ಇಷ್ಟಲಿಂಗ ಯೋಗ ಮಾಡುವ ಮೂಲಕ ಯೋಗದಿನ ಆಚರಣೆ
ಸಂಜೆವಾಣಿ ವಾರ್ತೆ
ಸಂಡೂರು: ಜು: 23:  ಸಂಡೂರು ಪಟ್ಟಣದ ಎಲ್.ಬಿ. ಕಆಲೋನಿಯ 11ನೇ ವಾರ್ಡಿನಲ್ಲಿ ಅಕ್ಕನಬಳಗದ ಸದಸ್ಯೆ ಜ್ಯೋತಿ ಗೌರಮ್ಮ ಅವರ ಮನೆಯಲ್ಲಿ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ಹಾಗೂ ಯೋಗಧ್ಯಾನವನ್ನು ಹೊಸಪೇಟೆ ( ವಿಜಯನಗರ ಜಇಲ್ಲೆ)ಯ ಮಹಿಳಾ ಕದಳಿ ವೇದಿಕೆ ಜಿಲ್ಲಾ ಅಧ್ಯ್ಕಕ್ಷೆ ಹೆಚ್. ಸೌಭಾಗ್ಯಲಕ್ಷ್ಮೀಯವರು ಹಾಗೂ ಕದಳಿ ವೇದಿಕೆ ಸದಸ್ಯೆ ನಾಗರತ್ನಮ್ಮನವರು ಇಷ್ಟಲಿಂಗ ಯೋಗದ ಅರಿವು ಮೂಡಿಸಿದರು.
ಸಹಜ ಯೋಗ, ಅಂಗಾಂಗಯೋಗ ಇವುಗಳು ಸಹ ಯೋಗದ ಒಂದು ಭಾಗ, ಇಷ್ಠಲಿಂಗ ಸಾಧನೆಯೇ ಯೋಗ 6 ಚಕ್ರಗಳ ಮಾಹಿತಿ ಇದೆ ಅದರೆ ಬಸವಾದಿ ಶರಣರು 9 ಚಕ್ರಗಳ ಮಾಹಿತಿಯನ್ನು ನೀಡಿದರು. ಮೊದಲನೆಯ ನಾಲ್ಕು ಯೋಗಗಳನ್ನು ಬಿಟ್ಟು ಅಂದರೆ ಯಮ, ನಿಯಮ, ಆಸನಿವುಗಳನ್ನು ಬಿಟ್ಟು ಎರಡನೇ ಭಾಗವಾದ ಧ್ಯಾನ, ಪ್ರಾಣಯಾಮ, ಪ್ರತ್ಯಹಾರ, ಸಮಾಧಿ ಇವುಗಳ ವಿಚಾರವಾಗಿ ಶರಣರು ಮಾಹಿತಿಯನ್ನು ನೀಡಿದರು. 12ನೇ ಶತಮಾನದ ಶಿವಶರಣ ಬಸವಣ್ಣನವರು ಮಹಿಳೆಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದರಲ್ಲದೆ ಇಷ್ಠಲಿಂಗಕ್ಕೆ ಪ್ರಾಧಾನ್ಯತೆ ನೀಡಿದರಲ್ಲದೆ ಇಷ್ಠಲಿಂಗದ ಪೂಜೆ ಯ ಮಹತ್ವ ನೀಡಿದರಲ್ಲದೆ ಜಾಗೃತಿ ಮೂಡಿಸಿದರು. ಪತಂಜಲಿಯ ಶಾಸ್ತ್ರೀಯ ಯೋಗವನ್ನು 8 ಭಾಗಗಳಾಗಿ ವರ್ಗೀಕರಿಸಿದ್ದಾರೆ, ಯಾಮ, ನಿಯಮ ಆಸನ ಪ್ರಾಣಯಾಮ, ಪ್ರತ್ಯಹಾರ, ಧಾರಣ ಸಮಾದಿ ಎಂಟು ಭಾಗಗಳಿವೆ, ಸಹಜ ಯೋಗದಿಂದ ಆನಂದವನ್ನು ಅನುಭವಿಸುತ್ತೇವೆ ಈ ಯೋಗದಿಮದ ಅನುಭವಗಳು ಹೆಚ್ಚಾಗಿ ಮುಕ್ತಾಯವಾಗಿ ಮೌನವಾಗಲು ಸಾಧ್ಯ, ನಮ್ಮ ಅರಿವನ್ನು ಸಾಧ್ಯವಾದಾಗ ಸಾಧಕರು ಸಹಜ ಸಮಾಧಿಗೆ ಸ್ಥಿತಿಗೆ ತಲುಪಲು ಸಾಧ್ಯವಾಗುತ್ತದೆ ಅ ಸ್ಥಿತಿಯಲ್ಲಿ ಅಂಗವೇ ಲಿಂಗವಾದ ಅನುಭವ ಪಡೆಯುತ್ತಾರೆ ಅಂಗ ಲಿಂಗಗಳೇ ಸಾಮರಸ್ಯವೇ ಲಿಂಗಾಂಗ ಸಾಮರಸ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಜ್ಯೋಗಿ ಗುಡೇಕೋಟೆ ನಾಗರಾಜ, ಗೌರವಾಧ್ಯಕ್ಷೆ ಅಂಕಮನಾಳ್ ಶಾಂತಮ್ಮ, ಕಾರ್ಯದರ್ಶಿ ವಿಶಾಲಾಕ್ಷಿ ಉಗ್ರಾಣ, ಜ್ಯೋತಿ , ನಿರ್ಮಲ ಗೋನಾಳು, ನಾಗರತ್ನ, ವಿಜಯಲಕ್ಷ್ಮೀ ಕಬ್ಬಿಣ ಸಿದ್ದಮ್ಮ, ಕದಳಿವೇದಿಕೆ ಜಿಲ್ಲಾಧ್ಯಕ್ಷೆ ನೀಲಾಂಬಿಕ ಶೃತಿ, ಪವಿತ್ರ, ಅಯಿಕಲ್ ಸಾವಿತ್ರಮ್ಮ ಶಿಕ್ಷಕಿ , ಹಗರಿಬಸವರಾಜಪ್ಪ, ಗಂಗಮ್ಮ, ಬಂಡೇಮ್ಯಾಗಳ ಹಲವಾರು ಅಕ್ಕನಬಳಗದ ಸದಸ್ಯರು, ಕದಳಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.