಗಧಿಗಿಂತ ಹೆಚ್ಚು ಸ್ಪೀಡ್ ನಲ್ಲಿ ಹೋದರೆ ನಿಮ್ಮ ಗಾಡಿಗೆ  ಪೋಟೋ ಸಮೇತ ದಂಡ
ವಿಧಿಸಲು ಬಂದಿದೆ ಸ್ಪೀಡ್ ಲೇಸರ್ ರಾಡರ್ ಗನ್
ಅತಿ ವೇಗದಿಂದ ಸಂಭವಿಸುವ  ಅಪಘಾತಗಳನ್ನು ತಡೆಯಲು ರಸ್ತೆಗಳಲ್ಲಿ ವೇಗದ ಮಿತಿಯ ಫಲಕಗಳನ್ನು ಅಳವಡಿಸಿದ್ದರೂ, ಲೆಕ್ಕಿಸದೆ  ವಾಹನ ಸವಾರರು ಮಿತಿ‌ಮೀರಿದ ವೇಗದಲ್ಲಿ ಸಂಚರಿಸಿವುದನ್ನು ತಡೆಯಲು ಈ ಮೊದಲು  ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ದಂಡ ಹಾಕುವಾಗ ನಾನು ಹೆಚ್ಚು ಸ್ಪೀಡನಲ್ಲಿ ಬಂದಿಲ್ಲ ಎಂಬ ವಾದ ವಿವಾದಗಳು ನಡೆಯುತ್ತಿದ್ದವು.
ಈ ಸಮಸ್ಯೆ ನಿವಾರಣೆಗೆಂದು ಇಂಟರ್ ಸೆಫ್ಟರ್ ವಾಹನಗಳ ಮೂಲಕ ಅತಿವೇಗಲ್ಲಿ ಬರುವ ವಾಹನಗಳನ್ನು ಪೋಟೋ ದಾಖಲೆ ಸಮೇತ ದಂಡ ವಿಧಿಸುವ ಕಾರ್ಯ ಕಳೆದ ಒಂದು ದಶಕದಿಂದಲೂ ನಡೆಯುತ್ತಿತ್ತು.
ಈ ಕಾರ್ಯಕ್ಕೆ ಮೂರು ನಾಲ್ಕು ಜನ ಸಿಬ್ಬಂದಿ ಬೇಕಿತ್ತು ವೆಚ್ಚವೂ ಹೆಚ್ಚಾಗಿತ್ತು.
ಈಗ ಸುಧಾರಿಸಿದ ತಂತ್ರಜ್ಞಾನದಿಂದ ಎಂಟು ಲಕ್ಷ ರೂ ವೆಚ್ಚದ ಸ್ಪೀಡ್ ಲೇಸರ್ ರಾಡರ್ ಗನ್ ಬಂದಿದೆ. ಕಾಂಪ್ಯಾಕ್ಟ್ ಆಗಿರುವ ಇದನ್ನು ಇಬ್ಬರು ಸಿಬ್ಬಂದಿಯೊಂದಲೇ ನಿರ್ವಹಣೆ ಮಾಡಬಹುದು.
ಇಂತಹ ಮೂರು ಕೆಮೆರಾಗಳು ಜಿಲ್ಲೆಗೆ ಬಂದಿದ್ದು. ನಗರದಲ್ಲಿ ಒಂದು ಕಾರ್ಯನಿರ್ವಹಿದುತ್ತಿದೆ.
ಕಾರ್ಯವೈಖರಿ.
ಇದರ ಕಾರ್ಯವೈಖರಿಯನ್ನು ಜೂ.14 ರಿಂದ ನಗರದಲ್ಲಿ ಅಸರಂಭಿಸಿದ್ದು. ಈ ವರಗೆ  ಮೀತಿ ಮೀರಿದ ವೇಗದಲ್ಲಿ ಬಂದ 233 ಕ್ಕೂ ವಾಹನಗಳಿಗೆ ದಂಡ ವಿಧಿಸಿದೆ.
ನಗರದ ಹೊರ ವಲಯದ ಅಲ್ಲಿಪುರ ರಸ್ತೆ, ಸಂಗನಕಲ್ಲು ರಸ್ತೆ, ಕಪ್ಪಗಲ್ಲು ರಸ್ತೆ, ಸಿರುಗುಪ್ಪ ರಸ್ತೆಗಳಲ್ಲಿ ಮಿತಿ ಮೀರಿದ ವೇಗದಲ್ಲಿ ಬರುವ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆದಿದೆ.
