ಕುಕನೂರ ಪಟ್ಟಣದಲ್ಲಿ ಆರೋಗ್ಯ ಶಿಬಿರ.ನಿತ್ಯ ಜೀವನದಲ್ಲಿ ಆರೋಗ್ಯದ ಕಾಳಜಿ ಇರಲಿ..
ಸಂಜೆವಾಣಿ ವಾರ್ತೆ
ಕುಕನೂರ ಜೂ.23: ಮನುಷ್ಯ ಎಷ್ಟೇ ಕಾರ್ಯದ ಒತ್ತಡದಲ್ಲಿದ್ದರು ಮೊದಲು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಶ್ರೀಮಠದ ಉಪಾಧ್ಯಕ್ಷ ವೀರಯ್ಯ ಉಳಾಗಡ್ಡಿಮಠ ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಬೆಂಗಳೂರು ಮಹಾನಗರದ ಸಪ್ತಗಿರಿ ಆಸ್ಪತ್ರೆಯ ನೇತೃತ್ವದಲ್ಲಿ ಹಾಗೂ ಶ್ರೀ ಜಗದ್ಗುರು ಅನ್ನದಾನೀಶ್ವರ ಧರ್ಮ ಸಂಸ್ಕೃತಿ ಪ್ರಸಾರ ಸಂಸ್ಥೆ ಯ ಸಹಕಾರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ ಮಾಡಿ ಮಾತನಾಡುತ್ತಾ ರೋಗಗಳಿಗೆ ಶ್ರೀಮಂತ ಬಡವ ಎಂಬ ಭೇದಭಾವ ಇಲ್ಲ ಅವುಗಳು ಎಲ್ಲಾರಿಗೂ ಬರುತ್ತವೆ ಹೊಗುತ್ತವೆ ಆದರೆ ಉತ್ತಮವಾದ ಆರೋಗ್ಯವನ್ನ ಕಾಪಾಡಿಕೊಳುವುದು ಎಲ್ಲಾರ ಜವಾಬ್ದಾರಿ, ಆರೋಗ್ಯವಂತನಾದರೆ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಮತ್ತು ಸಪ್ತಗಿರಿ ಆಸ್ಪತ್ರೆಯವರ ಕಾರ್ಯ ಶ್ಲಾಘನೀಯ ಬಹು ದೂರದಿಂದ ಬಂದು ಇಲ್ಲಿಯ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತೀರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ ಎಂದರು.
ಸಪ್ತಗಿರಿ ಆಸ್ಪತ್ರೆಯ ವೈದ್ಯ ನೀತೀಶ ಚೌದ್ರಿ ಮಾತನಾಡಿ ಉತ್ತರ ಕರ್ನಾಟಕ ಭಾಗದ ಜನರಿಗೆ ಉತ್ತಮವಾದ ಆರೋಗ್ಯ ನೀಡಲು ನಮ್ಮ ಆಸ್ಪತ್ರೆ ಬಹು ದೂರದಿಂದ ಬಂದಿದೆ ಈ ಭಾಗದ ಜನರು ಹೃದಯವಂತರು, ಅತಿ ಹೆಚ್ಚು ರೈತ ಸಮುದಾಯ ಹೊಂದಿರುವ ಭಾಗ ಇದು ಆದ್ದರಿಂದ ಈ ಬಾಗದ ಜನರು ಆರೋಗ್ಯವಂತರಾಗಲು ಉಚಿತ ಸೇವೆಯನ್ನ ನಮ್ಮ ಆಸ್ಪತ್ರೆ ವರ್ಷದಲ್ಲಿ ಎರಡು ಬಾರಿ ಕುಕನೂರ ಪಟ್ಟಣಕ್ಕೆ ಆರೋಗ್ಯ ಸೇವೆ ನೀಡುತ್ತೀದೆ ಎಂದರು.
ಉದ್ಯಮಿ ರವಿ ಜಾಲಿಂದರ ಮಾತನಾಡಿ ವೀರಶೈವ ಮಠಗಳು ಕೇವಲ ಧರ್ಮ ಪ್ರಚಾರ ಮಾಡದೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಉತ್ತಮ ಸೇವೆ ನೀಡುತ್ತೀವೆ, ಭಕ್ತರ ಕಲ್ಯಾಣವೇ ಮಠದ ಕಲ್ಯಾಣ ಎಂಬ ಧ್ಯೇಯ ಹೊಂದಿವೆ ಮತ್ತು ಇಂತಹ ಆರೋಗ್ಯ ಶಿಬಿರಗಳ ಪ್ರಯೋಜನ ಎಲ್ಲಾರು ಪಡೆಯಬೇಕು ಎಂದರು.
ಆರೋಗ್ಯ ಶಿಬಿರದಲ್ಲಿ ಹೃದಯ ಕಾಯಿಲೆ, ನರರೋಗ, ಕಿಡ್ನಿ ಹಾಗೂ ಇತರ ರೋಗಗಳಿಗೆ ಚಿಕಿತ್ಸೆಯನ್ನ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ ನೀತಿಶ ಚೌದ್ರಿ, ಡಾ ಯಶವಂತ, ಡಾ ಸಂದೇಶ, ಡಾ ಹನುಮಂತಯ್ಯ ಮತ್ತು ಸಿಬ್ಬಂದಿಗಳಾದ ಸಂದೀಪ, ಆನಂತಕುಮಾರ ಇದ್ದರು.
ಈ ಸಂದರ್ಭದಲ್ಲಿ ಶ್ರೀಮಠದ ಪೂಜ್ಯ ಮಹಾದೇವ ಸ್ವಾಮೀಜೀ, ವೀರಯ್ಯ ತೋಂಟದಾರ್ಯಮಠ, ಸಂಗಮೇಶ ಕಲ್ಮಠ, ವಿ ಜಿ ಬಳಗೇರಿ, ಮಲ್ಲಪ್ಪ ಬಂಗಾರಿ, ಗದಿಗೆಪ್ಪ ಪವಾಡಶೆಟ್ಟಿ, ಆನಂದ ಮಡಿವಾಳರ, ಚಂದ್ರಶೇಖರಯ್ಯ ಮತ್ತು ಇತರರು ಇದ್ದರು.