ಶಿವಪುರ ಕೆರೆಯ ಹತ್ತಿರ ವಿಶ್ವಯೋಗ ದಿನಾಚರಣೆ
ಸಂಜೆವಾಣಿ ವಾರ್ತೆ
ಸಂಡೂರು:ಜು: 23:: ಯೋಗ ಇಂದು ಜಗತ್ತಿನ ತುಂಬಾ ಪ್ರಸಿದ್ದಿಯಾಗಿದೆ, ಅದರ ಮೂಲ ಭಾರತ ಎನ್ನುವ ಹೆಮ್ಮೆ ನಮಗಿದೆ, ಅದ್ದರಿಂದ ಪ್ರತಿಯೊಬ್ಬ ಭಾರತೀಯರು ಸಹ ಯೋಗವನ್ನು ಮಾಡುವ ಮೂಲಕ ಆರೋಗ್ಯ ರಕ್ಷಣೆಯ ಜೊತೆಗೆ ಸುಸ್ಥಿತರ ಭಾರತ ನಿರ್ಮಾಣ ಮಾಡೋಣ ಎಂದು ವಾಕರ್ಸ್ ಅಷೋಷಿಯನ್ ಮುಖಂಡರಾದ ಕೆ.ಕುಮಾರಸ್ವಾಮಿ ತಿಳಿಸಿದರು.
ಅವರು ಇಂದು ಪಟ್ಟಣದ ಶಿವಪುರ ಕೆರೆಯ ಮುಂಭಾಗದಲ್ಲಿ ವಾಕರ್ಸ್ ಅಷೋಷಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ನಿತ್ಯ ನಮ್ಮ ಸಂಘದ ವತಿಯಿಂದ ವ್ಯಾಯಾಮ , ವಾಕಿಂಗ್ ಮಾಡುತ್ತೇವೆ, ಅದರೆ ಮಾನಸಿಕ ಸದೃಢತೆಗೆ ಯೋಗವೂ ಸಹ ಬೇಕು, ಅದಕ್ಕೆ ಬಹಳಷ್ಟು ಜನರು ಆಕರ್ಷಿತರಾಗಿ ಯೋಗವನ್ನು ಮಾಡುತ್ತಿದ್ದಾರೆ, ಇದರಿಂದ ಆರೋಗ್ಯ ವೃದ್ದಿಯಾಗಿ ರೋಗ ಮುಕ್ತರಾಗುವಲ್ಲಿ ಯಶಸ್ವಿಯಾಗಿದ್ದಾರೆ, ಅದ್ದರಿಂದ ಎಲ್ಲರೂ ಸಹ ಶಾಂತಿ ಮತ್ತು ಆರೋಗ್ಯ ವೃದ್ದಿಗೆ ಯೋಗ ಬಹುದೊಡ್ಡ ಮದ್ದಾಗಿದೆ ಎಂದರು.
ಯೋಗ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸತ್ಯನಾರಾಯಣ, ಗೌಡ್ರು ಸುರೇಶ್,  ಕೆ.ವಿಜಯಕುಮಾರ್, ಅಶೋಕ ಶೆಟ್ಟಿ, ವಾಮಣ್ಣ, ಮಲ್ಲಿಕಾರ್ಜುನ, ಸುರೇಶ್, ಎಲ್ಲಾ ಸದಸ್ಯರುಗಳು ಭಾಗಿಯಾಗಿ ಯೋಗ ದಿನಾಚರಣೆಯನ್ನು ಆಚರಿಸಿದರು. .