ಮಟಕಾ: ಓರ್ವನ ಬಂಧನ
ಕಲಬುರಗಿ,ಜೂ.23-ನಗರದ ಎಪಿಎಂಸಿ ಗೇಟ್ ಹಿಂಭಾಗದ ರಸ್ತೆ ಬದಿಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎಂ.ಬಿ.ನಗರ ಪೊಲೀಸ್ ಠಾಣೆಯ ಮುಖ್ಯಪೇದೆ ಶಿವಾನಂದ, ಸಿಬ್ಬಂದಿಗಳಾದ ಸುರೇಶ, ರಾಜಕುಮಾರ ಅವರು ದಾಳಿ ನಡೆಸಿ ಶಹಾಬಜಾರ ತಾಂಡಾದ ಸಂತೋಷ ನಂದು ರಾಠೋಡ್ (35) ಎಂಬಾತನನ್ನು ಬಂಧಿಸಿ 3,200 ರೂ.ನಗದು, ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.