ಯೋಗ ಕೇವಲ ಆಧ್ಯಾತ್ಮಿಕ ಜ್ಞಾನವಲ್ಲ ಇದೊಂದು ವಿಜ್ಞಾನ- ವಿ.ಎಂ. ನಾಗಭೂಷಣ
ಸಂಜೆವಾಣಿ ವಾರ್ತೆ
ಸಂಡೂರು: ಜೂ; 23:  ಹಲವಾರು ದೇಶಗಳು ಇಂದು ಜಾಗತಿಕ ಒಳತಿಗಾಗಿ ಯೋಗವನ್ನು ಅಸ್ತ್ರವಾಗಿ ನೋಡುತ್ತಿವೆ, ಯೋವನ್ನು ನಾವು ಕೇಳವ ಆಧ್ಯಾತ್ಮಿಕ ವಿಷಯವಾಗಿ ನೋಡದೇ ವಿಜ್ಞಾನವಾಗಿ ಪರಿಗಣಿಸಿದರೆ ವೈಯಕ್ತಿಕವಾಗಿ ನಮಗೆ ಸಾಕಷ್ಟು ಲಾಭವಿದೆ ಯೋಗ ಕೇವಲ ಆಧ್ಯಾತ್ಮಿಕ ಜ್ಞಾನವಲ್ಲ ಇದೊಂದು ವಿಜ್ಞಾನ ಯೋಗವನ್ನು ಆಧ್ಯಾತ್ಮಿಕ ಚಿಂತನೆ ಒಳಗಪಡಿಸುವುದು ಸರಿಯಲ್ಲ. ಆನತೆ ಯೋಗವನ್ನು ಹಲವಾರು ದೇವರುಗಳನ್ನು ಜ್ಞಾಪಿಸುತ್ತಾರೆ. ಯೋಗ ಕಾರ್ಯಕ್ರಮದಲ್ಲಿ ಆಧ್ಯಾತ್ಮ ಚಿಂತನೆ ಮಾಡುತ್ತಾರೆ. ಆಧ್ಯಾತ್ಮವನ್ನು ಯಾವಾಗಬೇಕಾದರೂ ಪಡೆಯಬಹುದು. ಯೋಗವನ್ನು ಮಾಡಿ ನಿರೋಗಿಯಾಗಬೇಕು , ಇದರಿಂದ ಉತ್ತಮ ಆರೋಗ್ಯ ಸದೃಢ ಕಾಯರಾಗಬೇಕಾದರೆ ಯೋಗವನ್ನು ದಿನಕ್ಕೆ ಬೆಳಗಿನ ಜಾವ ಒಂದು ಗಂಟೆ, ಸಂಜೆ ಒಂದು ಗಂಟೆ ಮಾಡಿದರೆ ಮಾತ್ರ ಸಧೃಡ ಕಾಯರಾಗಲು ಸಾರ್ಧಯ, ಯೋಗ ಒಂದೇ ದಿನಕ್ಕೆ ಸೀಮಿತವಾಗದೆ ನಿತ್ಯ ಮಾಡಿದರೆ ಮಾತ್ರ ಆರೋಗ್ಯವಂತರಾಗಲು ಸಾಧ್ಯ, ಇಲ್ಲವಾದಲ್ಲಿ ಹಲವಾರು ಬಗೆಯ ರೋಗಗಳಿಗೆ ತುತ್ತಾಗುವುದು ಸಹಜ, ನಿರೋಗಿಗಳಾಗಬೇಕಾದರೆ ಆರೋಗ್ಯ ಕಾಪಾಡಬೇಕಾದುದು ನಮ್ಮ ನಿಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಶಿಕ್ಷಕ ವಿ.ಎಂ. ನಾಗಭೂಷಣ ತಿಳಿಸಿದರು.
ಅವರು  ಕೃಪಾನಿಲಯ ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಯೋರ್ವರ ಜೀವನ ಸುಧಾರಿಸದರೆ ಇಡೀ ವಿಶ್ವವೇ ಸುಧಾರಣೆಯಾಗಲು ಸಾಧ್ಯ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಯೋಗ ಜನಪ್ರಿಯವಾಗುತ್ತಿದೆ ಪ್ರವಾಸಿಗರನ್ನು ಸೆಳೆಯುತ್ತಿದೆ ಇತ್ತೀಚೆಗೆ ಅನೇಕ ರಾಜ್ಯ, ದೇಶಗಳಲ್ಲಿ ಯೋಗ ಸ್ಪರ್ಧೆ ಏರ್ಪಡಿಸಿ ಅತುತ್ತಮ ಛಾಯಾಚಿತ್ರಕ್ಕೆ ಬಹುಮಾನ ನೀಡುತ್ತಿದ್ದಾರೆ, ಯೋಗವು ಪ್ರಾಚೀನ ಭಾರತೀಯ ಪರಂಪರೆಯ ಅಮೂಲವಾದ ಕೊಡುಗೆಯಾಗಿದೆ. ಯೋಗಗಲ್ಲಿ ನಾನಾಬಗೆಯ ಯೋಗ ರಾಜಯೋಗ, ಹಠಯೋಗ, ಪ್ರಾಣಯಾಮ, ಧ್ಯಾನ ಮುಂತಾದ ಯೋಗಗಳಿವೆ ಅದರೆ ತಾಪತ್ರಯದ ಯೋಗವೆಂದರೆ ಸೂರ್ಯನಮಸ್ಕಾರವನ್ನು ನಾವು ಬಿಟ್ಟಿದ್ದೇವೆ ಪ್ರಾಣಯೋಗಕ್ಕೆ ನಾವು ಹೆಚ್ಚಿನ ರೀತಿಯಲ್ಲಿ ಯೋಗವನ್ನು ಮಾಡಿದ್ದೇವೆ, ಸಊರ್ಯನಮಸ್ಕಾರ ಮರೆತು ಬಿಟ್ಟಿದ್ದೇವೆ, ಶಿವನಿಗೆ ಅಭಿಷೇಕ ಹೇಗೆ ಮುಖ್ಯವೋ ಹಾಗೆ ಸೂರ್ಯನಿಗೆ ನಮಸ್ಕಾರ ಬಹು ಮುಖ್ಯ ಸೂರ್ಯನ ಕಇರಣ ನಮ್ಮ ಮೇಲೆ ಸದೃಢ ಕಾಯರಾಗಲು ಸಾಧ್ಯ ಎಂದು ತಿಳಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ದೈಹಿಕ ಶಿಕ್ಷಕ ಮರಿಸ್ವಾಮಿ ನಿರೂಪಿಸಿದರು, ಕನ್ನಡ ಶಿಕ್ಷಕ ಚಂದ್ರಹಾಸ ಸ್ವಾಗತಿಸಿದರು, ವಿಜ್ಞಾನ ಶಿಕ್ಷಕ ಬಸವರಾಜ ವಂದಿಸಿದರು. ವಸಂತಮ್ಮ ನಂದಿನಿ ನಿರ್ಮಲಾ ಘೋರ್ಪಡೆ ಸಿಸ್ಟರ್ ಸಿಸಿಲಿಯಾ, ಮೇರಿ ಹಲವಾರು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.