ರಾಜಯೋಗವನ್ನು ತಿಳಿಸುವ ಏಕೈಕ ಸಂಸ್ಥೆ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ
ಸಂಜೆವಾಣಿ ವಾರ್ತೆ
ಸಂಡೂರು:ಜೂ:23: ಬ್ರಹ್ಮಕುಮಾರಿ ಈಶ್ವರಿವಿಶ್ವವಿದ್ಯಾಲಯದಲ್ಲಿ 1 ಕೋಟಿಗೂ ಹೆಚ್ಚು ಜನರು ಯೋಗವನ್ನು ಮಾಡುತ್ತಿದ್ದಾರೆ, 110 ರಾಷ್ಟ್ರಗಳಿಂದ ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರಗಳ ಮೂಲಕ ರಾಜಯೋಗವನ್ನು ತಿಳಿಸಲಾಗುತ್ತಿದೆ ಎಂದು ಬಿ.ಕೆ. ವೀಣಾ ಬೆಹನ್ ಸಂಚಾಲಕರು ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗೋಕುಲ್ ಸ್ಕಯರ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗದಿನಾಚರಣೆಯಲ್ಲಿ ರಾಜಯೋಗವನ್ನು ಕುರಿತು ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ, ಪ್ರಜಾಪಿತನಾದ ಈಶ್ವರನು ಕೃಪೆಗೆ ರಾಜಯೋಗವನ್ನು ಮಾಡುವ ಮೂಲಕ ನಮ್ಮ ಒಳಗಿನ ಮನಸ್ಸನ್ನು ಶುದ್ದಿಗೊಳಿಸಬೇಕಾಗಿದೆ, ಅದಕ್ಕಾಗಿ ಯೋಗ ಬಹು ಮುಖ್ಯವಾದ ಅಂಶವಾಗಿದೆ, ಇದಕ್ಕೆ ಯಾವುದೇ ಭಾಷೆ, ಜಾತಿ, ಧರ್ಮ, ವರ್ಗ, ವರ್ಣಗಳ ಬೇಧವಿಲ್ಲ ಪ್ರತಿಯೊಬ್ಬರೂ ಸಹ ಸರಳ ಯೋಗದ ಮೂಲಕ ನಮ್ಮ ಮನದ ಮಲೀನವನ್ನು ತೊಳೆದುಕೊಳ್ಳುವ ಮೂಲಕ ಉತ್ತಮ ಚಿಂತನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಯೋಗ್ಯ ವ್ಯಕ್ತಿಗಳಾಗಬಹುದು, ಅದರೆ ಇಂದು ನಾವೆಲ್ಲರೂ ಸಹ ಸರ್ಕಾರ ಕೊಡುವ ಹಲವಾರು ಉಚಿತಗಳನ್ನು ಪಡೆದುಕೊಳ್ಳುತ್ತಿದ್ದೇವೆ ಅದರೆ ಎಷ್ಟು ಸಂತೋಷದಲ್ಲಿ ಇದ್ದೇವೆ ಒಂದು ಕ್ಷಣ ಯೋಚಿಸಿ , ಅದರೆ ರಾಜಯೋಗದಿಂದ ನಾವು ಬಹು ಸಂತಸದಿಂದ, ತೃಪ್ತಿಯಿಂದ ಇರಲು ಸಾಧ್ಯ, ನಾವು ಬರೀ ನೆರಮನೆಯವರ ದು:ಖಕ್ಕೆ ಅಳುವವರಾಗಿದ್ದೇವೆ, ಅದ್ದರಿಂದ ಶರಣರು ಹೇಳುವಂತೆ ನೆರಮನೆಯವರ ದು:ಖಕ್ಕೆ ಅಳುವವರನ್ನು ಮೆಚ್ಚ, ನಿಮ್ಮ ತನುವ ಸಂತೈಸಿಕೊಳ್ಳು, ನಿಮ್ಮ ಮನವ ಸಂತೈಸಿಕೊಳ್ಳಿ ಎನ್ನುವ ಮೂಲಕ ಮೊದಲು ನಮ್ಮ ಆತ್ಮಶುದ್ದಿಯನ್ನು ಮಾಡಿಕೊಂಡಾಗ ನೆರಮನೆಯಾಗಲಿ, ಜಗತ್ತೇ ಶುದ್ದವಾಗುತ್ತದೆ, ಇಂದು ನಾವು ನಮ್ಮ ದೇಶದಲ್ಲಿ ದೇವಸ್ಥಾನಗಳನ್ನು ಕಟ್ಟುತಿದ್ದೇವು, ಅದರೆ ಇಂದು ಪೋಲಿಸ್ ಠಾಣೆಗಳನ್ನು