ಈ ರಸ್ತೆಗಳಲ್ಲಿ ಕಾರು, ಬೈಕಿಗೆ 40 ಕಿ.ಮೀ, ಲಾರಿ, ಬಸ್, ಆಟೋಗಳಿಗೆ 35 ಕಿ.ಮೀ ನಿಗಧಿ ಪಡಿಸಿದೆ. ಇದನ್ನು ಮೀರಿ ಬಂದ ವಾಹನಗಳಿಗೆ ಅವರು ಬರುತ್ತಿದ್ದ ವೇಗ, ಸ್ಥಳ ಸಮೇತ ದಾಖಲೆ ಈ ಲೇಸರ್ ತಂತ್ರಜ್ಞಾನದ ಯಂತ್ರದ ಮೂಲಕ ಬರುತ್ತೆ.
ಇದು 300 ಮೀಟರ್ ದೂರದಲ್ಲಿಯೇ ವೇಗದ ಮಿತಿ ಬರುವ ವಾಹನದ ದಾಖಲೆಯನ್ನು ಸೆರೆ ಹಿಡಿಯುತ್ತೆ. ಅಲ್ಲದೆ ಎಕ ಕಾಲದಲ್ಲಿ ಎರೆಡು ಮೂರು ವಾಹನಗಳು ಸಹ ವೇಗ ಮಿತಿ ಮೀರಿ ಬಂದರೂ ದಾಖಲೆ ನೀಡುತ್ತೆ.
ದೂರದಲ್ಲಿಯೇ ಬರುವ ವಾಹನ ವೇಗ ಮಿತಿ ಮೀರಿ ಬಂದುದನ್ನು ಸಿಬ್ಬಂದಿ ನೋಡಿ ಆ ವಾಹನ ಸವಾರನಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಪಾವತಿಸಲು ವಾಹನದ ಮಾಲೀಕನ ಮನೆಗೆ  ದಂಡದ ನೋಟೀಸ್  ಹೋಗಲಿದೆ.
 ಒಂದೇ ಕಡೆ ಇದ್ದರೆ ಆ ರಸ್ತೆಯಲ್ಲಿ ಮಾತ್ರ ಸವಾರರು ಜಾಗೃತರಾಗುತ್ತಾರೆ. ಒಂದೊಂದು ದಿನ ಒಂದು ಕಡೆ ಇದನ್ನು ಬಳಕೆ ಮಾಡಲಾಗುತ್ತಿದೆ.
ಇಂತಹ ವಾಹನಗಳು ಇನ್ನಷ್ಟು ಬಂದರೆ ನಗರದ ರಸ್ತೆಗಳಲ್ಲೂ ಮಿತಿ ಮೀರಿ ಬೈಕ್ ಓಡಿಸುವ ಯುವಕರ ವರ್ತನೆಗೆ ಕಡಿವಾಣ ಹಾಕಬಹುದು ಎಂಬುದು ಜನರ ಆಶಯವಾಗಿದೆ.
ಜನರೇ ಪಾಲಿಸಬೇಕು:
ನಿಯಮ ಮೀರಿದ್ದಕ್ಕೆ ದಂಡ ವಿಧಿಸುವುದು ನಿರಂತರ ಪ್ರಕ್ರಿಯೆ. ವೇಗದಷ್ಟೇ ಅಲ್ಲದೆ ಇದರಲ್ಲಿ ಮೊಬೈಲ್ ನಲ್ಲಿ  ಮಾತನಾಡುತ್ತ ಬರುವುದು, ನಿಗಧಿಗಿಂತ ಹೆಚ್ಚು ಜನರು ಬರುವುದು ಸೇರಿದಂತೆ ಸಂಚಾರಿ ನಿಯಮಗಳನ್ನು ಮೀರಿದ ಇತರೇ ವಿಷಯಗಳಿಗೂ ಇಲ್ಲಿ ದಂಡ ವಿಧಿಸಲಿದೆ
ಅಯ್ಯನಗೌಡ ಪಾಟೀಲ್, ಪಿಐ, ಸಂಚಾರಿ ಠಾಣೆ, ಬಳ್ಳಾರಿ.
One attachment • Scanned by Gmail