ಚಕ್ಕಡಿ ಓಟ ಸ್ಪರ್ಧೆ: ಶಿವಕಾಂತಗೆ ಪ್ರಥಮ ಬಹುಮಾನ
ಬಸವಕಲ್ಯಾಣ,ಜೂ.23-ತಾಲೂಕಿನ ಮಲ್ಲಿಕಾರ್ಜುನ ವಾಡಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಶಿವಕಾಂತ ಮಾಣಿಕಪ್ಪ ಪಿನ್ನೆಬಾಯಿ ಪ್ರಥಮ ಬಹುಮಾನ ಪಡೆದಿದ್ದಾರೆ.
ದ್ವಿತೀಯ ಬಹುಮಾನವನ್ನು ಶರಣಪ್ಪ ತಿಪ್ಪಣ್ಣ ಕುರುಮೆ, ತೃತೀಯ ಬಹುಮಾನವನ್ನು ಸುರೇಶ್ ಮಾಣಿಕಪ್ಪ ಪಿನ್ನಬಾಯಿ ಪಡೆದಿದ್ದಾರೆ. ಜೋಡಿ ಎತ್ತುಗಳ ಅಲಂಕಾರಕ್ಕೆ ನಾಗನಾಥ್ ದೊಡ್ಡಪ್ಪ ಪುಣೆ ಬಹುಮಾನಪಡೆದುಕೊಂಡರು.
ರಾಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ನಂದಾಬಾಯಿ ಪ್ರಭು, ಉಪಾಧ್ಯಕ್ಷೆ ಅನಿತಾ ಮಲ್ಲಿಕಾರ್ಜುನ್, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತುಕಾರಾಮ, ಕೃಷ್ಣಪ್ಪ ಪುಣೆ ಕಾರ್ಯಕ್ರಮದ ಸಂಚಾಲಕರಾಗಿದ್ದರು