ಕಟ್ಟುತ್ತಿದ್ದೇವೆ ಇದಕ್ಕೆ ಕಾರಣ ನಾವು ಒಬ್ಬರಿಗೆ ಒಬ್ಬರೂ ಭಯದಲ್ಲಿ ಬದುಕುತ್ತಿದ್ದೇವೆ, ಅದ್ದರಿಂದ ನಾವು ದೇವಸ್ಥಾನಕ್ಕೆ ಹೋದಾಗ ಗಂಟೆ ಬಾರಿಸುವುದಾಗಲಿ ಉದುಬತ್ತಿ ಹಚ್ಚುವುದಾಗಲಿ ಪುಷ್ಪ ಸಮರ್ಪಣೆಯಾಗಲಿ ಎಲ್ಲವೂ ಸಹ ವೈಜ್ಞಾನಿಕವಾಗಿವೆ ಅವುಗಳನ್ನು ಸಂಪ್ರದಾಯದ ಹೆಸರಿನಲ್ಲಿ ಸುಮ್ಮನೆ ಬಿಡದೆ ನಮ್ಮ ಮಕ್ಕಳಿಗೆ ತಿಳಿಸಬೇಕು, ಅವರಿಗೆ ಅದರ ಮಹತ್ವ ತಿಳಿದಾಗ ಅವರೇ ಕಾರ್ಯಪ್ರವೃತ್ತರಾಗುತ್ತಾರೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಮನಸ್ಸನ್ನು ಶುದ್ದಗೊಳಿಸಿಕೊಂಡು ರಾಗ, ದ್ವೇಷಗಳಿಂದ ಮುಕ್ತಿಯನ್ನು ಪಡೆಯೋಣ, ಇದಕ್ಕೆ ಬರೀ ಹೊರಗಿನ ಸುಧಾರಣೆಯಲ್ಲಿ ಒಳಗಿನಿಂದ ಸುಧಾರಣೆಯಾಗಬೇಕು, ಅದಕ್ಕೆ ಮನಸ್ಸು ಬಹು ಮುಖ್ಯವಾದುದು, ನಮ್ಮೋಳಗಿನ ಸಕಾರಾತ್ಮಕ ದೃಷ್ಟಿಯೇ ದೀಪೋತ್ಸವ ನಮಗೆ ಬೆಳಕು ಬೇಕೆಂದರೆ ಜ್ಞಾನ, ಧ್ಯಾನದ, ರಾಜಯೋಗದ ಬೆಳಕನ್ನು ಹಚ್ಚಬೇಕಾಗಿದೆ. ಎಂದರು. ಸಿಂಧನೂರಿನ ಬ್ರಹ್ಮಕುಮಾರಿ ಪಾರ್ವತಿ ಅಕ್ಕನವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಅಜಯಮಂದಾಲ್ ಅವರು ಮಾತನಾಡಿ ರಾಜಸ್ಥಾನದಲ್ಲಿ ಕಲಿಯುವ ಸಂದರ್ಭದಲ್ಲೇ ಈಶ್ವರಿ ವಿಶ್ವವಿದ್ಯಾಲಯ ಪರಿಚಯವಾಗಿ ದರ್ಶನವಾಯಿತು, ಸಮಾಜಕ್ಕೆ ಸಮರ್ಪಿರಾದವರು ಬ್ರಹ್ಮಕುಮಾರಿಯವರು ನಮ್ಮ ದೇಶದ ರಾಷ್ಟ್ರಪತಿ ಮುರ್ಮುರವರು ಈಶ್ವರಿಯ ಸಂದೇಶ ಆಲಿಸಿದರು ಪರಿವರ್ತನೆಯಿಂದ ಬದಲಾದವರು ರಾಷ್ಟ್ರಪತಿ ಮುರ್ಮುರವರು, ಈಶ್ವರಿ ವಿಶ್ವವಿದ್ಯಾನಿಲಯಕ್ಕು ತಮಗೂ ಇರುವ ಭಾವನಮೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಗಳೂರು ಕೇಂದ್ರದ ಬ್ರಹ್ಮಕುಮಾರಿ ಭಾರತಿ ಅಕ್ಕನವರು ನಿರೂಪಿಸಿದರು, ಬಿ.ಕೆ. ರಾಜೇಶ್ವರಿ ಅವರು ಸ್ವಾಗತಿಸಿದರು, ಸಮಾರಂಭದಲ್ಲಿ ಜಿಂದಾಲ್ ಕಂಪನಿಯ ಗಣ್ಯರಾದ ಅಜಯಮಂದಾಲ್ ಮಾತನಾಡಿದರು, ಯೋಗ ಗುರು ಶ್ರೀಪಾದ ಜೋಷಿಯವರು ಯೋಗದ ಮಹತ್ವವನ್ನು ತಿಳಿಸಿದರು.
ತಾಲೂಕಿನ ತೋರಣಗಲ್ಲಿನಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಯೋಗದಿನವನ್ನು ಸಂಚಾಲಕರಾದ ಬಿ.ಕೆ. ವೀಣಾ ಬೆಹನ್ ಅವರು ಉದ್ಘಾಟಿಸಿದರು.